ಆಹಾರ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

46

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕದ ಆಹಾರ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ ಮಾಡಲಾಗುತ್ತದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕರ್ನಾಟಕದ ಯಾವುದೇ ಜಿಲ್ಲೆಯಿಂದಲಾದರೂ ಕೂಡ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಒಂದು ಸಾವಿರದ ನೂರ ಐವತ್ತಕ್ಕೂ ಹೆಚ್ಚು ಹುದ್ದೆಗಳಿವೆ ಆ ಹುದ್ದೆಗಳಿಗೆ ಪ್ರತಿಯೊಬ್ಬರೂ ಕೂಡ ಅರ್ಜಿ ಸಲ್ಲಿಸಬಹುದು. ಯಾವ ಯಾವ ಹುದ್ದೆಗಳು ಖಾಲಿ ಇವೆ ಎಂದರೆ ಸಹಾಯಕ ನಿರ್ದೇಶಕರು 198, ಪ್ರಥಮ ದರ್ಜೆ ಸಹಾಯಕರು 50, ದ್ವಿತೀಯ ದರ್ಜೆ ಸಹಾಯಕರು 188, ಡಾಟಾ ಎಂಟ್ರಿ ಆಪರೇಟರ್ 238, ಗ್ರೂಪ್ ಡಿ 238, ಚಾಲಕರು 100, ಹೀಗೆ ನಾನಾ ರೀತಿಯ ಹುದ್ದೆಗಳಿವೆ ಆ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ.

ಆಯಾ ಹುದ್ದೆಗಳಿಗೆ ಅನುಗುಣವಾಗಿ ವೇತನವನ್ನು ನೀಡಲಾಗುತ್ತದೆ, 27 ಸಾವಿರದ ದಿಂದ 53 ವರೆಗೂ ಕೂಡ ವೇತನ ನಿಗದಿಪಡಿಸಲಾಗುತ್ತದೆ ಆಯಾ ಹುದ್ದೆಗಳಿಗೆ ವೇತನವನ್ನು ನೀಡಲಾಗುತ್ತದೆ. ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಬೇಕಾದರೆ 18 ರಿಂದ 27 ವರ್ಷದ ಒಳಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು ವಯಸ್ಸಿನ ಸಡಿಲಿಗೆ ಕೂಡ ನೀಡಲಾಗುತ್ತದೆ.

ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಐದು ವರ್ಷ ವಿಕಲಚೇತನ ಅವರಿಗೆ ಹತ್ತು ವರ್ಷ ನಿಗದಿಪಡಿಸಲಾಗಿದೆ. ಈ ಹುದ್ದೆಗೆ ನೀವೇನಾದರೂ ಅರ್ಜಿ ಸಲ್ಲಿಸಿದರೆ ಆಯ್ಕೆ ಪ್ರಕ್ರಿಯೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ.

ಈ ಹುದ್ದೆಗೆ ಇನ್ನೂ ಕೂಡ ಅರ್ಜಿ ಸಲ್ಲಿಸಲು ದಿನಾಂಕವನ್ನು ನಿಗದಿಪಡಿಸಿಲಿಲ್ಲ ಕೊನೆಯ ದಿನಾಂಕವನ್ನು ಕೂಡ ನಿಗದಿಪಡಿಸಿಲ್ಲ ಆದ್ದರಿಂದ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ ನಿಮ್ಮನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಟ್ಟು 200 ಅಂಕಗಳಿಗೆ ಪರೀಕ್ಷೆ ಇರುತ್ತದೆ ಆ ಪರೀಕ್ಷೆಗಳಲ್ಲಿ ಋಣಾತ್ಮಕ ಮೌಲ್ಯವಿದ್ದಷ್ಟು ಪ್ರತಿ ಉತ್ತರ ತಪ್ಪು ನಾಲ್ಕನೇ ಒಂದು ಅಂಕವನ್ನ ಕಳೆಯಲಾಗುತ್ತದೆ ಅದರ ಆಧಾರದ ಮೇಲೆ ನೀವು ಪರೀಕ್ಷೆಯನ್ನು ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here