BPNL ನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ.
ನಮಸ್ಕಾರ ಪ್ರಿಯ ಸ್ನೇಹಿತರೇ, BPNL ನಲ್ಲಿ ಖಾಲಿ ಇರುವಂತಹ ಹುದ್ದೆಗಳ ಹುದ್ದೆಗಳ ನೇಮಕಾತಿ ಯಾಗಿದೆ. ಭಾರತೀಯ ಪಶು ಪಾಲನ್ ನಿಗಮ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಾಗಿರುವುದರಿಂದ ಅನೇಕ ರೀತಿಯ ಹುದ್ದೆಗಳಿಗೆ ಅದರಲ್ಲಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
1125ಕ್ಕೂ ಹೆಚ್ಚು ಹುದ್ದೆಗಳಿವೆ ಆದರಿಂದ ನೀವು ಕೂಡ ಅರ್ಜಿ ಸಲ್ಲಿಸಿ, ಯಾವ ಯಾವ ಹುದ್ದೆಗಳು ಖಾಲಿ ಇವೆ ಎಂದರೆ ಕೇಂದ್ರ ಸಹಾಯಕರು ಕೇಂದ್ರ ವಿಸ್ತರಣಾ ಅಧಿಕಾರಿಗಳು ಹೀಗೆ ನಾನಾ ರೀತಿಯ ಹುದ್ದೆಗಳು ಇವೆ.
ಈ ಹುದ್ದೆಗಳಿಗೆ ನೀವೇನಾದರೂ ಆಯ್ಕೆಯಾದರೆ 37 ಸಾವಿರದಿಂದ 43 ಸಾವಿರದವರೆಗೆ ಪ್ರತಿ ತಿಂಗಳು ವೇತನವನ್ನು ನೀಡಲಾಗುತ್ತದೆ. ಭಾರತದ ಪ್ರತಿಯೊಂದು ಕಡೆಯಲ್ಲೂ ಕೂಡ ನೀವು ಈ ಹುದ್ದೆಗೆ ತಮ್ಮ ಕರ್ತವ್ಯವನ್ನು ನಿರ್ವಹಿಸಬಹುದಾಗಿದೆ.
ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಆನ್ಲೈನ್ ಗಳ ಮೂಲಕವೇ ಅರ್ಜಿ ಸಲ್ಲಿಸಬೇಕು ಅಧಿಕೃತ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಆ ವೆಬ್ ಸೈಟ್ ಯಾವುದು ಎಂದರೆ bharatiyapashupalan.com ಈ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಕೇಂದ್ರ ಉಸ್ತುವಾರಿ ಹುದ್ದೆ 125, ಕೇಂದ್ರ ವಿಸ್ತರಣಾಧಿಕಾರಿ 250, ಕೇಂದ್ರ ಸಹಾಯಕರು 750, ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ 10ನೇ ತರಗತಿ 12ನೇ ತರಗತಿ ಮತ್ತು ಪದವಿಯನ್ನು ಪೂರ್ಣಗೊಳಿಸಿರುವಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಆಯಾ ಹುದ್ದೆಗಳಿಗನುಗುಣವಾಗಿ ವೇತನವನ್ನು ಕೂಡ ನೀಡಲಾಗುತ್ತದೆ.
ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ 18 ವರ್ಷದಿಂದ 40 ವರ್ಷದ ಒಳಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ವಯಸ್ಸಿನ ಸಡಿಲಿಕೆ ಕೂಡ ನೀಡಲಾಗುತ್ತದೆ.
ಇದನ್ನು ಸಹ ಓದಿ:
ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಹೊಸ ಯೋಜನೆ ಜಾರಿ
ಗೂಗಲ್ ಪೇ ಮೂಲಕ ನೀವು ಸುಲಭವಾಗಿ ಲೋನ್
ರೇಷನ್ ಕಾರ್ಡ್ ಇದಿಯಾ ಹಾಗಾದರೆ ನಿಮಗೆ ಗುಡ್ ನ್ಯೂಸ್
ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಎಸ್ ಸಿ ಎಸ್ ಟಿ ಅಭ್ಯರ್ಥಿಗಳು ಹೀಗೆ ಐದು ವರ್ಷ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷವನ್ನು ನಿಗದಿಪಡಿಸಲಾಗಿದೆ. ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಕೇಂದ್ರ ಉಸ್ತುವಾರಿ ಹುದ್ದೆಗಳಿಗೆ 944, ಕೇಂದ್ರ ವಿಸ್ತರಣಾಧಿಕಾರಿ ಹುದ್ದೆ 826, ಕೇಂದ್ರ ಸಹಾಯಕ ಹುದ್ದೆ 708 ಅರ್ಜಿ ಶುಲ್ಕವನ್ನು ಪಾವತಿಸಬೇಕು. ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಈ ಅರ್ಜಿ ಶುಲ್ಕ ಅನ್ವಯವಾಗುತ್ತದೆ. ನೀವು ಅರ್ಜಿ ಶುಲ್ಕವನ್ನು ಆನ್ಲೈನ್ ಗಳ ಮೂಲಕವೇ ಸಲ್ಲಿಸಬೇಕು.
ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಈ ಹುದ್ದೆಗೆ ನಿಮ್ಮನ್ನ ಆಯ್ಕೆ ಮಾಡಲಾಗುತ್ತದೆ. ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.