ಆಹಾರ ಸರಬರಾಜು ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

113

ನಮಸ್ಕಾರ ಪ್ರಿಯ ಸ್ನೇಹಿತರೇ, ಆಹಾರ ಸರಬರಾಜು ಇನ್ಸ್ಪೆಕ್ಟರ್ ಮತ್ತು ಉನ್ನತ ಮಟ್ಟದ ಗುಮಾಸ್ತ ಹಾಗೆಯೇ ಗ್ರೂಪ್ ಸಿ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಮಾಡಲಾಗುತ್ತದೆ. ಇದು ಸರಕಾರಿ ಉದ್ಯೋಗ ವಾಗಿರುವುದರಿಂದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

345ಕ್ಕೂ ಹೆಚ್ಚು ಹುದ್ದೆಗಳಿಗೆ ಡಿಸೆಂಬರ್ 13ನೇ ತಾರೀಕಿನಿಂದ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕವಾಗಿದೆ. ಡಿಸೆಂಬರ್ 31ನೇ ತಾರೀಕು ಕೊನೆಯ ದಿನಾಂಕವಾಗಿದೆ ಈ ದಿನಾಂಕದೊಳಗೆ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದು. ಕರ್ನಾಟಕದ ಎಲ್ಲ ಜಿಲ್ಲೆಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

ಆನ್ಲೈನ್ ಗಳ ಮೂಲಕ ಈ ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಬೇಕು. ಆಹಾರ ಸರಬರಾಜು ನಿರೀಕ್ಷಕರು 29 ಸಾವಿರದಿಂದ 92 ಸಾವಿರದವರೆಗೆ ವೇತನವನ್ನು ನಿಗದಿಪಡಿಸಲಾಗಿದೆ.

ಉನ್ನತ ಮಟ್ಟದ ಗುಮಾಸ್ತರು 25000 ದಿಂದ 81 ಸಾವಿರದವರೆಗೆ ವೇತನ, ಈ ಹುದ್ದೆಗೆ ನೀವೇನಾದರೂ ಅರ್ಜಿ ಸಲ್ಲಿಸಿದ್ದೆ ಆದರೆ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನ ಮಾಡಲಾಗುತ್ತದೆ ಮತ್ತು ಸಂದರ್ಶನವನ್ನ ನಡೆಸಿ ನಿಮ್ಮನ್ನ ಈ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಗ್ರೂಪ್ ಸಿ ವಿಭಾಗದಲ್ಲೂ ಕೂಡ ಅನೇಕ ರೀತಿಯ ಹುದ್ದೆಗಳಿವೆ ಅವುಗಳನ್ನ ಆಧರಿಸಿ ನೀವು ಯಾವುದಾದರೂ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

18 ವರ್ಷದಿಂದ 35 ವರ್ಷದ ಒಳಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು ವಯಸ್ಸಿನ ಸಡಿಲಿಕೆ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ sc st ಅಭ್ಯರ್ಥಿಗಳಿಗೆ ಐದು ವರ್ಷ ಅಂಗವಿಕಲರಿಗೆ 10 ವರ್ಷವನ್ನು ನಿಗದಿಪಡಿಸಲಾಗಿದೆ.

ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಸ್ನಾತಕೋತರ ಪದವಿ ಮತ್ತು ಪದವಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಯಾ ಹುದ್ದೆಗಳು ಅನುಗುಣವಾಗಿ ನಿಮಗೆ ವೇತನವನ್ನು ನೀಡಲಾಗುತ್ತದೆ. ಕರ್ನಾಟಕದ ಯಾವುದೇ ಜಿಲ್ಲೆಯಿಂದಲಾದರೂ ಕೂಡ ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರತಿಯೊಬ್ಬರಿಗೂ ಕೂಡ ಅವಕಾಶ ನೀಡಲಾಗಿದೆ ಡಿಸೆಂಬರ್ 31 ನೇ ತಾರೀಕು ಕೊನೆಯ ದಿನಾಂಕವಾಗಿದೆ ಈ ದಿನಾಂಕದ ಒಳಗೆ ನೀವು ಆನ್ಲೈನ್ ಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು.

ಮಾಹಿತಿ ಆಧಾರ

5 COMMENTS

LEAVE A REPLY

Please enter your comment!
Please enter your name here