ಯಾವುದೇ ಪರೀಕ್ಷೆ ಇಲ್ಲ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

48

ನಮಸ್ಕಾರ ಪ್ರಿಯ ಸ್ನೇಹಿತರೇ, ಯಾವುದೇ ಪರೀಕ್ಷೆ ಇಲ್ಲದೆ ಅಂಚೆ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಆದಿ ಸೂಚನೆ ಪ್ರಕಟ ಮಾಡಿದ್ದಾರೆ. ಈ ಹುದ್ದೆಗೆ ಸಂಬಂಧಿಸಿದಂತೆ ಕರ್ನಾಟಕದ ಎಲ್ಲಾ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 2024ರ ಹೊಸ ಅಧಿಸೂಚನೆಯಾಗಿದೆ. ದೈಹಿಕ ಪರೀಕ್ಷೆ ಮತ್ತು ಯಾವುದೇ ರೀತಿಯಲ್ಲಿ ಲಿಖಿತ ಪರೀಕ್ಷೆ ಎಂಬುದು ಕೂಡ ಈ ಹುದ್ದೆಗೆ ಇರುವುದಿಲ್ಲ. ಸಂದರ್ಶನದ ಮೂಲಕ ನಿಮ್ಮನ್ನ ಈ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

15ನೇ ತಾರೀಕು ಡಿಸೆಂಬರ್ ನಲ್ಲಿ ಈ ಹುದ್ದೆಗೆ ಅಧಿಸೂಚನೆ ಪ್ರಕಟ ಮಾಡಿದ್ದಾರೆ ನಾಲ್ಕು ಜನವರಿ ಕೊನೆಯ ದಿನಾಂಕವಾಗಿದೆ ಈ ದಿನಾಂಕದೊಳಗೆ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 18 ವರ್ಷದಿಂದ 38 ವರ್ಷದ ಒಳಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದು

ವಯಸ್ಸಿನ ಸಡಿಲಿಕ್ಕೆ ಕೂಡ ನೀಡಲಾಗಿದೆ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಅಭ್ಯರ್ಥಿಗಳಿಗೆ ಐದು ವರ್ಷ ನಿಗದಿಪಡಿಸಲಾಗಿದೆ. ಇಂಡಿಯನ್ ಪೋಸ್ಟ್ ಪೇಮೆಂಟ್ ಆಫ್ ಬ್ಯಾಂಕ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳಾಗಿದೆ ಇದು ಬ್ಯಾಂಕಿಗೆ ಸಂಬಂಧಿಸಿದ ಬ್ಯಾಂಕ್ ವ್ಯವಹಾರವಾಗಿರುತ್ತದೆ ವಿವಿಧ ರೀತಿಯ ಹುದ್ದೆಗಳು ಖಾಲಿ ಇವೆ ಆ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬಹುದು

ಉದ್ಯೋಗ ಮಾಡುವ ಸ್ಥಳ ದೆಹಲಿ ಮತ್ತು ನವದೆಹಲಿ ಗಳಲ್ಲಿ ನೀವು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಯಾವ ಯಾವ ಹುದ್ದೆಗಳು ಎಂದರೆ ಜನರಲ್ ಮ್ಯಾನೇಜರ್ ಚೀಫ್ ಫೈನಾನ್ಸ್ ಆಫೀಸರ್ ಹೀಗೆ ಹುದ್ದೆಗಳಿವೆ, ಈ ಹುದ್ದೆಗಳಿಗೆ ನೀವು ಆನ್ಲೈನ್ ಗಳ ಮೂಲಕ ಅರ್ಜಿಯನ್ನ ಸಲ್ಲಿಸಬೇಕು ನಾಲ್ಕು ಜನವರಿ ಕೊನೆಯ ದಿನಾಂಕವಾಗಿದೆ ಈ ದಿನಾಂಕದೊಳಗೆ ನೀವು ಅರ್ಜಿಯನ್ನು ಸಲ್ಲಿಸಿ.

ಅಧಿಕೃತವಾದ ವೆಬ್ಸೈಟ್ ಅದು ಯಾವುದು www.ippbonline.com ಐಸಿಎಸ್ ನಿಂದ ಚಾರ್ಟೆಡ್ ಅಕೌಂಟೆಂಟ್ ಉತ್ತೀರ್ಣರಾಗಿರಬೇಕು ಮತ್ತು ವಿಶ್ವವಿದ್ಯಾಲಯದಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು.

1 ಲಕ್ಷದಿಂದ ಒಂದು ಲಕ್ಷದ 29 ಸಾವಿರದವರೆಗೆ ವೇತನವನ್ನು ನಿಗದಿಪಡಿಸಲಾಗುತ್ತದೆ. ಸಂದರ್ಶನದ ಮೂಲಕ ನಿಮ್ಮನ್ನು ಈ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಶುಲ್ಕ ಕೂಡ ಇರುತ್ತದೆ ನೀವು ಜನವರಿ 4ನೇ ತಾರೀಖಿನವರೆಗೆ ಅರ್ಜಿಯನ್ನು ಸಲ್ಲಿಸಿ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here