ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಹೊಸ ನಿಯಮ.
ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತು. ಈ ಗ್ಯಾರಂಟಿ ಯೋಜನೆಯ ಸೌಲಭ್ಯವನ್ನ ಎಲ್ಲಾ ಫಲಾನುಭವಿಗಳು ಕೂಡ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಸಾಕಷ್ಟು ರೀತಿಯ ಪ್ರಯೋಜನ ಪಡೆದಿದ್ದಾರೆ.
ಅನ್ನಭಾಗ್ಯ ಯೋಜನೆಯ ಸೌಲಭ್ಯವನ್ನು ಅನೇಕ ಪಡಿತರದಾರರು ಪಡೆಯುತ್ತಾ ಇದ್ದಾರೆ. ಮೂರು ತಿಂಗಳಿಂದ ಯಾವುದೇ ರೀತಿಯ ಅನ್ನಭಾಗ್ಯ ಯೋಜನೆಯ ಹಣ ಎಂಬುದು ಜಮಾ ಆಗಿಲ್ಲ, ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ 5 ಕೆಜಿ ಅಕ್ಕಿ ಮತ್ತು ಐದು ಕೆಜಿ ಅಕ್ಕಿಯ ಬದಲಾಗಿ ಹಣವನ್ನ ನೇರವಾಗಿ ಡಿಬಿಟಿಯ ಮೂಲಕ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
ಇನ್ನು ಮುಂದಿನ ದಿನಗಳಲ್ಲಿ ಅನ್ನ ಭಾಗ್ಯ ಯೋಜನೆ ಹಣ ಎಂಬುದು ಜಮಾ ಆಗುತ್ತದೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಂಬಂಧಿಸಿದಂತೆ ಏನಾದರೂ ದೋಷಗಳಿದ್ದರೆ ಅದನ್ನ ಸರಿಪಡಿಸಬೇಕು ಎಂಬುವುದು ಸಚಿವರ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ. ಮೂರು ತಿಂಗಳಿಂದ ಕೆಲವೊಂದು ಇಷ್ಟು ಅನ್ನಭಾಗ್ಯ ಯೋಜನೆಯ ಹಣ ಎಂಬುದು ಜಮಾ ಆಗಿಲ್ಲ. ಕೆಲವೊಂದಿಷ್ಟು ಜನ ಅನರ್ಹರಾಗಿದ್ದಾರೆ.
ಸರಿಯಾಗಿ ಪಡಿತರವನ್ನು ಫಲಾನುಭವಿಗಳಿಗೆ ವಿತರಣೆ ಮಾಡಬೇಕು. ಯಾವೆಲ್ಲ ಆಹಾರ ಪದಾರ್ಥಗಳನ್ನು ನೀಡುತ್ತೇವೆ ಅವೆಲ್ಲ ಗುಣಮಟ್ಟದಿಂದ ಇರಬೇಕು ಎಂಬುದಾಗಿ ಸರ್ಕಾರ ಆದೇಶವನ್ನು ಹೊರಡಿಸಿದೆ. ಆಹಾರದ ಗುಣಮಟ್ಟವನ್ನ ಪರಿಶೀಲನೆ ಮಾಡಿ ವಿತರಣೆ ಮಾಡಬೇಕು ಮತ್ತು ಪಡಿತರವನ್ನು ನೀಡುವ ಸ್ಥಳದಲ್ಲಿ ಸ್ವಚ್ಛತೆಯನ್ನ ಕಾಪಾಡಿಕೊಳ್ಳಬೇಕು.
ಕೆಲವೊಂದಿಷ್ಟು ಫಲಾನುಭವಿಗಳು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡದೇ ಇರುವುದರಿಂದ ಅಂತವರ ಖಾತೆಗೆ ಈ ಹಣ ಎಂಬುದು ಜಮಾ ಆಗಿಲ್ಲ.
ತಾಂತ್ರಿಕ ಸಮಸ್ಯೆಗಳು ಈ ಕೆ ವೈಸಿ ಮಾಡದೇ ಇರುವುದು, ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳದೆ ಇರುವುದು, ಹೆಸರು ಬದಲಾವಣೆ ಮಾಡಿಕೊಳ್ಳದೆ ಮನೆಯ ಮಾಲೀಕರ ಹೆಸರುಗಳಲ್ಲಿ ತಿದ್ದುಪಡಿಯಾಗಿರುವುದು, ಈ ರೀತಿಯ ಅನೇಕ ಸಮಸ್ಯೆಗಳಿಂದ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆಯ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಮಾಹಿತಿ ಆಧಾರ:
ವಿಜಯಲಕ್ಷ್ಮಿ ದರ್ಶನ್ ಮನ ಕುಲುಕುವ ಕಣ್ಣೀರು ಕಥೆ
ಬಿಪಿಎಲ್ ಕಾರ್ಡ್ ಗಳು ರದ್ದತಿ ಆಗುವ ಸಾಧ್ಯತೆ ಇದೆ?
ಟಿವಿ ವ್ಯವಸ್ಥೆಯು ಇಲ್ಲ ಸಾಮಾನ್ಯ ಕೈದಿಯಂತೆ ಜೈಲು ಉಟವನ್ನ ಮಾಡಿದರು
ವಾಹನ ಸವಾರರಿಗೆ ಎರಡು ಹೊಸ ನಿಯಮ ಜಾರಿ
11ನೇ ಕಂತಿನ ಹಣ ಪಡೆಯಬೇಕು ಅಂದರೆ ಈ ಕೆಲಸ ಕಡ್ಡಾಯ
ಅನ್ನಭಾಗ್ಯ ಯೋಜನೆಯ ಹಣದಿಂದಾಗಿ ಅನೇಕ ಜನ ಫಲಾನುಭವಿಗಳು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಆಹಾರ ಮತ್ತು ನಾಗರಿಕ ಇಲಾಖೆಯ ಪೂರೈಕೆ ಮಾಡುವ ಇಲಾಖೆಯಿಂದ ಕೆಲವೊಂದಿಷ್ಟು ಫಲಾನುಭವಿಗಳಿಗೆ ಇದರ ಬಗ್ಗೆ ಅರಿವು ಇರುವುದಿಲ್ಲ,
ಅಂತವರಿಗೆ ಅನ್ನ ಭಾಗ್ಯ ಯೋಜನೆ, ಹಣವನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಆದರೆ ಎಲ್ಲಾ ಫಲಾನುಭವಿಗಳಿಗೂ ಕೂಡ ಅನ್ನಭಾಗ್ಯ ಯೋಜನೆಯ ಹಣ ಎಂಬುದು ಜಮಾ ಮಾಡಬೇಕು ಎನ್ನುವ ಕಾರಣಕ್ಕಾಗಿ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.
ಇನ್ನು ಮುಂದಿನ ದಿನಗಳಲ್ಲಿ ಅನ್ನಭಾಗ್ಯ ಯೋಜನೆಯ ಹಣವನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಈ ಹಣ ಎಂಬುದು ಜಮಾ ಮಾಡುತ್ತಾರೆ ಎಂಬುದಾಗಿ ಸೂಚಿಸಲಾಗಿದೆ, ಇದು ಸರ್ಕಾರದ ಕಡೆಯಿಂದ ಬಂದಿರುವ ಮಾಹಿತಿಯಾಗಿದೆ.