SSC ಮತ್ತು MTS ಈ ಹುದ್ದೆಗಳಿಗೆ ನೇಮಕಾತಿಯನ್ನು ಹೊರಡಿಸಲಾಗಿದೆ ಕನ್ನಡದಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ.
ನಮಸ್ಕಾರ ಪ್ರಿಯ ಸ್ನೇಹಿತರೇ, SSC ಮತ್ತು ಮಲ್ಟಿ ಟಾಸ್ಕಿಂಗ್ ಹುದ್ದೆಗಳಿಗೆ ನೇಮಕಾತಿ. ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ 18 ವರ್ಷದಿಂದ 27 ವರ್ಷದ ಒಳಗಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ವಯಸ್ಸಿನ ಸಡಲಿಕ್ಕೆ ಕೂಡ ನೀಡುತ್ತಾರೆ.
ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯಸ್ಸಿನ ಸಡಿಲಿಕೆ ನೀಡಲಾಗುತ್ತದೆ. ಎಂ ಟಿ ಎಸ್ ಈ ಹುದ್ದೆಗೆ 25 ವರ್ಷ ಪೂರ್ಣಗೊಳಿಸಿರಬೇಕು ಸಿ ಬಿ ಐ ಸಿ ಕಂದಾಯ ಇಲಾಖೆ ಎಂಟಿಎಸ್ ಈ ಹುದ್ದೆಗಳಿಗೆ 27 ವರ್ಷ ಪೂರ್ಣಗೊಂಡಿರಬೇಕು.
ಈ ಹುದ್ದೆಗಳಿಗೆ ನೀವೇನಾದರೂ ಅರ್ಜಿ ಸಲ್ಲಿಸಿದರೆ ಆಯ್ಕೆ ವಿಧಾನ ಎಂಟಿಎಸ್ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ದಾಖಲೆ ಪರಿಶೀಲನೆ ನಡೆಸಿ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಹವಾಲ್ದಾರ್ ಈ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ, ಸಹಿಷ್ಣುತ ಪರೀಕ್ಷೆ, ದಾಖಲೆಗಳ ಪರಿಶೀಲ ನಡೆಸಿ ಈ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ.
ಪರೀಕ್ಷೆಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಿಂದಿ, ಇಂಗ್ಲಿಷ್ ಸೇರಿದಂತೆ ಕನ್ನಡದಲ್ಲೂ ಕೂಡ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ, ಪರೀಕ್ಷಾ ಕೇಂದ್ರಗಳು ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲ್ಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ ಇಲ್ಲಿ ನೀವು ಪರೀಕ್ಷೆಯನ್ನ ಬರೆಯಬಹುದಾಗಿದೆ.
ಅರ್ಜಿ ಸಲ್ಲಿಸಬೇಕಾದರೆ ಅಧಿಕೃತ ವೆಬ್ಸೈಟ್ ಗಳಿಗೆ ಭೇಟಿ ನೀಡಿ ಆನ್ಲೈನ್ ಗಳ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ,
ಎಸ್ಸಿ ಎಸ್ಟಿ ಮಾಜಿ ಸೈನಿಕ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿಯನ್ನು ನೀಡುತ್ತಾರೆ. ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಆನ್ಲೈನ್ ನಲ್ಲಿ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಗಳ ಮೂಲಕ ಶುಲ್ಕವನ್ನು ಪಾವತಿಸಬಹುದು.
ಯಾವ ಯಾವ ಹುದ್ದೆಗಳು ಇದೆ ಎಂದರೆ ಮಲ್ಟಿ ಟಾಸ್ಕಿಂಗ್ ಸ್ಟಾಪ್ ಮತ್ತು ಹವಾಲ್ದಾರ್ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಒಟ್ಟು 8,326 ಹುದ್ದೆಗಳಿವೆ ಮಲ್ಟಿ ಟಾಸ್ಕಿಂಗ್ ಸ್ಟಾಫ್ 4087 ಹುದ್ದೆ, ಹವಾಲ್ದಾರ್ 3439 ಹುದ್ದೆಗಳು ಖಾಲಿ ಇವೆ. ಈ ಉದ್ಯೋಗಕ್ಕೆ ನೀವೇನಾದರೂ ಅರ್ಜಿ ಸಲ್ಲಿಸಿ ಆಯ್ಕೆಯಾದರೆ ಭಾರತದ ಎಲ್ಲಾ ಕಡೆಯಲ್ಲೂ ಕೂಡ ಕಾರ್ಯವನ್ನ ನಿರ್ವಹಿಸಬಹುದು.
ಇದನ್ನು ಸಹ ಓದಿ:
ಯಾವುದೇ ಆಧಾರ ಇಲ್ಲದೆ ಒಂದು ಲಕ್ಷ ಸಾಲ
ಕೋಳಿ ಸಾಕಾಣಿಕೆ ಮಾಡಿ ತಿಂಗಳಿಗೆ ಕನಿಷ್ಟ 2 ಲಕ್ಷ ಲಾಭ
ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವಂತಹ ಹುದ್ದೆ
ರೈತರಿಗೆ ಭರ್ಜರಿ ಗುಡ್ ನ್ಯೂಸ್ ಗಂಗಾ ಕಲ್ಯಾಣ ಯೋಜನೆ
ಈ ಬಿಸಿನೆಸ್ ಮಾಡಿ ದಿನಕ್ಕೆ 4000 ಲಾಭ
ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಮಾನ್ಯತೆ ಪಡೆದಂತಹ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಲ್ಲಿ 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು ಅರ್ಜಿ ಸಲ್ಲಿಸಲು ಈಗಾಗಲೇ ಪ್ರಾರಂಭವಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಜುಲೈ ಕೊನೆಯ ದಿನಾಂಕವಾಗಿದೆ. ಈ ದಿನಾಂಕದೊಳಗೆ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು. ಹಾಗೆಯೇ ಶುಲ್ಕವನ್ನು ಪಾವತಿ ಮಾಡಲು ಆಗಸ್ಟ್ ಒಂದನೇ ತಾರೀಖಿನವರೆಗೂ ಅವಕಾಶವನ್ನ ನೀಡಲಾಗುತ್ತದೆ.
ಮಾಹಿತಿ ಆಧಾರ: