rastriyakhabars.com

ಮಂತ್ರಾಕ್ಷತೆ ಪವಾಡ ನೋಡಿ

 

ಮಂತ್ರಾಕ್ಷತೆ ಪವಾಡ ನೋಡಿ

 

ಶ್ರೀ ಗುರು ಸಾರ್ವಭೌಮ ರಾಘವೇಂದ್ರ ಸ್ವಾಮಿಗಳ ಮಂತ್ರಾಕ್ಷತೆ ಅನುಷ್ಠಾನ.

ಈ ಅನುಷ್ಠಾನ ಮಾಡುವುದರಿಂದ ಆರ್ಥಿಕವಾಗಿ ಸಬಲರಾಗಬಹುದು. ಶ್ರೀ ಗುರುರಾಯರ ಕೃಪೆ ಹಾಗೆ ಮನಸ್ಸನ್ನು ಸಾಕಾರಾತ್ಮಕವಾಗಿಸಲು ಬಹಳಷ್ಟು ಮುಖ್ಯವಾಗಿರುವ ಹಾಗೂ ಅದ್ಭುತ ಅನುಷ್ಠಾನ. ತುಂಬಾ ಸರಳವಾದ ಹಾಗೂ ಸ್ವಚ್ಛವಾದ ಯಾವುದೇ ರೀತಿಯ ಕ್ಲಿಷ್ಟಕರವಾದ ವ್ರತವಲ್ಲ. ಬಹಳ ಸರಳ ವಾದ ವ್ರತವಾಗಿದೆ.

ಈ ವ್ರತವನ್ನ ಪ್ರಾರಂಭಿಸುವವರು ರಾಯರ ವಾರವಾದ ಗುರುವಾರದಿಂದ ಪ್ರಾರಂಭಿಸಿ. ಮುಂಜಾನೆ ಬೆಳಗ್ಗೆ ಸೂರ್ಯೋದಯಕ್ಕೂ ಮುಕ್ಕಾಲು ಗಂಟೆ ಮುಂಚೆ ಈ ಒಂದು ಅನುಷ್ಠಾನ ಮುಗಿದಿರಬೇಕು. ಬೆಳಗ್ಗೆ ಬೇಗನೆ ಎದ್ದು ಸ್ವಾಮಿಯ ಪೂಜೆಗೆ ಎಲ್ಲವನ್ನು ಸಿದ್ಧಪಡಿಸಿಕೊಳ್ಳಬೇಕು.

ಈ ಅನುಷ್ಠಾನ ಎಷ್ಟು ಸರಳ ಎಂದರೆ ಶ್ರೀಗುರುರಾಯರಿಗೆ ಮನೆಯಲ್ಲೇ ಅಕ್ಷತೆಯನ್ನು ಸಿದ್ಧಪಡಿಸಿಕೊಳ್ಳಬೇಕು. ರಾಯರ ವಿಗ್ರಹದ ಮುಂದೆ ಮಣೆಯ ಮೇಲೆ ಅಕ್ಷತೆಯನ್ನು ಸಿದ್ಧಪಡಿಸಿ.ರಾಯರ ವಿಗ್ರಹಕ್ಕೆ ಮೊದಲು ಅಭಿಷೇಕವನ್ನು ಮಾಡಿಕೊಳ್ಳಬೇಕು. ನಂತರ ವಿಗ್ರಹಕ್ಕೆ ಗಂಧವನ್ನು ಲೇಪನ ಮಾಡಿಕೊಳ್ಳಬೇಕುಅಥವಾ ರಾಯರ ಫೋಟೋ ಗೆ ಗಂಧವನ್ನು ಹಚ್ಚಿ. ರಾಯರಿಗೆ ಪ್ರಿಯವಾದ ತುಳಸಿಯನ್ನು ಹಾಕಿ. ಎಂದಿನಂತೆ ರಾಯರ ಪೂಜೆಗೆ ಸಿದ್ಧಪಡಿಸಿಕೊಳ್ಳಿ.

ಈ ಅನುಷ್ಠಾನ ಮಾಡಲು 21 ರೂಪಾಯಿ ಬೇಕಾಗುತ್ತದೆ. 5 ರೂಪಾಯಿಯ 4 ನಾಣ್ಯಗಳು ಹಾಗೆ 1 ರೂಪಾಯಿಯ 1 ನಾಣ್ಯ ಬೇಕಾಗುತ್ತದೆ. ರಾಯರ ಅನುಷ್ಠಾನಕ್ಕೆ ಸಿದ್ಧಪಡಿಸಿದ ಅಕ್ಷತೆಯನ್ನು ಒಂದು ಬಟ್ಟಲಿನಲ್ಲಿ ಇಟ್ಟುಕೊಂಡಿರಬೇಕು.

ಸ್ವಾಮಿಗಳಿಗೆ ನೈವೇದ್ಯಕ್ಕಾಗಿ ಹಾಲು ಸಕ್ಕರೆಯನ್ನು ಸಿದ್ಧಪಡಿಸಿಕೊಂಡು ರಾಯರ ಅನುಷ್ಠಾನವನ್ನು ಪ್ರಾರಂಭಿಸಿ. ನಾವು ಹೇಗೆ ಪ್ರತಿ ದಿನದ ಪೂಜೆಯನ್ನು ಎಲ್ಲ ದೇವರ ಸಮ್ಮುಖದಲ್ಲಿ ಪ್ರಾರಂಭಿಸುತ್ತೇವೆ ಹಾಗೆಯೇ ದಿನದ ಮೊದಲ ಪೂಜೆಯನ್ನು ಪ್ರಥಮ ಪೂಜಿತ ಶ್ರೀ ವಿನಾಯಕನ ಸಂಕಲ್ಪದೊಂದಿಗೆ ಕುಲದೇವರ ಆಶೀರ್ವಾದದೊಂದಿಗೆ ಭಗವಂತನಲ್ಲಿ ಶ್ರದ್ಧಾ ಭಕ್ತಿಯಿಂದ ಗುರು ರಾಯರ ಮುಂದೆ ಎರಡು ತುಪ್ಪದ ದೀಪಗಳನ್ನು ಹಚ್ಚಿ ಎರಡು ಎಳೆ ಬತ್ತಿಯನ್ನು ಹಚ್ಚಿ,

ನೈವೇದ್ಯವಾದ ಹಾಲು ಸಕ್ಕರೆ ಯನ್ನು ಇಟ್ಟು ಬಟ್ಟಲಿನಲ್ಲಿ ಸಿದ್ಫಿಪಡಿಸಿದ ಅಕ್ಷತೆಯನ್ನು ಮುಕ್ಕಾಲು ಭಾಗದಷ್ಟಿರಬೇಕು. ಅಕ್ಷತೆ ಎಂದರೆ ಅಭಿವೃದ್ಧಿಯ ಸಂಕೇತ. ನಮ್ಮ ಜೀವನದಲ್ಲೂ ಸಹ ನಾವು ಅಭಿವೃದ್ಧಿ ಹೊಂದಬೇಕು. ನಾವು ಆರ್ಥಿಕವಾಗಿ ಸಬಲರಾಗಬೇಕು. ನೆಮ್ಮದಿಯ ಜೀವನ ನಮ್ಮದಾಗಬೇಕು. ಮನಸ್ಸಿನಲ್ಲ ಸದಾ ಒಳ್ಳೆಯ ಚಿಂತನೆಗಳು, ಸಾಕಾರಾತ್ಮಕ ಮನೋಭಾವನೆ ಇರಬೇಕು ಎನ್ನುವವರು ಈ ಅನುಷ್ಠಾನ ಮಾಡಿ ಅಭಿವೃದ್ಧಿಗೊಳ್ಳಿ.

ಒಂದು ಬಟ್ಟಲಿನಲ್ಲಿ 5 ರೂಪಾಯಿಯ 2 ನಾಣ್ಯವನ್ನು ಇಡಿ. ಅದರ ಮೇಲೆ ಅಕ್ಷತೆಯನ್ನು ಹಾಕಿ ನಂತರ ಅದರಮೇಲೆ 1 ರೂಪಾಯಿಯ ನಾಣ್ಯವನ್ನು ಹಾಕಿ ನಂತರ ಅದರ ಮೇಲೆ 5 ರೂಪಾಯಿಯ 2 ನಾಣ್ಯವನ್ನು ಹಾಕಿ ರಾಯರ ಫೋಟೋ ಮುಂದಿಟ್ಟು ದೀಪರಾಧನೆ ಧೂಪರಾಧನೆ ಮಾಡಿ ನೈವೇದ್ಯವನ್ನಿಟ್ಟು ಗಣೇಶನ ಮುಂದೆ ಸಂಕಲ್ಪ ಮಾಡಿ

ಕುಲದೇವರ ಆರಾಧನೆ ಮಾಡುತ್ತ ರಾಯರ ಈ ಅನುಷ್ಠಾನದಿಂದ ಯಶಸ್ಸನ್ನು ಕೊಡಿ ಎಂದು ಶ್ರೀ ರಾಘವೇಂದ್ರ ಗುರುಗಳ ಮುಂದೆ ಕೇಳಿಕೊಂಡಿ ಸ್ವಾಮಿಗಳ ಗಾಯತ್ರಿ ಮಂತ್ರವನ್ನು 21 ಬಾರಿ ರಾಯರ ಮುಂದೆ ಕುಳಿತು ಹೇಳಿಕೊಂಡು 21 ಬಾರಿ ತುಳಸಿಯನ್ನು ಅಕ್ಷತೆಯ ಬಟ್ಟಲಿಗೆ ಹಾಕಬೇಕು. ಈ ಪೂಜೆ ಸೂರ್ಯೋದಯಕ್ಕೂ ಮುಂಚೆಯೇ ಆಗಿರಬೇಕು. ನಂತರ ಎಂದಿನಂತೆ ಗೋಧೂಳಿ ಸಮಯದಲ್ಲಿ ಮತ್ತೊಮ್ಮೆ ರಾಯರ ಪೂಜೆಯನ್ನು ಮಾಡಿ ರಾಯರಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು.

ಈ ರೀತಿಯಾಗಿ ಪೂಜೆಯನ್ನು ಆಚರಿಸಿ ನಿಮ್ಮ ಜೀವನದಲ್ಲಿ ಅಭಿವೃದ್ಧಿಯನ್ನು ಕಾಣಬಹುದು ಆರ್ಥಿಕವಾಗಿ ಬಹಳಷ್ಟು ಯಶಸ್ಸು ಕಾಣುತ್ತೆವೆ. ಹದಿನೈದು ದಿನಕ್ಕೊಮ್ಮೆ ಅಕ್ಷತೆಯನ್ನು ಬದಲಾಯಿಸಿ ಮನೆಯಲ್ಲಿ ಸಾಕಿರುವ ಪಕ್ಷಿ ಗಳಿಗೆ ಅಕ್ಷತೆಯನ್ನು ಹಾಕಿ ಇಲ್ಲವಾದರೆ ಗೋಮಾತೆಗೆ ಸಮರ್ಪಸಿ ಗೋಮಾತೆಯ ಆಶೀರ್ವಾದದಿಂದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.

ಈ ರೀತಿಯಾಗಿ ರಾಯರ ಈ ಅನುಷ್ಠಾನವನ್ನು ಶ್ರದ್ಧೆಯಿಂದ ಮಾಡಿ ಭಕ್ತಿಯಿಂದ ರಾಯರಲ್ಲಿ ನಂಬಿಕೆಯನ್ನು ಇಟ್ಟುಕೊಂಡು ಈ ವ್ರತವನ್ನು ಮಾಡುವುದರಿಂದ ನಮ್ಮ ಸಕಲ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಬಹುದು. ರಾಯರ ಮಹಿಮೆ ಅಪಾರವಾದದ್ದು. ರಾಯರ ಪೂಜೆ ಸರಳವಾಗಿದ್ದರು ಭಕ್ತಿ ಅಗಾಧವಾಗಿರಬೇಕು. ನಿಷ್ಕಲ್ಮಶ ಭಕ್ತಿಗೆ ಸ್ವಾಮಿಗಳು ಒಲಿಯದೇ ಇರುವುದಿಲ್ಲ. ಸಕಲ ಚರಾಚರಗಳಲ್ಲಿ ಸ್ವಾಮಿಯ ನಡೆಯನ್ನು ಕಾಣಲು ಭಕ್ತಿಯಿಂದ ಮಾತ್ರ ಸಾಧ್ಯ.

Exit mobile version