ಜೀವನ್ ಅಕ್ಷಯ ಮತ್ತು ಜೀವನ್ ಶಾಂತಿ ಒಂದು ಸಲ ಡೆಪಾಸಿಟ್ ಮಾಡಿದರೆ ಸಾಕು ಜೀವನ ಪೂರ್ತಿ ಪಿಂಚಣಿ ಬರುತ್ತೆ

82

ನಮಸ್ಕಾರ ಪ್ರಿಯ ಸ್ನೇಹಿತರೇ, ಜೀವನ್ ಅಕ್ಷಯ ಮತ್ತು ಜೀವನ್ ಶಾಂತಿ ಪಾಲಿಸಿ, ಈ ಪಾಲಿಸಿಯಲ್ಲಿ ನೀವು ಒಂದು ಸಲ ಹಣವನ್ನು ಡೆಪಾಸಿಟ್ ಮಾಡಿದರೆ ಸಾಕು ಜೀವನಪೂರ್ತಿ ನೀವು ಪಿಂಚಣಿ ಹಣವನ್ನು ಪಡೆದುಕೊಳ್ಳಬಹುದು. ಈ ಯೋಜನೆ ಅಥವಾ ಪಾಲಿಸಿಯನ್ನ ನೀವು ಮಾಡಬೇಕಾದರೆ ಒಂದು ಸಲ ಮಾತ್ರ ಹಣವನ್ನು ಹೂಡಿಕೆ ಮಾಡಬೇಕು.

ಒಂದು ಬಾರಿ ಹಣವನ್ನು ಹೂಡಿಕೆ ಮಾಡಿರುವುದರಿಂದ ಜೀವನಪೂರ್ತಿ ಪಿಂಚಣಿ ಹಣವನ್ನು ಪಡೆಯಲು ಸಾಧ್ಯ. ಈ ಎರಡು ಪಾಲಿಸಿಯನ್ನ ಮಾಡಿಕೊಳ್ಳಬೇಕು ಎಂದರೆ ಕೆಲವೊಂದಿಷ್ಟು ನಿಯಮಗಳು ಇವೆ. ಆ ನಿಯಮಗಳು ಯಾವುದು ಎಂಬುದನ್ನು ತಿಳಿಯೋಣ.

ನೀವು ಜೀವನ್ ಅಕ್ಷಯ ಪಾಲಿಸಿಯನ್ನ ಮಾಡಿಕೊಳ್ಳುತ್ತೀರಾ ಎಂದರೆ 30 ವರ್ಷದಿಂದ ವಯಸ್ಸು ಆಗಿರುವ ವ್ಯಕ್ತಿಗಳು ಈ ಪಾಲಿಸಿಯನ್ನ ಮಾಡಿಸಬಹುದಾಗಿದೆ. 85 ವರ್ಷದ ಒಳಗಿರುವವರು ಈ ಪಾಲಿಸಿಯನ್ನ ಮಾಡಿಸಬಹುದಾಗಿದೆ. ಜೀವನ ಅಕ್ಷಯ ಪಾಲಿಸಿಯಲ್ಲಿ ನಿಮಗೆ ತಕ್ಷಣವೇ ಪಿಂಚಣಿ ಎಂಬುವುದು ಬರುತ್ತದೆ.

ಇಲ್ಲೂ ಕೂಡ ನೀವು ನಿಮ್ಮ ಹೆಂಡತಿ ಮಕ್ಕಳು ಯಾರನ್ನ ಬೇಕಾದರೂ ಜಾಯಿನ್ ಮಾಡಿಕೊಳ್ಳಬಹುದು. ಇದರಲ್ಲೂ ಕೂಡ ಮೂರು ತಿಂಗಳಾದ ನಂತರ ನೀವು ಸಾಲವನ್ನು ಪಡೆದುಕೊಳ್ಳಬಹುದು. ಈ ಜೀವನ್ ಅಕ್ಷಯ ಪಾಲಿಸಿ ಹತ್ತು ಆಪ್ಷನ್ ಗಳಿರುತ್ತವೆ ಅವುಗಳೇ ಯಾವುದಾದರೂ ಕೂಡ ನೀವು ಸೆಲೆಕ್ಟ್ ಮಾಡಿಕೊಳ್ಳಬಹುದು.

ಈ ಪಾಲಿಸಿ ಕೂಡ ಮೂರು ತಿಂಗಳಾದ ನಂತರ ನಿಮಗೆ ಬೇಡ ಎಂದರೆ ಇದನ್ನು ಬಿಡುವ ಸಾಧ್ಯತೆ ಇರುತ್ತದೆ ಈ ಪಾಲಿಸಿಂದ ಸಾಕಷ್ಟು ರೀತಿಯ ಪ್ರಯೋಜನ ಉಂಟಾಗುತ್ತದೆ ಆದರಿಂದ ನೀವು ಇದರಲ್ಲಿ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯ.

ಜೀವನ್ ಶಾಂತಿ ಪಾಲಿಸಿಯನ್ನು ನೀವೇನಾದರೂ ಪಡೆಯುತ್ತೀರಾ ಎಂದರೆ ಮೂವತ್ತು ವರ್ಷ ವಯಸ್ಸಾಗಿರಬಹುದು ಮತ್ತು 79 ವರ್ಷದ ಒಳಗಿರುವ ವ್ಯಕ್ತಿಗಳು ಈ ಪಾಲಿಸಿಯನ್ನ ಮಾಡಬಹುದಾಗಿದೆ.

ಒಂದರಿಂದ 12 ವರ್ಷಗಳವರೆಗೆ ನೀವು ಪಿಂಚಣಿಯನ್ನು ಸೆಲೆಕ್ಟ್ ಮಾಡಿಕೊಳ್ಳುವ ಆಪ್ಷನ್ಗಳು ಇರುತ್ತದೆ ನೀವು ಅದರಲ್ಲಿ ಎಷ್ಟು ವರ್ಷಗಳಿಗೆ ಪಡೆದುಕೊಂಡಿರುತ್ತೀರೋ ಅದಾದ ನಂತರ ನೀವು ಪಿಂಚಣಿ ಹಣವನ್ನು ಪಡೆಯಬಹುದು. ನೀವು ಈ ಪಾಲಿಸಿಯಲ್ಲಿ ನಿಮ್ಮ ಹೆಂಡತಿ ನಿಮ್ಮ ಮಕ್ಕಳನ್ನ ಈ ಪಾಲಿಸಿಯಲ್ಲಿ ಜಾಯಿನ್ ಮಾಡಿಕೊಳ್ಳಬಹುದಾಗಿದೆ.

ನೀವು ಈ ಪಾಲಿಸಿಯನ್ನ ಮಾಡಿ ಮೂರು ತಿಂಗಳಾದ ನಂತರ ಈ ಪಾಲಿಸಿಂದ ನೀವು ಸಾಲವನ್ನು ಪಡೆದುಕೊಳ್ಳಬಹುದು. ಈ ಪಾಲಿಸಿಯಲ್ಲಿ ಎರಡು ಆಪ್ಷನ್ ಗಳಿದೆ ಅವುಗಳನ್ನು ನೀವು ಮತ್ತಿತರ ಕೆಲಸವನ್ನು ಮಾಡಬಹುದಾಗಿದೆ.

ಈ ಪಾಲಿಸಿಯನ್ನ ತೆಗೆದುಕೊಂಡಿರುತ್ತೀರಿ ನಿಮಗೆ ಏನಾದರೂ ಸಮಸ್ಯೆ ಉಂಟಾಗಿದ್ದರೆ ಅದನ್ನು ಮೂರು ತಿಂಗಳ ಒಳಗೆ ಈ ಪಾಲಿಸಿಯನ್ನ ಬಿಡುವ ಅವಕಾಶ ಇರುತ್ತದೆ. ಈ ಎರಡು ಪಾಲಿಸಿಯಲ್ಲಿ ನಿಮಗೆ ಒಂದು ಬಾರಿ ಮಾತ್ರ ಹೂಡಿಕೆ ಮಾಡಲು ಅವಕಾಶ ಇರುತ್ತದೆ.

LEAVE A REPLY

Please enter your comment!
Please enter your name here