ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಉದ್ಯೋಗಿನಿ ಯೋಜನೆ

39

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಅನೇಕ ರೀತಿಯ ಹೊಸ ಹೊಸ ಯೋಜನೆಗಳನ್ನಾ ಜಾರಿಗೆ ತರುತ್ತ ಇದೆ ಅದರಲ್ಲಿ ಈ ಉದ್ಯೋಗಿನಿ ಯೋಜನೆಯ ಕೂಡ ಒಂದಾಗಿದೆ ಈ ಯೋಜನೆಯಿಂದಾಗಿ ಪ್ರತಿಯೊಬ್ಬ ಮಹಿಳೆಯರು ಕೂಡ ಈ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಈ ಯೋಜನೆಯಿಂದಾಗಿ ಮಹಿಳೆಯರು ಸ್ವಂತವಾಗಿ ಉದ್ಯೋಗ ಮಾಡುವುದಕ್ಕಾಗಿ ಮೂರು ಲಕ್ಷ ಹಣವನ್ನು ನೀಡಲಾಗುತ್ತದೆ.

90 ಸಾವಿರ ಸಬ್ಸಿಡಿಯ ರೂಪದಲ್ಲಿ ಉಚಿತವಾಗಿ ನೀಡಲಾಗುತ್ತದೆ. ಉಳಿದ ಹಣವನ್ನು ಸಾಲವಾಗಿ ಸರ್ಕಾರಕ್ಕೆ ಮರುಪಾವತಿ ಮಾಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮಹಿಳೆಯರಿಗೆ 1,20,000 ಹಣವನ್ನು ಪಡೆಯಲು ಸಾಧ್ಯವಾಗುತ್ತದೆ. ಉಳಿದ ಹಣವನ್ನು ಮಾತ್ರ ನೀವು ಸರ್ಕಾರಕ್ಕೆ ಮರುಪಾವತಿ ಮಾಡಬೇಕು

ಮಹಿಳೆಯರಿಗಾಗಿಯೇ ಜಾರಿಗೆ ತಂದ ಯೋಜನೆಯಾಗಿದೆ ಮಹಿಳೆಯರು ಸ್ವಂತವಾಗಿ ಉದ್ಯೋಗವನ್ನು ಮಾಡಬೇಕು ಎನ್ನುವ ಉದ್ದೇಶದಿಂದಾಗಿ ಸರ್ಕಾರವು ಈ ರೀತಿಯ ಕ್ರಮವನ್ನು ಕೈಗೊಂಡು ಈ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಾ ಇದೆ ಈ ಯೋಜನೆ ಸೌಲಭ್ಯವನ್ನು ಪ್ರತಿಯೊಬ್ಬ ಮಹಿಳೆಯರು ಕೂಡ ಪಡೆದುಕೊಳ್ಳಬೇಕು ಅಗತ್ಯ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತದೆ.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರು ಈ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮಹಿಳೆಯರಿಗಾಗಿ ಶಕ್ತಿ ಯೋಜನೆ ಗೃಹಲಕ್ಷ್ಮಿ ಯೋಜನೆ ಹೀಗೆ ನಾನಾ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯ ಮೂಲಕ ಹೊಲಿಗೆ ತಯಾರಿಸುವುದು ಅಥವಾ ಹೊಲಿಗೆ ತರಬೇತಿ ನೀಡುವುದು

ಅಥವಾ ಯಾವುದಾದರೂ ಸಣ್ಣಪುಟ್ಟ ಕೆಲಸ ಕಾರ್ಯಗಳು ಗುಡಿ ಕೈಗಾರಿಕೆ ಸಣ್ಣ ಕೈಗಾರಿಕೆ ಚಮ್ಮಾರಿಗೆ ಹೀಗೆ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಧನಶ್ರೀ ಯೋಜನೆ, ಚೇತನ್ ಯೋಜನೆ ಈ ಯೋಜನೆಯ ಮೂಲಕವೂ ಕೂಡ ಸರ್ಕಾರವು ಹಣವನ್ನು ನೀಡಲಾಗುತ್ತದೆ.

ಉದ್ಯೋಗಿನಿ ಯೋಜನೆಯ ಮೂಲಕ ಮಹಿಳೆಯರು ಸ್ವಂತವಾಗಿ ಉದ್ಯೋಗ ವ್ಯಾಪಾರ ವ್ಯವಹಾರವನ್ನು ಮಾಡಿ ಆರ್ಥಿಕವಾಗಿ ತಮ್ಮನ್ನು ತಾವು ಬಲಿಷ್ಠರಾಗಿಸಬೇಕು. ಆರ್ಥಿಕವಾಗಿ ಯಾರ ಮೇಲೂ ಕೂಡ ಅವಲಂಬನೆ ಆಗಿರಬಾರದು ತಮ್ಮನ್ನೇ ಅವಲಂಬಿಸಿಕೊಂಡಿರಬೇಕು ಎನ್ನುವ ಉದ್ದೇಶದಿಂದಾಗಿ ಈ ರೀತಿಯ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಆದರಿಂದ ಪ್ರತಿಯೊಬ್ಬ ಮಹಿಳೆಯರು ಕೂಡ ಅಗತ್ಯ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸಿ, ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here