ನಮಸ್ಕಾರ ಪ್ರಿಯ ಸ್ನೇಹಿತರೇ, ದ್ವಿತೀಯ ಪಿಯುಸಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಸುವರ್ಣ ಅವಕಾಶ ನೀವು ಕರ್ನಾಟಕದ ಲೋಕಾಯುಕ್ತ ಸಂಸ್ಥೆಯಲ್ಲಿ ಉದ್ಯೋಗವನ್ನು ಮಾಡಬೇಕು ಅಂದುಕೊಂಡಿದ್ದರೆ ಹೊಸ ಅಧಿಸೂಚನೆಯನ್ನು ನೀಡಿದ್ದಾರೆ.
ಇದರ ಆಧಾರದ ಮೇಲೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಒಟ್ಟು 30ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇರುವುದರಿಂದ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ವಯಸ್ಸಿನ ಮಿತಿ 18 ವರ್ಷದಿಂದ 35 ವರ್ಷದ ಒಳಗಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಬೇಕಾದರೆ ವಯಸ್ಸಿನ ಸಡಿಲಿಕೆ ಕೂಡ ನೀಡಲಾಗುತ್ತದೆ.
ಸಾಮಾನ್ಯ ವರ್ಗದವರಿಗೆ 38 ವರ್ಷ 2a 2b 3a 3b ಅವರಿಗೆ 41 ವರ್ಷ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ 43 ವರ್ಷ ವಯಸ್ಸಿನ ಸಡಿಲಿಕೆಯನ್ನ ನೀಡಲಾಗುತ್ತದೆ.
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 34,100 ರಿಂದ 67 ಸಾವಿರದವರೆಗೆ ಪ್ರತಿ ತಿಂಗಳ ವೇತನವನ್ನು ನೀಡಲಾಗುತ್ತದೆ. ಈ ಹುದ್ದೆಗಳಿಗೆ ನೀವೇನಾದರೂ ಅರ್ಜಿ ಸಲ್ಲಿಸಿದರೆ ಆಯ್ಕೆ ವಿಧಾನ ವಿದ್ಯಾರ್ಹತೆ ಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಹಾಗೂ ಪರೀಕ್ಷೆಯನ್ನು ನಡೆಸಿ ಈ ಹುದ್ದೆಗಳಿಗೆ ನಿಮ್ಮನ್ನ ಆಯ್ಕೆ ಮಾಡಲಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಸಾಮಾನ್ಯ ವರ್ಗದವರು ಎರಡು ಬಿ, ಮೂರು ಎ, ಮೂರು ಬಿ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 250 ಅರ್ಜಿ ಶುಲ್ಕ, ಎಸ್ಸಿ ಎಸ್ಟಿ ಮತ್ತು ಅಂಗವಿಕಲರಿಗೆ ಶುಲ್ಕದಲ್ಲಿ ವಿನಾಯಿತಿ ಇರುತ್ತದೆ.
ಇದನ್ನು ಸಹ ಓದಿ:
ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಖಾಲಿ ಇರುವಂತಹ ಹುದ್ದೆ
CRPF ನಲ್ಲಿ ಖಾಲಿ ಇರುವಂತಹ ಹುದ್ದೆಗಳ ಹೊಸ ನೇಮಕಾತಿ
ಗ್ರೂಪ್ ಸಿ ಹುದ್ದೆಗಳಲ್ಲಿ ಬಿಲ್ ಕಲೆಕ್ಟರ್ ನಲ್ಲಿ ಖಾಲಿ ಇರುವ ಹುದ್ದೆ
ನೀವು ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಾದರೆ ಆನ್ಲೈನ್ ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐಗಳ ಮೂಲಕ ಶುಲ್ಕವನ್ನು ಪಾವತಿ ಮಾಡಬೇಕು. ಆನ್ಲೈನ್ ಗಳ ಮೂಲಕ ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.
ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳು ಖಾಲಿ ಇವೆ ಈ ಹುದ್ದೆಗಳಿಗೆ ನೇಮಕಾತಿ ಇದಾಗಿದೆ. ಒಟ್ಟು 30ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಕರ್ನಾಟಕದಲ್ಲಿ ಖಾಲಿರುವಂತಹ ಹುದ್ದೆ ಇದಾಗಿದೆ. ಈ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಮತ್ತು ಕನ್ನಡ ಹಾಗೂ ಆಂಗ್ಲ ಭಾಷೆಯ ಸಂಪೂರ್ಣ ಮಾಹಿತಿ ಇರುವಂತಹವರು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ಹುದ್ದೆಗಳಿಗೆ ಈಗಾಗಲೇ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು ಕೊನೆಯ ದಿನಾಂಕ ನವೆಂಬರ್ 29, 2024 ಕೊನೆಯ ದಿನಾಂಕವಾಗಿದೆ. ಶುಲ್ಕ ಪಾವತಿ ಮಾಡುವ ಕೊನೆಯ ದಿನಾಂಕ 30 ನವೆಂಬರ್ 2024 ಕೊನೆಯ ದಿನಾಂಕವಾಗಿದೆ. ಈ ದಿನಾಂಕದ ಒಳಗೆ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನ ತಿಳಿಯಲು ಸಾಧ್ಯ.