ಬ್ಯಾಂಕ್ ನಲ್ಲಿ ಸಾಲ ಮಾಡಿದ ವ್ಯಕ್ತಿ ಮೃತಪಟ್ಟರೆ ಯಾರು ಸಾಲ ಕಟ್ಟಬೇಕು

69

ನಮಸ್ಕಾರ ಪ್ರಿಯ ಸ್ನೇಹಿತರೇ, ಕೆಲವೊಮ್ಮೆ ಅನಿವಾರ್ಯ ಬಾರಿ ನಾವು ಬ್ಯಾಂಕ್ ಮೂಲಕ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳುತ್ತೇವೆ. ಸಣ್ಣಪುಟ್ಟ ಸಾಲಗಳನ್ನ ನಾವೇನಾದರೂ ಪಡೆದುಕೊಂಡಿದ್ದರೆ ಅವುಗಳನ್ನ ಮರುಪಾವತಿ ಮಾಡಬಹುದಾಗಿರುತ್ತದೆ. ಕೆಲವೊಮ್ಮೆ ಗೃಹ ಸಾಲ ಅಥವಾ ವಾಹನ ಸಾಲವನ್ನ ತೆಗೆದುಕೊಂಡಿದ್ದರೆ ಅದು ದೀರ್ಘಾವಧಿಯ ಸಾಲವಾಗಿರುತ್ತದೆ.

ದೀರ್ಘಾವಧಿಯಲ್ಲಿ ಸಾಲವನ್ನು ಬ್ಯಾಂಕ್ ನಲ್ಲಿ ಮಾಡಿರುವ ವ್ಯಕ್ತಿ ಅಕಾಲಿಕವಾಗಿ ಏನಾದರೂ ಮರಣ ಹೊಂದಿದ್ದೆ ಆದರೆ ಉಳಿದಿರುವ ಬ್ಯಾಂಕ್ ಸಾಲವನ್ನ ಯಾರು ಮರುಪಾವತಿ ಮಾಡಬೇಕು ಏನುವ ಗೊಂದಲಗಳು ಉಂಟಾಗಿರುತ್ತದೆ. ಬ್ಯಾಂಕ್ ನಲ್ಲಿ ಎರಡು ರೀತಿಯ ಸಾಲವನ್ನು ನೀಡಲಾಗುತ್ತದೆ. ಸೆಕ್ಯೂರ್ಡ್ ಸಾಲ ಅನ್ ಸೆಕ್ಯೂರ್ಡ್ ಸಾಲ. ಗೃಹ ಸಾಲ, ವಾಹನ ಸಾಲ, ಚಿನ್ನದ ಸಾಲ ಸುರಕ್ಷಿತ ಸಾಲದ ಅಡಿಯಲ್ಲಿ ಬರುತ್ತವೆ.

ಈ ಸಾಲವನ್ನ ನಾವು ಪಡೆಯಬೇಕಾದರೆ ನಾವು ಆಸ್ತಿಯ ಪತ್ರವನ್ನು ಅಡವಿರಬೇಕಾಗುತ್ತದೆ. ಅಸುರಕ್ಷಿತ ಸಾಲ, ವೈಯಕ್ತಿಕ ಸಾಲವು ಈ ಸಾಲದ ಅಡಿಯಲ್ಲಿ ಬರುಕೊಂಡಿರುವ ವ್ಯಕ್ತಿ ಅಕಾಲಿಕವಾಗಿ ಏನಾದರೂ ಮರಣ ಹೊಂದಿದ್ದೆ ಆದರೆ, ಆತ ತೆಗೆದುಕೊಂಡಿರುವ ಸಾಲವನ್ನು ಮನೆಯವರೆ ಆ ಸಾಲವನ್ನ ಮರುಪಾವತಿ ಮಾಡಬೇಕು ಎಂದು ಹೇಳುತ್ತದೆ.

ಒಂದು ವೇಳೆ ಮನೆಯವರು ಗೃಹ ಸಾಲವನ್ನ ಕಟ್ಟುವುದಿಲ್ಲ ಎಂದು ಹೇಳಿದರೆ ಆಸ್ತಿ ಪತ್ರವನ್ನು ಮಾರಾಟ ಮಾಡಿ ಬ್ಯಾಂಕುಗಳು ಸಾಲವನ್ನು ಮರುಪಾವತಿ ಮಾಡಿಕೊಳ್ಳುತ್ತವೆ. ವಾಹನ ಸಾಲವನ್ನು ಮಾಡಿರುವ ವ್ಯಕ್ತಿಯೂ ಕೂಡ ಅಕಾಲಿಕವಾಗಿ ಮರಣ ಹೊಂದಿದರೆ ವ್ಯಕ್ತಿಗಳ ಮನೆಗೆ ಹೋಗಿ ಬ್ಯಾಂಕುಗಳು ಸಾಲವನ್ನು ತೀರಿಸಬೇಕು ಎಂದು ಹೇಳುತ್ತವೆ.

ಒಂದು ವೇಳೆ ಸಾಲವನ್ನು ಮರುಪಾವತಿ ಮಾಡದಿದ್ದರೆ ಬ್ಯಾಂಕುಗಳು ಅವರ ವಾಹನವನ್ನು ಮುಟ್ಟುಗೊಲು ಹಾಕಿಕೊಳ್ಳುತ್ತವೆ. ವೈಯಕ್ತಿಕ ಸಾಲವನ್ನ ಮಾಡುವ ವ್ಯಕ್ತಿಗೆ ಯಾವುದೇ ರೀತಿಯ ಅಡಮಾನವನ್ನ ಕೂಡ ಬ್ಯಾಂಕುಗಳು ಹೊಂದಿರುವುದಿಲ್ಲ ಇದು ತುಂಬಾ ರಿಸ್ಕ್ ಆದ ಸಾಲ ಎಂದೇ ಹೇಳಬಹುದು.

ಸಾಲವನ್ನ ಮಾಡಿರುವ ವ್ಯಕ್ತಿಯು ಅಕಾಲಿಕವಾಗಿ ಮರಣ ಹೊಂದಿದರೆ ವೈಯಕ್ತಿಕ ಸಾಲ ಮಾಡಿಕೊಂಡಿರುವುದರಿಂದ ಬ್ಯಾಂಕುಗಳು ಅವರ ಮನೆಯವರಿಗೆ ಹೋಗಿ ಸಾಲ ತೀರಿಸಬೇಕು ಎಂದು ಹೇಳಲು ಸಾಧ್ಯವಿಲ್ಲ. ಇಂತಹ ಖಾತೆ ಗಳನ್ನ ಎನ್‌ಪಿಐಗೆ ಬ್ಯಾಂಕುಗಳು ಸೇರಿಸುತ್ತವೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here