ದೆವ್ವ ಬಿಡಿಸುವ ದೇವಸ್ಥಾನ ಇಲ್ಲೇ ನಿಮ್ಮ ಹತ್ತಿರದಲ್ಲೇ ಇದೆ

125

ನಮಸ್ಕಾರ ಸ್ನೇಹಿತರೆ,ಹಸಿರು ಬಟ್ಟೆಯಲ್ಲಿ ತೆಂಗಿನಕಾಯಿ ಕಟ್ಟಿ ಹರಕೆ ಸಲ್ಲಿಸುತ್ತಿರುವ ಭಕ್ತರು. ಶಾಂತವಾಗಿ ಹರಿಯುತ್ತಿರುವ ಕೃಷ್ಣಾ ನದಿ, ನಂಬಿಕೆಯಿಂದ ದೇವಿಗೆ ಕೈ ಮುಗಿದು ಕಾಪಾಡು ತಾಯೇ ಅನ್ನುತ್ತಿರುವ ಮಹಿಳೆಯರು ಮಕ್ಕಳು, ವಿಜಯಪುರ ಜಿಲ್ಲೆಯ ಕೃಷ್ಣಾ ನದಿ ತೀರದಲ್ಲಿ ಇರೋ ಈ ಪುಣ್ಯದ ದೇಗುಲ ಪ್ರಸಿದ್ಧ ಯಲ್ಲಮ್ಮ ದೇವಸ್ಥಾನ.

ದೆವ್ವ ಬಿಡಿಸುವ ದೇವಸ್ಥಾನ ಶಕ್ತಿಶಾಲಿ ದೇವರು

ಈ ಕ್ಷೇತ್ರಕ್ಕೆ ನೂರಾರು ವರ್ಷದ ಇತಿಹಾಸವಿದೆ, ವಿಶೇಷ ಅಂದ್ರೆ ತಮ್ಮ ಇಷ್ಟಾರ್ಥಗಳ ಬೇಡಿಕೆ ಈಡೇರಿಕೆಗೆ ಇಲ್ಲಿಗೋ ಆಗಮಿಸೋ ಭಕ್ತರು ಹಸಿರು ಬಟ್ಟೆಯಲ್ಲಿ ತೆಂಗಿನಕಾಯಿ ಕಟ್ಟಿ ಹಾಕಿ ಬಳಿಕ ಪೂಜೆ ಸಲ್ಲಿಸುತ್ತಾರೆ. ಬೇಡಿಕೆ ಈಡೇರಿದಾಗ ಮತ್ತೆ ಕ್ಷೇತ್ರಕ್ಕೆ ಬಂದು ತೆಂಗಿನಕಾಯಿಯ ಕಟ್ಟನ್ನು ಬಿಚ್ಚಿ ತೆಂಗಿನಕಾಯಿಯನ್ನು ಕೃಷ್ಣಾ ನದಿಯಲ್ಲಿ ತೇಲಿಬಿಡುತ್ತಾರೆ,

ಹೀಗಾಗಿಯೇ ಈ ಕ್ಷೇತ್ರವನ್ನ ಬೇಡಿದ ವರ ನೀಡುವ ದೇವಸ್ಥಾನ ಎಂದೇ ಕರೆಯಲಾಗುತ್ತದೆ. ಈ ರೇಣುಕಾ ಯಲ್ಲಮ್ಮ ದೇವಿಯ ಪವಾಡಗಳು ನಿಜಕ್ಕೂ ಅಪಾರ ಎಂದು ಜನ ನಂಬಿದ್ದಾರೆ, ಹೀಗಾಗಿ ಈ ದೇಗುಲಕ್ಕೆ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಗೋವಾ ಸೇರಿದಂತೆ ಎಲ್ಲಾ ಕಡೆಯಿಂದ ಸಹಸ್ರಾರು ಭಕ್ತರು ದರ್ಶನ ಪಡೆಯುತ್ತಾರೆ.

ಈ ಸೇವೆಗಳಿಗೆ ಪ್ರಸಿದ್ಧಿಪ್ರತಿ ಅಮವಾಸ್ಯೆ, ಹುಣ್ಣಿಮೆ, ಮಂಗಳವಾರ, ಶುಕ್ರವಾರ ಸಹಸ್ರಾರು ಜನರು ಇಲ್ಲಿಗೆ ಆಗಮಿಸಿ ಈ ದೇವಿಯ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗುತ್ತಾರೆ, ವಿಶೇಷವಾಗಿ ದೇವಿಯ ವಾರದಂದು ಪೂಜೆ, ಹರಕೆ, ದೀಡ್ ನಮಸ್ಕಾರ, ತಪ್ಪಲು ಸೇವೆ, ಬೇವು ಇಳಿಸುವ ಸೇವೆಯೂ ಇಲ್ಲಿ ಜರುಗುತ್ತದೆ.

ಈ ದೇವಸ್ಥಾನದಲ್ಲಿ ಜೋಗತಿಯರು ಯಲ್ಲಮ್ಮನ ಕೊಡಹೊತ್ತು ಯಲ್ಲಮ್ಮನ ಹಾಡು ಹಾಡುತ್ತ ನೃತ್ಯ ಮಾಡಿ ದೇವಿಯ ಪವಾಡವನ್ನ ಹಾಡಿ ಹೊಗಳುತ್ತಾರೆ, ಪ್ರತಿನಿತ್ಯ ಬೆಳಗಿನ ಜಾವ ದೇವಿಗೆ ವಿಶೇಷವಾಗಿ ಬಗೆಬಗೆಯ ಹೂವಿನ ಅಲಂಕಾರ, ಪೂಜೆಗಳು ನಡೆಯುತ್ತವೆ.

ಮಧ್ಯಾಹ್ನ ಯಾವುದೇ ಪೂಜೆಗಳು ನಡೆಯುವುದಿಲ್ಲ, ಬದಲಿಗೆ ಮಂಗಳಾರತಿ ನಡೆಯುತ್ತದೆ. ಸಂಜೆ ವೇಳೆಗೆ ಮತ್ತೆ ಪೂಜೆ ನಡೆಯುತ್ತದೆ, ಒಟ್ಟಿನಲ್ಲಿ ಭಕ್ತರು ಯಲ್ಲಮ್ಮನ ದರ್ಶನ ಪಡೆದು ಕೃತಾರ್ಥರಾಗುತ್ತಾರೆ.

ಈ ದೇವಾಲಯದಲ್ಲಿ ಬೆಳದಿಂಗಳ ರಾತ್ರಿಯಲ್ಲಿ ಮನುಷ್ಯರ ಮೈಮೇಲಿದ್ದ ಪ್ರೇತಗಳನ್ನು ಹೊರಹಾಕಲಾಗುತ್ತದೆ, ದುಷ್ಟಶಕ್ತಿಗಳು ನೆಲೆಸಿರುವ ಜನರಿಂದ ಈ ನೆರಳುಗಳನ್ನು ತೆಗೆದುಹಾಕಲು ದೇವಾಲಯದ ಅರ್ಚಕರು ಪವಿತ್ರ ಪೊರಕೆಯಿಂದ ಹೊಡೆಯುತ್ತಾರೆ ಎಂದು ಹೇಳಲಾಗುತ್ತದೆ, ದೆವ್ವಗಳು ಪೊರಕೆಗಳಿಗೆ ತುಂಬಾ ಹೆದರುತ್ತವೆ ಎನ್ನುವ ನಂಬಿಕೆಯಿದೆ.

ನಿರುದ್ಯೋಗ, ಮನೆಯಲ್ಲಿ ಸಮಸ್ಯೆ, ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಅಥವ ಕೊಟ್ಟ ಸಾಲ ವಾಪಸ್ ಬರ್ತಿಲ್ಲ ಅಥ್ವಾ ನೆಮ್ಮದಿ ಇಲ್ಲದ ಜೀವನ ಏನೇ ಇದ್ದರು ಈ ತಕ್ಷಣ ಫೋನ್ ಮಾಡಿರಿ 9900804442 ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ ಅದಕ್ಕೆ ಸೂಕ್ತ ಮಾರ್ಗದರ್ಶನ ಮತ್ತು ಪರಿಹಾರ ನಾವು ಕೊಡುತ್ತೇವೆ, ಈ ಕೂಡಲೇ ಕರೆ ಮಾಡಿರಿ 9900804442 ಶ್ರೀನಿವಾಸ್ ಗುರುಗಳು.

ಸಂಪೂರ್ನ ವೀಡಿಯೊ ನೋಡಿರಿ

LEAVE A REPLY

Please enter your comment!
Please enter your name here