ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

31

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವಂತಹ ವಿವಿಧ ಹುದ್ದೆಗಳಿವೆ ಆ ಹುದ್ದೆಗಳಿಗೆ ನೇಮಕಾತಿಯನ್ನ ನಡೆಸಲಾಗಿದೆ. 4319 ಹುದ್ದೆಗಳಿಗೆ ಆ ಹುದ್ದೆಗಳಿಗೆ ನೀವು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ಗಳ ಮೂಲಕವೇ ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಬೇಕು.

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು 256 ಹುದ್ದೆಗಳಿವೆ ಇದಕ್ಕೆ ಮಾಸಿಕ ವೇತನ 52 ಸಾವಿರದಿಂದ 97 ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ, ಬಿಎಸ್ಸಿ ಪದವಿಯನ್ನು ಪೂರ್ಣಗೊಳಿಸಿರುವವರು ಮತ್ತು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು.

ಸಹಾಯಕ ತೋಟಗಾರಿಕೆ ಅಧಿಕಾರಿಗಳು 1936 ಹುದ್ದೆಗಳಿವೆ ಮಾಸಿಕ ವೇತನ 40,000 ದಿಂದ 78 ವರೆಗೆ ಬಿ ಎಸ್ ಸಿ ಪದವಿಯನ್ನು ಪೂರ್ಣಗೊಳಿಸಿರಬೇಕು. ಪ್ರಥಮ ದರ್ಜೆ ಸಹಾಯಕರು 311 ಹುದ್ದೆಗಳಿವೆ 27 ಸಾವಿರದಿಂದ 52 ಸಾವಿರದವರೆಗೆ ವೇತನ ನೀಡಲಾಗುತ್ತದೆ. ಯಾವುದಾದರೂ ಪದವಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಶೀಘ್ರ ಲಿಪಿಕಾರರು 11 ಹುದ್ದೆ 27 ಸಾವಿರದಿಂದ 52 ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ ಪಿಯುಸಿಯನ್ನ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ದ್ವಿತೀಯ ದರ್ಜೆ ಸಹಾಯಕರು 271 ಹುದ್ದೆ ಮಾಸಿಕ ವೇತನ 21,000 ದಿಂದ 42 ಸಾವಿರದವರೆಗೆ ದ್ವಿತೀಯ ಪಿಯುಸಿ ಪೂರ್ಣಗೊಳಿಸಿರಬೇಕು ದತ್ತಾಂಶ ನಮೋದಕ ಸಹಾಯಕರು 58 ಹುದ್ದೆಗಳು 21 ಸಾವಿರದಿಂದ 42 ಸಾವಿರದವರೆಗೆ ವೇತನ ನೀಡುತ್ತಾರೆ.

ಪಿಯುಸಿಯ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಜೇನು ಕೃಷಿ ಸಹಾಯಕರು 20 ಹುದ್ದೆ 18 ಸಾವಿರದಿಂದ 32 ಸಾವಿರದವರೆಗೆ ವೇತನ ನೀಡಲಾಗುತ್ತದೆ. ಎಸ್ ಎಸ್ ಎಲ್ ಸಿ ಯನ್ನ ಪೂರ್ಣಗೊಳಿಸಿರಬೇಕು. ಆಯ್ಕೆ ಪ್ರಕ್ರಿಯೆ ಈ ಹುದ್ದೆಗಳಿಗೆ ನೇರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಿಮ್ಮನ್ನ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕವನ್ನು ಇನ್ನೂ ಕೂಡ ನಿಗದಿಪಡಿಸಿಲ್ಲ ನಿಗದಿಪಡಿಸಿದ ನಂತರ ಎಲ್ಲರೂ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇಲ್ಲಿ ಅನೇಕ ರೀತಿಯ ಹುದ್ದೆಗಳಿವೆ ಆಯಾ ಹುದ್ದೆಗಳಿಗನುಗುಣವಾಗಿ ನೀವು ಯಾವುದಾದರೂ ಒಂದು ಹುದ್ದೆನ ಆಯ್ಕೆ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

LEAVE A REPLY

Please enter your comment!
Please enter your name here