ನನ್ನನ್ನ ದಾರಿ ತಪ್ಪಿಸಿದ್ರು ಈಗ ಮನಸ್ಸು ಪರಿವರ್ತನೆಯಾಗಿದೆ ಜೈ ಶ್ರೀರಾಮ್ ಎಂದ ಕುಮಾರಸ್ವಾಮಿ

73

ನಮಸ್ಕಾರ ಪ್ರಿಯ ಸ್ನೇಹಿತರೇ, ಕುಮಾರಸ್ವಾಮಿ ಅವರು ಮಾತನಾಡಿರುವ ರೀತಿ ನನ್ನನ್ನು ಎಲ್ಲರೂ ದಾರಿ ತಪ್ಪಿಸಿದ್ದರು. ಆದರೆ ಈಗ ಮನಸ್ಸು ಪರಿವರ್ತನೆಯಾಗಿದೆ ಜೈ ಶ್ರೀ ರಾಮ್ ಎಂದು ಹೇಳಿದ್ದಾರೆ. ಕ್ರೀಡೆಯೋತ್ಸವದ ಸಂದರ್ಭದಲ್ಲಿ ಮಾತನಾಡಿದ ಇವರು ಹಿಂದೂ ಪರಾ ಮುಖಂಡರಾಗಿರುವ ಕಲ್ಲಡ್ಕ ಪ್ರಭಾಕರ್ ಅವರ ತುಂಬಾ ಹೊಗಳಿಕೆಯಿಂದ ಮಾತನಾಡುತ್ತಾರೆ,

ಕುಮಾರಸ್ವಾಮಿಯವರು. ನನ್ನನ್ನ ಎಲ್ಲರೂ ದಾರಿ ತಪ್ಪಿಸಿ ಬಿಟ್ಟಿದ್ದರು ನಾನು ಕೂಡ ತಪ್ಪಾಗಿ ಬಿಟ್ಟಿದ್ದೆ ಆದರೆ ಈಗ ನನ್ನ ಮನಸ್ಸು ಸಂಪೂರ್ಣವಾಗಿ ಪರಿವರ್ತನೆಯಾಗಿದೆ ನಾನು ಸಂಪೂರ್ಣವಾಗಿ ಬದಲಾಗಿದ್ದೇನೆ ನಾನು ಬೇರೆ ಬೇರೆ ಕಾರಣಗಳಿಗೆ ತೊಂದರೆ ಮಾಡಿಕೊಂಡಿದ್ದೆ ಇವರಿಂದ ನಾನು ಟೀಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿದ್ದು ಎಂದು ಹೇಳಿದ್ದಾರೆ.

ಭಾಷಣದ ಕೊನೆಯಲ್ಲಿ ಜೈ ಶ್ರೀರಾಮ್ ಎಂದು ಎಲ್ಲರಲ್ಲೂ ಕೂಡ ಒಂದು ರೀತಿಯ ಅಚ್ಚರಿಗೆ ಕಾರಣವಾಯಿತು. ಕಲ್ಲಡ್ಕ ಪ್ರಭಾಕರ್ ಅವರನ್ನ ಈ ಹಿಂದೆ ಕುಮಾರಸ್ವಾಮಿಯವರು ಸಾಕಷ್ಟು ರೀತಿಯ ಟೀಕೆಯನ್ನು ಮಾಡುತ್ತಿದ್ದರು. ಇವರು ಸಮಾಜವನ್ನು ಒಡೆಯುವಂತಹ ಕೆಲಸವನ್ನ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದರು, ದಕ್ಷಿಣ ಕನ್ನಡವನ್ನು ಸಂಪೂರ್ಣವಾಗಿ ನಾಶ ಮಾಡುತ್ತಿದ್ದಾರೆ,

ಕುಮಾರಸ್ವಾಮಿಯವರು ಯಾವಾಗಲೂ ಕೂಡ ಕಲ್ಲಡ್ಕ ಪ್ರಭಾಕರ್ ಅವರನ್ನ ಬಂಧಿಸಬೇಕು ಎಂದು ಹೇಳುತ್ತಿದ್ದರು. ಆ ರೀತಿ ಟೀಕೆ ಮಾಡುತ್ತಿದ್ದ ಕುಮಾರಸ್ವಾಮಿ ಅವರು ಈಗ ಕಲ್ಲಡ್ಕ ಪ್ರಭಾಕರ್ ಅವರನ್ನ ಹಾಡಿ ಹೊಗಳುತ್ತಿದ್ದಾರೆ. ಇವರು ಈ ರೀತಿ ಹೊಗಳಿಕೆ ಮಾತನಾಡುತ್ತಿರುವುದರಿಂದ ಎಲ್ಲರಿಗೂ ಕೂಡ ಅಚ್ಚರಿಯಾಗಿದೆ.

ಕುಮಾರಸ್ವಾಮಿಯವರು ಹಿಂದುತ್ವದ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ ಎಂಬುದು ಎಲ್ಲರಿಗೂ ಕೂಡ ಮನವರಿಕೆಯಾಗುತ್ತದೆ. ನಾನು ಹಿಂದುತ್ವಕ್ಕಾಗಿ ದತ್ತಮಾಲೆಯನ್ನ ಕೂಡ ಧರಿಸುತ್ತೇನೆ ಎಂದು ಕುಮಾರಸ್ವಾಮಿ ಈ ಹಿಂದಿನ ದಿನಗಳಲ್ಲಿ ಮಾತನಾಡಿದರು. ದತ್ತಮಾಲೆಯ ವಿಷಯದಲ್ಲಿ ಕುಮಾರಸ್ವಾಮಿಯವರು ಸಾಕಷ್ಟು ರೀತಿಯ ಟೀಕೆಯನ್ನು ಮಾಡುತ್ತಿದ್ದರು.

ದತ್ತ ಮಾಲೆ ಧರಿಸುತ್ತೇನೆ ಎಂದು ಹೇಳಿದ್ದಕ್ಕೆ ಎಲ್ಲರಲ್ಲೂ ಕೂಡ ಅಚ್ಚರಿ ಆಗಿತ್ತು ವಿಧಾನಸಭೆ ಚುನಾವಣೆಯಲ್ಲಿ ಫಲಿತಾಂಶ ಬಂದಿರುವುದರಿಂದ ಕುಮಾರಸ್ವಾಮಿ ಅವರು ಸಾಕಷ್ಟು ರೀತಿಯ ಪರಿವರ್ತನೆಯಾಗಿದೆ ಎಂದು ತಿಳಿಸಿದ್ದಾರೆ. ಬಹಳಷ್ಟು ದಿನಗಳ ಹಿಂದೆ ಜೆಡಿಎಸ್ ತುಂಬಾ ಪ್ರಬಲವಾದ ಪಕ್ಷವಾಗಿತ್ತು.

ಬಹುಮತವನ್ನು ಕೂಡ ಪಡೆಯುವಂತಹ ಪಕ್ಷವಾಗಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ಇಂದ ಯಾವುದೇ ರೀತಿಯ ಬೆಳವಣಿಗೆಯನ್ನು ಕೂಡ ಕಾಣಲು ಸಾಧ್ಯವಾಗುತ್ತಿಲ್ಲ. 2023 ರಲ್ಲಿ ತೀರಾ ಕುಸಿತವನ್ನು ಕೂಡ ಕಂಡುಬಂದಿತ್ತು. ಆದರೆ ನನ್ನನ್ನ ದಾರಿ ತಪ್ಪಿಸಿದ್ದರು ಈಗ ನನ್ನ ಮನಸ್ಸು ಪರಿವರ್ತನೆ ಆಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿರುವುದರಿಂದ ಎಲ್ಲರಿಗೂ ಕೂಡ ಅಚ್ಚರಿ ಮನೆ ಮಾಡಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here