ಅಮೂಲ್ ಕೆಎಂಎಫ್ ಕಂಪನಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

48

ನಮಸ್ಕಾರ ಪ್ರಿಯ ಸ್ನೇಹಿತರೇ, ಕೆಎಂಎಫ್ ಅಮೂಲ್ ಕಂಪನಿಯಲ್ಲಿ ಖಾಲಿ ಇರುವಂತಹ ಐದು ಜಿಲ್ಲೆಗಳಲ್ಲಿ ನೇಮಕಾತಿಯನ್ನು ಹೊರಡಿಸಲಾಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ರಾಯಚೂರು ಬಳ್ಳಾರಿ ಕೊಪ್ಪಳ ವಿಜಯನಗರದಲ್ಲಿ ಖಾಲಿ ಇರುವಂತ ಹಾಲು ಉತ್ಪಾದಕ ಸಂಘದ ಒಕ್ಕೂಟ ಲಿಮಿಟೆಡ್ ಹುದ್ದೆಗಳ ನೇಮಕಾತಿಯನ್ನು ಹೊರಡಿಸಲಾಗಿದೆ.

ಡೈರಿ ಮೇಲ್ವಿಚಾರಕರು, ಚಾಲಕ, ಲೆಕ್ಕಪತ್ರ ಅಧಿಕಾರಿಗಳು ಈ ಹುದ್ದೆಗಳಿಗೆ ನೇಮಕಾತಿಯನ್ನು ನಡೆಸಲಾಗಿದೆ 21 ಸಾವಿರದಿಂದ 90 ಸಾವಿರದವರೆಗೆ ಪ್ರತಿ ತಿಂಗಳು ವೇತನವನ್ನು ನೀಡಲಾಗುತ್ತದೆ 60 ಕ್ಕೂ ಹೆಚ್ಚು ಹುದ್ದೆಗಳಿವೆ ಆ ಹುದ್ದೆಗಳಿಗೆ ನೇಮಕಾತಿಯನ್ನ ಮಾಡಲಾಗಿದೆ. ಸಹಾಯಕ ವ್ಯವಸ್ಥೆಪಕರು ಹಣಕಾಸು ಜೂನಿಯರ್ ತಂತ್ರಜ್ಞಾನರು ಅಕೌಂಟೆಂಟ್ ಅಸಿಸ್ಟೆಂಟ್ ಗ್ರೇಡ್ ಚಾಲಕ ಆಡಳಿತ ಸಹಾಯಕಾರಿ ಹೀಗೆ ನಾನಾ ರೀತಿಯ ಹುದ್ದೆಗಳಿವೆ ಆ ಹುದ್ದೆಗಳಿಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಎಂ ಕಾಂ, ಎಂಬಿಎ, ಬಿವಿ ಎಸ್ ಸಿ, ಬಿ ಎಸ್ ಸಿ, ಸಿ ಎ ಸ್ನಾತಕೋತರ ಪದವಿ, ಎಂ ಸಿ ಎ, ಡಿಪ್ಲೋಮಾ ಬಿಬಿಎಂ ಹೀಗೆ ನಾನಾ ರೀತಿ ಹುದ್ದೆಗಳಿಗೆ ನೀವು ಈ ರೀತಿಯ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಲೇಬೇಕು. ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಬೇಕಾದರೆ 18 ರಿಂದ 30 ವರ್ಷದ ಒಳಗಿರುವ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಬೇಕು.

ವಯಸ್ಸಿನ ಸಡಿಲಿಕೆ 3 ವರ್ಷ ಒಬಿಸಿ ಅಭ್ಯರ್ಥಿಗಳಿಗೆ, ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ನಿಗದಿಪಡಿಸಲಾಗಿದೆ. ಇತರ ಎಲ್ಲಾ ಅಭ್ಯರ್ಥಿಗಳಿಗೆ 1500 ಅರ್ಜಿ ಶುಲ್ಕ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ರೂ.750 ಅರ್ಜಿ ಶುಲ್ಕ ಆನ್ಲೈನ್ ಗಳ ಮೂಲಕವೇ ನೀವು ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 7ನೇ ತಾರೀಕು ಕೊನೆಯ ದಿನಾಂಕವಾಗಿದೆ

ಈ ದಿನಾಂಕದೊಳಗೆ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬೇಕು ಈ ಹುದ್ದೆಗೆ ನೀವೇನಾದರೂ ಅರ್ಜಿ ಸಲ್ಲಿಸಿದರೆ ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ. ಕರ್ನಾಟಕದ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು ಐದು ಜಿಲ್ಲೆಯಲ್ಲಿ ಮಾತ್ರ ಖಾಲಿ ಇರುವಂತ ಹುದ್ದೆಗಳ ನೇಮಕಾತಿಯನ್ನು ಹೊರಡಿಸಲಾಗಿದೆ.

ವಿಡಿಯೋ ನೋಡಿ

LEAVE A REPLY

Please enter your comment!
Please enter your name here