ಪಹಣಿ ಪಟ್ಟ ಕಾಲಂ ಪಟ್ಟ ಸರ್ಕಾರಿ ಇನಾಮ್ ಖಾಸಗಿ ಶರ್ತು ಆರ್ ಟಿ ಸಿ ಕರ್ನಾಟಕ.

86

ನಮಸ್ಕಾರ ಪ್ರಿಯ ಸ್ನೇಹಿತರೇ, ಜಮೀನನ್ನ ಹೊಂದಿರುವವರು ಮತ್ತು ಜಮೀನನ್ನು ಖರೀದಿ ಮಾಡಬೇಕು ಅಂದುಕೊಂಡಿರುವವರು ಜಮೀನಿನ ಮುಖ್ಯ ದಾಖಲೆಯೇ ಪಹಣಿ ಪಟ್ಟ, ಜಮೀನು ಹೇಗೆ ಬಂತು ಯಾವ ಮೂಲದಿಂದ ಬಂತು ಎಂಬುದನ್ನು ತಿಳಿಯುವುದಕ್ಕೆ ಈ ಪಹಣಿ ಕಲಾಂ ಪಟ್ಟ ಎಂಬುದು ತುಂಬಾ ಮುಖ್ಯವಾಗಿರುತ್ತದೆ.

ಪಹಣಿ ಕಾಲಂ 6 ರಲ್ಲಿ ಯಾವ ಪಟ್ಟ ಇದೆ ಎಂಬುದನ್ನು ನಾವು ತಿಳಿದುಕೊಳ್ಳಲೇಬೇಕು. ಕಾಲಂ ಆರು ಪಟ್ಟ ಎಂದರೆ ಜಮೀನಿನ ಮೂಲ ಯಾವ ಮೂಲದಿಂದ ನಿಮಗೆ ಜಮೀನು ಎಂಬುದು ಹೇಗೆ ದೊರಕಿದೆ ಎಂಬುದು ಒಟ್ಟಾರೆಯಾಗಿ ಜಮೀನು ಯಾರದ್ದು ಎಂಬುದನ್ನು ತೋರಿಸುವುದೇ ಪಟ್ಟ ಆಗಿದೆ.

ಪಹಣಿಯ ಪಟ್ಟ ಕಾಲಂನಲ್ಲಿ ಯಾವ ಯಾವ ವರ್ಗಗಳು ಇರುತ್ತದೆ ಎಂದರೆ ಸರ್ಕಾರಿ, ಸರ್ಕಾರ, ಖಾಸಗಿ, ಪಟ್ಟ ಇನಾಮು ಗಣಿ ಮತ್ತು ಹಳೆ ಮತ್ತು ಹೊಸ ಶರ್ತು. ಇವುಗಳು ಯಾಕೆ ಪಟ್ಟಾ ಕಾಲಮ್‌ನಲ್ಲಿ ಇರುತ್ತದೆ ಎಂಬುದನ್ನು ತಿಳಿಯೋಣ.

ಸರ್ಕಾರಿ ಯಲ್ಲಿ ಜಮೀನು ಸರ್ಕಾರದಿಂದ ವಿವಿಧ ಕಾರಣಗಳಿಂದ ರೈತರಿಗೆ ಬಂದಿರಬಹುದು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಅಡಿಯಲ್ಲಿ ಸಾಗುವಳಿ ಮಾಡುವ ರೈತರಿಗೆ ಬಂದಿರಬಹುದು, ಯಾವುದೇ ರೀತಿ ಅರ್ಜಿಯನ್ನು ಹೊಂದಿರುವುದಿಲ್ಲ ಆದ್ದರಿಂದ ಇದು ಸರ್ಕಾರಿ ಜಮೀನು ಆಗಿರುತ್ತದೆ.

ನಿಮ್ಮ ಪಹಣಿಯಲ್ಲಿ ಖಾಸಗಿ ಅಥವಾ ಪಟ್ಟ ಎಂದು ಇದ್ದರೆ ಇದು ಜಮೀನು ಸಂಪೂರ್ಣವಾಗಿ ಖಾಸಗಿಯವರದ್ದೇ ಆಗಿರುತ್ತದೆ. ಇದು ಸ್ವಂತ ಜಮೀನು ಎಂದು ತಿಳಿಸಲಾಗುತ್ತದೆ. ಇನಾಮು ಎಂದು ಇದ್ದರೆ ಜಮೀನು ಬಹುಮಾನ ಅಥವಾ ಬಳುವಳಿ ರೂಪದಲ್ಲಿ ರೈತರಿಗೆ ಬಂದಿರುವ ಭೂಮಿ ಜಾಸ್ತಿ ಭೂಮಿ ಇದ್ದವರು ಭೂ ಕಂದಾಯ ಅಥವಾ ಉಳುಮೆ ಮಾಡಲಾಗದೆ

ರೈತರಿಗೆ ನೀಡಿ ಪಹಣಿ ನೀಡುವ ಪದ್ಧತಿ ಇನಾಮು ಆಗಿರುತ್ತದೆ. ಗೇಣಿ ಆಸ್ತಿ ಬಾಡಿಗೆ ಎಂದರ್ಥ ವರ್ಷಗಳು ಕಳೆದು ಮಾಲಿಕ ಹೆಸರಿನಲ್ಲಿದ್ದರೂ ಗೇಣಿ ಪದ ಆಗುವುದಿಲ್ಲ ಹಳೆಯ ಅಥವಾ ಹೊಸ ಶರ್ತು ರೈತರಿಗೆ ಸರ್ಕಾರ ಜಮೀನು ಮಂಜರಿ ಮಾಡುವಾಗ ಕೆಲವೊಂದು ನಿರ್ಬಂಧನೆ ಹಾಕುವ ನಿಯಮವಾಗಿದೆ

ಇದನ್ನೇ ಪಟ್ಟ ಕಾಲನ್ನಲ್ಲಿ ಸೇರ್ಪಡೆ ಮಾಡಲಾಗುತ್ತದೆ ಇದಕ್ಕೆ ಶರತ್ತು ಎಂದು ಕೂಡ ಕರೆಯಲಾಗುತ್ತದೆ ಆದ್ದರಿಂದ ಆರ್ ಟಿ ಸಿ ಪಹಣಿಯಲ್ಲಿ ಈ ರೀತಿಯ ಅಂಶಗಳು ಒಳಗೊಂಡಿರಲೇಬೇಕು.

ಕೊಲ್ಲೂರು ಶ್ರೀ ಮೂಕಂಬಿಕಾ ದೇವಿ ಆರಧಾನೆ ಮಾಡುವ ಗುರುಗಳು ಮತ್ತು ಪ್ರಖ್ಯಾತ ಜ್ಯೋತಿಶ್ಯ ವಿದ್ವಾನ್ ಶ್ರೀ ಶ್ರೀ ಸುರ್ಯ ಪ್ರಕಾಶ್ ಕುಡ್ಲ ರವರಿಂದ ನಿಮ್ಮ ಜೀವನದ ಎಲ್ಲಾ ಸಮಸ್ಯೆಗೆ FREE ಸಲಹೆ ಪಡೆಯೋಕೆ ಕರೆ ಮಾಡಿ 9620799909

ವೀಡಿಯೊ

LEAVE A REPLY

Please enter your comment!
Please enter your name here