ಮಂಡ್ಯದಲ್ಲಿ ಸುಮಲತಾ ವಿರುದ್ಧ ಸೇಡು ತೀರಿಸಿಕೊಳ್ತರ ಕುಮಾರಣ್ಣ

32

ನಮಸ್ಕಾರ ಪ್ರಿಯ ಸ್ನೇಹಿತರೇ, 2019 ಲೋಕಸಭಾ ಚುನಾವಣೆ ಎಂದರೆ ಮಂಡ್ಯ ನೆನಪಿಗೆ ಬರುತ್ತದೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚಾಗಿ ಎಲ್ಲರೂ ಪ್ರಧಾನಿಯ ಕಡೆ ಹೆಚ್ಚು ಗಮನ ಕೊಡುತ್ತಾ ಇದ್ದರೆ, ಕರ್ನಾಟಕದಲ್ಲಿ ಮಂಡ್ಯದ ಕಡೆ ಹೆಚ್ಚು ಗಮನ ಕೊಡುತ್ತಿದ್ದರು, ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ನೇರ ನೇರ ಪೈಪೋಟಿಗೆ ಹಿಡಿದಿದ್ದರು.

JDS V/s BJP

ಕುಮಾರಸ್ವಾಮಿ ಮತ್ತು ಹೆಚ್ ಡಿ ಕೆ ಅವರು ನಿಖಿಲ್ ಕುಮಾರಸ್ವಾಮಿ ಅವರಿಗೆ ಬೆಂಬಲವನ್ನ ಸೂಚಿಸುತ್ತ ಇದ್ದರೆ. ಯಶ್ ಮತ್ತು ದರ್ಶನ್ ಅವರು ಸುಮಲತಾ ಅವರ ಬೆಂಬಲವನ್ನ ನೀಡುತ್ತಿದ್ದರು. ಸುಮಲತಾ ಅಂಬರೀಶ್ ಅವರು ಗೆದ್ದರು ಮತ್ತೊಮ್ಮೆ ಇತಿಹಾಸವನ್ನ ಸೃಷ್ಟಿಸುವ ಸಾಧ್ಯತೆ ಇದೆ.

ಮತ್ತೊಮ್ಮೆ ಕುಮಾರಸ್ವಾಮಿ ಮತ್ತು ಸುಮಲತಾ ಅವರು ಪೈಪೋಟಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಜೆಡಿಎಸ್ ಮತ್ತು ಬಿಜೆಪಿ ನಡುವೆ ಮೈತ್ರಿ ನಡೆದಿದ್ದು, ಯಾವ ಯಾವ ಕ್ಷೇತ್ರಗಳು ಎಂಬುವ ಹಂಚಿಕೆ ಕೂಡ ಈಗಾಗಲೇ ನಡೆದಿದೆ. ಬಿಜೆಪಿಗೆ 24 ಜೆಡಿಎಸ್ ಗೆ ನಾಲ್ಕು ಕ್ಷೇತ್ರವನ್ನು ಬಿಟ್ಟು ಕೊಡಲಾಗಿದೆ

ಕೋಲಾರ ಮಂಡ್ಯ ಹಾಸನ ಮತ್ತು ಮೈಸೂರು ಕೊಡಗು ಕ್ಷೇತ್ರವನ್ನ ಜೆಡಿಎಸ್ ನಾಯಕರು ಕೇಳುತ್ತಿದ್ದಾರೆ ಎನ್ನಲಾಗಿದೆ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿರುವ ಇದೇ ಬೆಳವಣಿಗೆ ಈಗ ಮತ್ತೊಂದು ಹೈ ವೋಲ್ಟೇಜ್ ಕಧನಕ್ಕೆ ಮುನ್ನಡೆ ಬರೆಯುತ್ತಿದೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಗೇಮ್ ಗೆ ಸೈಡ್ ಹೊಡೆಯೋಕೆ ಸಂಸದೆ ಸುಮಲತಾ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ.

ಮಂಡ್ಯದಲ್ಲಿ ಮಾತನಾಡಿರುವ ಸುಮಲತಾ ಮೈತ್ರಿ ಪಕ್ಷಗಳ ವಿರುದ್ಧ ತೊಡೆತಟ್ಟಿದ್ದಾರೆ. ನನ್ನ ಸ್ಪರ್ಧೆಯ ಬಗ್ಗೆ ಹರಡಿರುವ ವದಂತಿಗಳಿಗೆ ಯಾರು ಕಿವಿ ಕೊಡಬೇಡಿ ಎಂದು ಸುಮಲತಾ ತಿಳಿಸಿದ್ದಾರೆ. ಮಾರ್ಚ್ ನಲ್ಲಿ ಮಂಡ್ಯ ಕ್ಷೇತ್ರದ ಚುನಾವಣೆಗೆ ಸ್ಪರ್ಧೆ ಬಗ್ಗೆ ನಿರ್ಧಾರ ಪ್ರಕಟ ಮಾಡುತ್ತೇನೆ.

ಮಂಡ್ಯದಲ್ಲಿ ಅಂಬರೀಶ್ ಅಭಿಮಾನಿಗಳಿದ್ದು ಜನಪರ ಕೆಲಸವನ್ನ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದೇನೆ ಹೊರತು ಬಿಜೆಪಿ ತೀರ್ಮಾನಗಳಿಗೆ ಬಾಗಿಯಾಗಿಲ್ಲ ನಾನಿನ್ನು ಪಕ್ಷೇತರ ಸಂಸದೆ ಎಂದು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಲೋಕಸಭೆ ಸೀಟು ಹಂಚಿಕೆಯ ಬಗ್ಗೆ ಪ್ರಧಾನಿ ಜೊತೆ ಕುಮಾರಣ್ಣನವರು ಚರ್ಚೆಯನ್ನ ಮಾಡಿದ್ದಾರೆ.

ಚುನಾವಣೆಯಲ್ಲಿ ಹಾಸನ ಹಾಗೂ ಮಂಡ್ಯ ಕ್ಷೇತ್ರಗಳು ಜೆಡಿಎಸ್ ಪಾಲಾಗುವ ಸಾಧ್ಯತೆ ಇದೆ. ಹಿರಿಯ ನಾಯಕರಾದ ಸಿಎ ಪುಟ್ಟರಾಜು ಹಾಗೂ ಸುರೇಶ್ ಗೌಡ ಅವರು ಒಲವು ಹೊಂದಿದ್ದಾರೆ.

ಹಾಸನ ಹಾಗೂ ಮಂಡ್ಯದಿಂದ ದೇವೇಗೌಡ ಕುಟುಂಬದ ಸದ್ಯಸರೇ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಚುನಾವಣೆ ಬರುವುದರಿಂದ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here