MHC ಯಲ್ಲಿ ಖಾಲಿ ಇರುವ ಹುದ್ದೆಗಳ ಹೊಸ ಅಧಿಸೂಚನೆ ಪ್ರಕಟ.
ನಮಸ್ಕಾರ ಪ್ರಿಯ ಸ್ನೇಹಿತರೇ, MHC ಯಲ್ಲಿ ಖಾಲಿ ಇರುವಂತಹ ಅನೇಕ ರೀತಿಯ ಹುದ್ದೆಗಳಿಗೆ ಹೊಸ ಅಧಿ ಸೂಚನೆ ಪ್ರಕಟ ಮಾಡಲಾಗಿದೆ. ಆಫೀಸ್ ಅಸಿಸ್ಟೆಂಟ್ ಹುದ್ದೆ ಗಳಿಗೆ ನೇಮಕಾತಿ ಹೊರಡಿಸಲಾಗಿದ್ದು 2,329 ಹುದ್ದೆಗಳ ನೇಮಕಾತಿ.
ಈ ಹುದ್ದೆಗಳಿಗೆ ಎಂಟನೇ ತರಗತಿ ಮತ್ತು ಹತ್ತನೇ ತರಗತಿ ಪೂರ್ಣಗೊಳಿಸಿರುವಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 15 ಸಾವಿರ ದಿಂದ 71 ಸಾವಿರದ ವರೆಗೆ ಈ ಹುದ್ದೆಗಳಿಗೆ ನಿಮಗೆ ವೇತನವನ್ನು ನೀಡಲಾಗುತ್ತದೆ.
ಈ ಹುದ್ದೆಗಳಿಗೆ ನೀವು ಆನ್ಲೈನ್ ಗಳ ಮೂಲಕವೇ ಅರ್ಜಿ ಸಲ್ಲಿಸಬೇಕು, ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸರ್ಕಾರಿ ಉದ್ಯೋಗಗಳು ಮತ್ತು ಖಾಯಂ ಆದಂಥಹ ಉದ್ಯೋಗ ಇದಾಗಿದೆ.
ಯಾವ ಯಾವ ಹುದ್ದೆಗಳಿವೆ ಎಂದರೆ ಬರಹಗಾರರು, ಚಾಲಕ, ಜೆರಾಕ್ಸ್ ಆಪರೇಟರ್, ಕಚೇರಿ ಸಹಾಯಕರು, ಪರೀಕ್ಷಕರು, ಹಿರಿಯ ದಂಡಾಧಿಕಾರಿಗಳು, ಜೂನಿಯರ್ ದಂಡಾಧಿಕಾರಿಗಳು ಹೀಗೆ ಅನೇಕ ರೀತಿಯ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬಹುದಾಗಿದೆ.
ಆಯಾ ಹುದ್ದೆಗಳಿಗೆ ಅನುಗುಣವಾಗಿ ವೇತನದಲ್ಲಿ ವ್ಯತ್ಯಾಸ ಎಂಬುದು ಇರುತ್ತದೆ. 18 ರಿಂದ 32 ವರ್ಷದ ಒಳಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ವಯಸ್ಸಿನ ಸಡಲಿಕ್ಕೆ ಕೂಡ ನೀಡಲಾಗುತ್ತದೆ. ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷವನ್ನು ನಿಗದಿಪಡಿಸಲಾಗಿದೆ.
ಇದನ್ನು ಕೂಡ ಓದಿ:
ಚಿನ್ನ ಖರೀದಿಸುವವರಿಗೆ ಇದು ಉತ್ತಮ ಅವಕಾಶ
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಿಡುಗಡೆ
ಕನ್ನಡಿಗ ರಾಹುಲ್ ಕಣಕ್ಕಿಳಿದರೆ ಎಲ್ ಎಸ್ ಜಿ ತಂಡವೇ ಬ್ಯಾನ್ ಆಗುತ್ತಾ?
ಎಲ್ಲೂ ಸಾಲ ಸಿಗುತ್ತಿಲ್ಲ ಹಾಗಾದರೆ ಇಲ್ಲಿ ಬನ್ನಿ ನಿಮಗೆ ಒಂದು ಲಕ್ಷ ಸಾಲ
ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಅರ್ಜಿ ಶುಲ್ಕ ಕೂಡ ನಿಗದಿಪಡಿಸಲಾಗಿದೆ. ಹಿಂದುಳಿದ ವರ್ಗದವರಿಗೆ 500 ರೂಪಾಯಿ ಅರ್ಜಿ ಶುಲ್ಕ, ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ ನೀವು ಬ್ಯಾಂಕುಗಳಿಗೆ ಹೋಗಿ ಈ ಅರ್ಜಿಯನ್ನು ಪಾವತಿಸಬೇಕು
ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆಗಳ ಆಧಾರದ ಮೇಲೆ ಕೌಶಲ್ಯ ಪರೀಕ್ಷೆ, ಸಂದರ್ಶನದ ಮೂಲಕ ಈ ಹುದ್ದೆಗಳಿಗೆ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ.
ಈ ಹುದ್ದೆಗಳಲ್ಲಿ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಅಧಿಕೃತವಾದ ವೆಬ್ಸೈಟ್ ಯಾವುದು mhc. tn. gov. in ಈ ವೆಬ್ ಸೈಟ್ಗಳಿಗೆ ಭೇಟಿ ನೀಡಿರುವ ಅರ್ಜಿಯನ್ನು ಸಲ್ಲಿಸಬಹುದು.
27ನೇ ತಾರೀಕು ಕೊನೆಯ ದಿನಾಂಕ ವಾಗಿದೆ ಮೇ ತಿಂಗಳು ಈ ದಿನಾಂಕದೊಳಗೆ ನೀವು ಅರ್ಜಿಯನ್ನು ಸಲ್ಲಿಸಿ. ಈಗಾಗಲೇ ಅರ್ಜಿ ಸಲ್ಲಿಕೆ ಕೂಡ ಆರಂಭವಾಗಿದೆ, ಅಗತ್ಯ ದಾಖಲೆಗಳ ಮೂಲಕ ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.