ಮಂಡ್ಯ ಜನರ ನಂಬಿಕೆ ಕಳೆದುಕೊಂಡು ಒಂಟಿಯಾದ ಸಂಸದೆ ಸುಮಲತಾ ಅಂಬರೀಶ್?

30
ಮಂಡ್ಯ ಜನರ ನಂಬಿಕೆ ಕಳೆದುಕೊಂಡು ಒಂಟಿಯಾದ ಸಂಸದೆ ಸುಮಲತಾ ಅಂಬರೀಶ್?
ಮಂಡ್ಯ ಜನರ ನಂಬಿಕೆ ಕಳೆದುಕೊಂಡು ಒಂಟಿಯಾದ ಸಂಸದೆ ಸುಮಲತಾ ಅಂಬರೀಶ್?

ಮಂಡ್ಯ ಜನರ ನಂಬಿಕೆ ಕಳೆದುಕೊಂಡು ಒಂಟಿಯಾದ ಸಂಸದೆ ಸುಮಲತಾ ಅಂಬರೀಶ್?

ನಮಸ್ಕಾರ ಪ್ರಿಯ ಸ್ನೇಹಿತರೇ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಆಗಿರುವುದರಿಂದ ಮಂಡ್ಯ ಕ್ಷೇತ್ರದಲ್ಲಿ ಸಾಕಷ್ಟು ರೀತಿಯ ಕುತೂಹಲಕ್ಕೆ ಕಾರಣವಾಗಿದೆ.

ಮಂಡ್ಯ ಜನರ ನಂಬಿಕೆ ಕಳೆದುಕೊಂಡು ಒಂಟಿಯಾದ ಸಂಸದೆ ಸುಮಲತಾ ಅಂಬರೀಶ್?
ಮಂಡ್ಯ ಜನರ ನಂಬಿಕೆ ಕಳೆದುಕೊಂಡು ಒಂಟಿಯಾದ ಸಂಸದೆ ಸುಮಲತಾ ಅಂಬರೀಶ್?

ವಿಧಾನಸಭೆಯಲ್ಲಿ ಪ್ರಚಂಡ ಜಯ ಸಾಧಿಸಿರುವ ಕಾಂಗ್ರೆಸ್ ಸರ್ಕಾರವನ್ನು ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿದೆ. ಹಾಲಿ ಸಂಸದೆ ಸುಮಲತಾ ಅಂಬರೀಷ್ ಮತ್ತೆ ಕಣಕ್ಕೆ ಇಳಿಯುವುದಕ್ಕೆ ಹರಸಾಹಸ ಪಡುತ್ತಿದ್ದಾರೆ.

ಸುಮಲತಾ ಗೆ ಈ ಸಲ ಸಾಲು ಸಾಲು ಸವಾಲುಗಳಿವೆ, ಪಕ್ಷಗಳ ಬೆಂಬಲವೂ ಇಲ್ಲ ನಾಯಕರ ಸಪೋರ್ಟ್ಗಳು ಸಿಗುತ್ತಿಲ್ಲ,

ಅಷ್ಟೇ ಯಾಕೆ ಜನ ಕೂಡ ಸಂಸದೆಯಿಂದ ದೂರ ಸರಿದಿದ್ದಾರೆ, ಹಾಗಾದರೆ ಸುಮಲತಾ ಒಂಟಿಯಾದ್ರಾ, ಅಭಿಮಾನಿಗಳ ಬಲವೂ ಇಲ್ಲ ಕ್ಷೇತ್ರದ ಜನಬೆಂಬಲವು ಸಿಕ್ತಾ ಇಲ್ಲ ಇದಕ್ಕೆ ಕಾರಣ ಏನು ಮೈತ್ರಿಯ ಬಳಿಕ ಬಿಜೆಪಿಯ ಅಂತರ ಕಾಯ್ದುಕೊಳ್ತಾ ಎಂಬುದನ್ನ ತಿಳಿಯೋಣ.

ಬಿಜೆಪಿಗೆ ಬೆಂಬಲವನ್ನ ಸೂಚಿಸಿರುವ ಸುಮಲತಾ ಅವರು ತಮ್ಮ ಕ್ಷೇತ್ರದಲ್ಲಿ ಟಿಕೆಟ್ ಅನ್ನ ಪಡೆಯುವುದಕ್ಕೆ ಅನೇಕ ರೀತಿಯ ಪ್ರಯತ್ನಗಳನ್ನ ನಡೆಸುತ್ತಿದ್ದಾರೆ. ಕ್ಷೇತ್ರದ ಜನರಿಂದ ಅವರು ದೂರವಾಗಿದ್ದಾರೆ ಎಂಬ ಮಾತುಗಳು ಕೇಳು ಬಂದಿದೆ.

ಯಾವಾಗಲೂ ಬೆಂಗಳೂರಿನಲ್ಲಿ ಇರುವ ಅವರು ಕ್ಷೇತ್ರದ ಜನರಿಂದ ದೂರವಾಗಿದ್ದಾರೆ ಹಾಗಾಗಿ ಅವರ ಕ್ಷೇತ್ರವನ್ನು ಉಳಿಸಿಕೊಳ್ಳುವ ಹಠಕ್ಕೆ ಯಾರು ಜೊತೆಯಾಗುತ್ತಿಲ್ಲ ಎಂಬ ಆರೋಪವು ಕೂಡ ಕೇಳಿ ಬರುತ್ತಿವೆ,

ದೆಹಲಿ ಬಿಜೆಪಿ ಎಂದು ಓಡಾಡುವ ಸಂಸದೆ ಕ್ಷೇತ್ರದ ಜನರೊಂದಿಗೆ ಸಂಪರ್ಕವಿಲ್ಲ. ಸ್ವಾಭಿಮಾನದ ಹೆಸರಲ್ಲಿ ಚುನಾವಣೆ ಎದುರಿಸಿದರು ಕಾರ್ಯ ಕರ್ತರ ಪಡೆ ಕಟ್ಟಲಿಲ್ಲ, ಜೊತೆಗೆ ಸ್ಥಳೀಯರ ಎಂದಿಗೂ ಕೂಡ ಉತ್ತಮವಾದ ಬಾಂಧವ್ಯ ಒಡನಾಟವನ್ನ ಕೂಡ ಇಟ್ಟುಕೊಂಡಿಲ್ಲ.

ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಮಂಡ್ಯದ ಜನತೆ ಅವರೊಂದಿಗೆ ಇರುವುದಿಲ್ಲ, ಒಂಟಿಯಾಗಿ ಸುದ್ದಿಗೋಷ್ಠಿಯನ್ನು ನಡೆಸುತ್ತಾರೆ ಎಂಬುವ ಆರೋಪವು ಸ್ಥಳೀಯರು ಮಾಡಿದ್ದಾರೆ.

ಕಳೆದ ಬಾರಿ ಚುನಾವಣೆಯಲ್ಲಿ ನಾನು ಮಂಡ್ಯದಲ್ಲಿ ಇರುತ್ತೇನೆ ಎಂದು ಕೂಡ ಹೇಳಿಕೊಂಡಿದ್ದರು, ಆದರೆ ಗೆದ್ದ ಬಳಿಕ ಅವರು ಕ್ಷೇತ್ರದಲ್ಲಿ ಇರಲಿಲ್ಲ ಬೆಂಗಳೂರಿನಲ್ಲಿ ಹೆಚ್ಚಾಗಿ ಸಮಯವನ್ನು ಕಳೆಯುತ್ತಿದ್ದರು,

ಇದನ್ನು ಕೂಡ ಓದಿ:

ಮೈಲಾರೇಶ್ವರ ಗೊರವ ರಾಜಕೀಯ ಭವಿಷ್ಯ

ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಪ್ರತಿ ಹೆಕ್ಟರಿಗೆ ಎಷ್ಟು ಹಣ

ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರು ಇದಕ್ಕೆ ಕೇಂದ್ರ ಸರ್ಕಾರದಿಂದ ಹೊಸ ಆದೇಶ

ಮಂಡ್ಯದಲ್ಲಿ ಟಿಕೆಟ್ ಗೊಂದಲದ ನಡುವೆ ಸಂಸದೆ ಸುಮಲತಾಗೆ ಹೊಸ ಸವಾಲು

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 16ನೇ ಕಂತಿನ 2000 ಖಾತೆಗೆ ಜಮೆ ನಿಮಗೆ ಬಂದಿದೆಯಾ

ಅಪರೂಪ ಕೊಮ್ಮೆ ಕ್ಷೇತ್ರಕ್ಕೆ ಬಂದು ಕ್ಷೇತ್ರದ ಬಗ್ಗೆ ವಿಚಾರಣೆಯನ್ನು ನಡೆಸುತ್ತಿದ್ದರು, ಮಂಡ್ಯದ ಗಂಡು ಆಗಿರುವ ಅಂಬರೀಶ್ ಗೆ ಮಂಡ್ಯದಲ್ಲಿ ಸಾಕಷ್ಟು ಅಭಿಮಾನಿಗಳು ಇದ್ದರು,

ಅಂಬರೀಶ್ ನಿಧನದ ಬಳಿಕ ಸುಮಲತಾ ಜೊತೆಗಿದ್ದ ಅಭಿಮಾನಿಗಳು ಈಗ ಜೊತೆಗಿಲ್ಲ, ಅಭಿಮಾನಿಗಳೇ ಇರಲಿ ಅಂಬರೀಶ್ ಅವರ ಜೊತೆಗೆ ಗುರುತಿಸಿಕೊಂಡಿದ್ದ ಕಲಾವಿದರು ಕೂಡ ಸುಮಲತಾ ಅವರ ಜೊತೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ,

ಮಂಡ್ಯ ಜನರ ನಂಬಿಕೆ ಕಳೆದುಕೊಂಡು ಒಂಟಿಯಾದ ಸಂಸದೆ ಸುಮಲತಾ ಅಂಬರೀಶ್?
ಮಂಡ್ಯ ಜನರ ನಂಬಿಕೆ ಕಳೆದುಕೊಂಡು ಒಂಟಿಯಾದ ಸಂಸದೆ ಸುಮಲತಾ ಅಂಬರೀಶ್?

ನಟ ದರ್ಶನ್ ರಾಕ್ ಲೈನ್ ವೆಂಕಟೇಶ್ ಅವರು ಮಾತ್ರ ಆಗಾಗ ಒಡನಾಟದಲ್ಲಿ ಹೊಂದಿರುತ್ತಾರೆ. ಈ ಬಾರಿ ಚುನಾವಣೆಗೆ ನಿಂತರೆ ಪ್ರಚಾರಕ್ಕೆ ಬರುವುದು ಅನುಮಾನ ಎಂದು ಹೇಳುತ್ತಾರೆ.

ಮಂಡ್ಯದಲ್ಲಿ ನೆಲೆಸಿದ ಬರೀ ಸಂದರ್ಶನಗಳಷ್ಟೇ ಮಾಡಿ ಸುಮ್ಮನಾಗುತ್ತಿರುವ ಸಂಸದೆ, ಸುಮಲತಾ ಅವರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದು

ಕೂರುವ ಅಭಿಮಾನಿ ಅಥವಾ ಕಾರ್ಯಕರ್ತರ ಬಳಗ ಇಲ್ಲ ಗಟ್ಟಿ ಧ್ವನಿಯಲ್ಲಿ ಬಿಜೆಪಿ ಬಳಿ ಟಿಕೆಟ್ ಕೇಳುತ್ತಿಲ್ಲ, 2019 ರಲ್ಲಿ ಸುಮಲತಾ ಅವರ ಗೆಲುವಿಗೆ ಸಾಕಷ್ಟು ರೀತಿಯ ಕಾರಣಗಳಿದ್ದು ಆದರೆ ಮಂಡ್ಯದ ಜನರ ನಂಬಿಕೆಯನ್ನು ಕಳೆದುಕೊಂಡು ಒಂಟಿಯಾಗಿ ಹೇಗೆ ಚುನಾವಣೆ ಎದುರಿಸುತ್ತಾರೆ ಟಿಕೆಟ್ ಪಡೆಯುತ್ತಾರೆ ಎಂಬುವ ಕುತೂಹಲಕಾರಿ ಸಂಗತಿಯಾಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here