ಮಹಿಳೆಯರಿಗೆ ಹೊಸ ಯೋಜನೆಗಳು ಜಾರಿ ಮಾಡಿದ್ದಾರೆ ಅದನ್ನು ಉಪಯೋಗ ಮಾಡಿಕೊಳ್ಳಿ

128

ನಮಸ್ಕಾರ ಪ್ರಿಯ ಸ್ನೇಹಿತರೇ, ಮಹಿಳೆಯರಿಗೆ ಅನೇಕ ರೀತಿಯ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ ಅದರಲ್ಲಿ ಗೃಹಲಕ್ಷ್ಮಿ ಯೋಜನೆಯು ಕೂಡ ಒಂದಾಗಿದೆ. ಈ ಯೋಜನೆಯಿಂದಾಗಿ ಅನೇಕ ಮಹಿಳೆಯರು ಸಾಕಷ್ಟು ರೀತಿಯ ಪ್ರಯೋಜನಗಳನ್ನ ಪಡೆದುಕೊಳ್ಳುತ್ತಿದ್ದಾರೆ ಪ್ರತಿ ತಿಂಗಳು 2000 ಹಣವನ್ನ ಅವರ ಖಾತೆಗೆ ನೇರವಾಗಿದೆ. ಒಂದರಿಂದ ಮೂರನೇ ಕಂತಿನವರೆಗೆ ಹಣ ಎಂಬುದು ಜಮಾ ಆಗಿದೆ,

ಇನ್ನು ಕೂಡ ಸರ್ಕಾರವು ಹಣವನ್ನ ಬಿಡುಗಡೆ ಮಾಡಲು ಫಂಡುಗಳನ್ನು ಕೂಡ ನಿಗದಿಪಡಿಸಿದೆ. ಮೊದಲನೇ ಕಂತಿನ ಹಣ ಕೆಲವೊಂದಿಷ್ಟು ಮಹಿಳೆಯರಿಗೆ ಜಮಾ ಆಗಿದೆ ಇನ್ನೂ ಕೆಲವೊಂದಿಷ್ಟು ಮಹಿಳೆಯರ ಖಾತೆಗೆ ಜಮಾ ಆಗಿಲ್ಲ ಆದರೆ ಮುಂದಿನ ದಿನಗಳಲ್ಲಿ ಎಲ್ಲರ ಖಾತೆಗೂ ಕೂಡ ಹಣ ಜಮಾ ಮಾಡುವಂತೆ ತೀರ್ಮಾನವನ್ನ ಕೈಗೊಂಡಿದ್ದಾರೆ.

ಮಹಿಳೆಯರ ಖಾತೆಗೆ ಏನಾದರೂ ಹಣ ಬಂದಿಲ್ಲ ಎಂದರೆ ಅವರ ಗಂಡನ ಖಾತೆಗೆ ಹಣ ಜಮಾ ಮಾಡುವಂತೆ ತೀರ್ಮಾನವನ್ನ ಕೈಗೊಂಡಿದ್ದಾರೆ. ಧನಶ್ರೀ ಯೋಜನೆ ಈ ಧನಶ್ರೀ ಯೋಜನೆಯ ಮೂಲಕ ಮಹಿಳೆಯರು 30,000 ಹಣವನ್ನು ಪಡೆದುಕೊಳ್ಳಬಹುದಾಗಿದೆ ಇವರು ಸ್ವಂತವಾಗಿ ಉದ್ಯೋಗವನ್ನು ಆರಂಭ ಮಾಡಬೇಕು ಅದರಲ್ಲೂ ಆದಾಯ ಬರುವಂತ ಉದ್ಯೋಗಗಳನ್ನ ಇವರೇನಾದರೂ ಪ್ರಾರಂಭ ಮಾಡಿದರೆ

ಸರ್ಕಾರದಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಉದ್ಯೋಗಿನಿ ಯೋಜನೆ ಈ ಯೋಜನೆಯ ಮೂಲಕ ಮಹಿಳೆಯರಿಗೆ 3 ಲಕ್ಷ ಹಣವನ್ನು ನೀಡಲಾಗುತ್ತದೆ ಅದರಲ್ಲಿ 90 ಸಾವಿರ ಉಚಿತವಾಗಿರುತ್ತದೆ ಇನ್ನು ಉಳಿದಂತಹ ಹಣವನ್ನ ನೀವು ಸರ್ಕಾರಕ್ಕೆ ಹಿಂದಿರುಗಿಸಬೇಕು ಇದರ ಉದ್ದೇಶವೇ ಮಹಿಳೆಯರು ಸ್ವಾವಲಂಬಿಯಾಗಿ ತಮ್ಮನ್ನ ತಾವು ತೊಡಗಿಸಿಕೊಂಡು

ಕೆಲಸವನ್ನು ನಿರ್ವಹಿಸಿ ಸಾಕಷ್ಟು ರೀತಿಯ ಅನುಕೂಲವನ್ನು ಪಡೆದುಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರವು ಈ ರೀತಿಯ ಕ್ರಮವನ್ನು ಕೈಗೊಂಡಿದೆ. ಉದ್ಯೋಗಿನಿ ಯೋಜನೆಯ ಮೂಲಕ ಸ್ವಂತವಾಗಿ ಉದ್ಯೋಗ ಮಾಡಿ ಅನೇಕ ಜನರಿಗೂ ಉದ್ಯೋಗವನ್ನು ಕಲ್ಪಿಸುವುದೇ ಇದರ ಉದ್ದೇಶವಾಗಿದೆ.

ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಗ್ರಾಮ ಒನ್ ಕರ್ನಾಟಕ ಒನ್ ಬೆಂಗಳೂರು ಒನ್ ಈ ಮೂರು ಸೆಂಟರ್ ಗಳಲ್ಲಿ ಮಾತ್ರ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುತ್ತದೆ. ಮಹಿಳೆಯರಿಗೆ ಈ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎನ್ನುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ಕೂಡ ಇದರ ಸೌಲಭ್ಯವನ್ನು ಪಡೆದುಕೊಳ್ಳಲೇ ಬೇಕು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here