ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

30

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಹೊರಡಿಸಲಾಗಿದೆ. ಈ ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಬೇಕಾದರೆ ಯಾವುದೇ ರೀತಿಯ ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ ನೇರ ನೇಮಕಾತಿ ಆಗಿರುತ್ತದೆ ಯಾವುದೇ ರೀತಿಯಲ್ಲಿ ಲಿಖಿತ ಪರೀಕ್ಷೆಗಳನ್ನು ಕೂಡ ಮಾಡಲಾಗುವುದಿಲ್ಲ.

ಸಂದರ್ಶನದ ಮೂಲಕ ನಿಮ್ಮನ್ನ ಆಯ್ಕೆ ಮಾಡಿಕೊಳ್ಳಲಾಗುತ್ತದೆ ನೀವು ಕಳಿಸಿದಂತಹ ಅಪ್ಲಿಕೇಶನ್ಗಳ ವೆರಿಫಿಕೇಶನ್ ಆದ ನಂತರ ಕೆಲವೊಂದಿಷ್ಟು ಮಾಹಿತಿಗಳ ಆಧಾರದ ಮೇಲೆ ನಿಮ್ಮನ್ನ ಸಂದರ್ಶನವನ್ನು ಮಾಡಿ ನೇರ ನೇಮಕಾತಿ ಮಾಡಲಾಗುತ್ತದೆ. ಅನೇಕ ರೀತಿಯ ಹುದ್ದೆಗಳಿವೆ ಅವು ಯಾವುದು ಎಂದರೆ ಹಿರಿಯ ಅಡುಗೆ ಮಾಡುವವರು ಎಫ್ ಸಿ ಐ ತರಬೇತಿಯೊಂದಿಗೆ ಪದವಿ ಮತ್ತು ಡಿಪ್ಲೋಮೋಗಳನ್ನ ಪೂರ್ಣಗೊಳಿಸಿರಬೇಕು.

ಸಹಾಯಕ ಅಡುಗೆಯರು, ಹೋಟೆಲ್ ಮ್ಯಾನೇಜ್ಮೆಂಟ್, ತರಬೇತಿಯನ್ನ ಪಡೆದಿರಬೇಕು. ಅಡುಗೆ ಸಹಾಯಕರು ಎಸ್ ಎಸ್ ಎಲ್ ಸಿ ಮತ್ತು ಹೋಟೆಲ್ ಮ್ಯಾನೇಜ್ಮೆಂಟ್ ತರಬೇತಿ ಇರಬೇಕು ಸ್ವಾಗತ ಕಾರರು ಯಾವುದಾದರು ಪದವಿಯನ್ನು ಪೂರ್ಣಗೊಳಿಸಿರಬೇಕು.

ಡಾಟಾ ಎಂಟ್ರಿ ಆಪರೇಟರ್ ಪಿಯುಸಿ ಮತ್ತು ಯಾವುದಾದರೂ ಪದವಿಯನ್ನು ಹೊಂದಿರಬೇಕು ಗಾರ್ಡನರ್ 7ನೇ ತರಗತಿ ರೂಮ್ ಬಾಯ್ 7ನೇ ತರಗತಿ ಹೀಗೆ ನಾನಾ ರೀತಿಯ ಹುದ್ದೆಗಳಿವೆ ಅವುಗಳಿಗೆ ಅನುಗುಣವಾಗಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಒಂದು ಸಾವಿರಕ್ಕೂ ಹೆಚ್ಚು ಉದ್ಯೋಗಗಳಿಗೆ ನೇಮಕಾತಿ ಹೊರಡಿಸಲಾಗಿದೆ.

ಯಾವುದೇ ರೀತಿಯ ಲಿಖಿತ ಪರೀಕ್ಷೆ ಮತ್ತು ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ. 18 ಸಾವಿರದಿಂದ ಮೂವತ್ತೈದು ಸಾವಿರದವರೆಗೆ ವೇತನವನ್ನು ನಿಗದಿ ಪಡಿಸಲಾಗಿದೆ, ಇದು ಖಾಯಂ ಆದಂತ ಉದ್ಯೋಗವಾಗಿದೆ. 21 ವರ್ಷದಿಂದ 35 ವರ್ಷದ ಒಳಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕು.

ಪದವಿ ಪಿಯುಸಿ ಮತ್ತು ಡಿಪ್ಲೋಮಾ ಆದಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಯಾವುದೇ ಅನುಭವ ಹೊಂದಿರಬೇಕು ಎನ್ನುವ ಅವಶ್ಯಕತೆ ಇಲ್ಲ ಆದರೆ ತರಬೇತಿಗಳಿಗ ಅನುಗುಣವಾಗಿ ನಿಮ್ಮನ್ನ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅನೇಕ ಹುದ್ದೆಗಳಿವೆ ಆ ಹುದ್ದೆಗಳಿಗೆ ಅನುಗುಣವಾಗಿ ನೀವು ಅರ್ಜಿಯನ್ನು ಸಲ್ಲಿಸಬೇಕು

ಅಗತ್ಯ ದಾಖಲೆಗಳನ್ನು ಅಧಿಕೃತ ದಿನಾಂಕ ಯಾವುದು ಎಂದರೆ kstdc, ಹೆಡ್ ಆಫೀಸ್ ಯಶವಂತಪುರ ttmc ಬಸ್ ನಿಲ್ದಾಣ ಬೆಂಗಳೂರು ಡಿಸೆಂಬರ್ 31 ನೇ ತಾರೀಖಿನ ಒಳಗಡೆ ಪ್ರತಿಯೊಬ್ಬರೂ ಕೂಡ ಅರ್ಜಿಯನ್ನು ಸಲ್ಲಿಸಬಹುದು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here