ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಆರೋಗ್ಯ ಯೋಜನೆ ಮತ್ತು ಹಾಸ್ಪಿಟಲ್ ಉಚಿತ ಎನ್ನುವ ಯೋಜನೆಯನ್ನು ಜಾರಿಗೆ ಗೊಳಿಸಿದೆ.

62

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಂತ ಗ್ಯಾರಂಟಿ ಯೋಜನೆಗಳಲ್ಲಿ ಎಲ್ಲರಿಗೆ ಅನುಕೂಲವಾಗುವಂತ ಯೋಜನೆಗಳನ್ನ ಜಾರಿಗೆ ತಂದಿದೆ ಅದರಲ್ಲೂ ಗೃಹ ಆರೋಗ್ಯ ಯೋಜನೆಯನ್ನು ಹೊಸ ಯೋಜನೆಯನ್ನು ಜಾರಿಗೆ ತಂದಿರುವುದನ್ನ ಕಾಣಬಹುದಾಗಿದೆ.

ಗೃಹ ಲಕ್ಷ್ಮಿ ಗೃಹಜೋತಿಯ ಆಧಾರದಲ್ಲಿಯೇ ಗೃಹ ಆರೋಗ್ಯ ಯೋಜನೆ ಎಂಬುದನ್ನು ಜಾರಿಗೆ ಗೊಳಿಸಿದೆ. ರಾಷ್ಟ್ರೀಯ ಆಹಾರದ ಯೋಜನೆ ಅಡಿಯಲ್ಲಿ ಈ ಯೋಜನೆಯ ಕೂಡ ರೂಪಿಸಿದ್ದಾರೆ. ಕ್ಯಾಬಿನೆಟ್ ಒಪ್ಪಿಗೆಯನ್ನ ಸಿಕ್ಕಿದ್ದೆ ಆದರೆ ಖಂಡಿತವಾಗಿಯೂ ಈ ಆರೋಗ್ಯ ಯೋಜನೆಯನ್ನು ಜಾರಿಗೆ ತರಲಾಗುತ್ತದೆ.

ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಎಂಟು ಜಿಲ್ಲೆಯಲ್ಲಿ ಈ ಯೋಜನೆಯನ್ನು ಆರಂಭ ಮಾಡಲು ನಿಂತನೆಯನ್ನ ನಡೆಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್ ಬೇರೆ ಬೇರೆ ರೀತಿಯ ಕಾಯಿಲೆಗಳು ಉಂಟಾಗಿರುವುದರಿಂದ ಇಂತಹ ಆರೋಗ್ಯ ಸಮಸ್ಯೆಗಳು ಏನಾದರೂ ಇದ್ದರೆ ಜನರು ನಿರ್ಲಕ್ಷ ಮಾಡುತ್ತಾರೆ.

ಆದ್ದರಿಂದ ಈ ಗೃಹ ಆರೋಗ್ಯ ಯೋಜನೆ ಜಾರಿಗೆ ತಂದಿರುವುದರಿಂದ ಯಾರೆಲ್ಲ ವ್ಯಕ್ತಿಯು ನಿರ್ಲಕ್ಷ ಮಾಡುತ್ತಾರೋ ಅವರನ್ನ ಪತ್ತೆ ಮಾಡಲು ಸಾಧ್ಯವಾಗುತ್ತದೆ ಎನ್ನುವ ಚಿಂತನೆಯನ್ನು ಹೊಂದಿದ್ದಾರೆ. ಸಿಬ್ಬಂದಿಗಳನ್ನು ಮನೆಯ ಬಾಗಿಲಿಗೆ ಕಳಿಸಿ ಆರೋಗ್ಯವನ್ನು ವಿಚಾರಣೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.

ಐದು ಸಾವಿರ ಜನರಿಗೆ ಆರೋಗ್ಯ ಇಲಾಖೆಯಿಂದ ಆರೋಗ್ಯ ಕ್ಷೇಮ ಕೇಂದ್ರವನ್ನ ಸ್ಥಾಪನೆ ಮಾಡಲಾಗಿದೆ. ಆರೋಗ್ಯ ಕ್ಷೇಮ ಕೇಂದ್ರದಲ್ಲಿರುವ ಅಧಿಕಾರಿ ಸಮುದಾಯ ಕಾರ್ಯಕರ್ತರ ಜೊತೆ ಮನೆಮನೆಗೂ ಭೇಟಿಯನ್ನ ಮಾಡಿ ಬಿ ಪಿ ಶುಗರ್ ಕ್ಯಾನ್ಸರ್ ನನ್ನ ಪರೀಕ್ಷೆ ಮಾಡಿ ಈ ರೀತಿಯ ಕಾಯಿಲೆಗಳು ಇರುವುದು

ಏನಾದರೂ ಪತ್ತೆಯಾಗಿದ್ದರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳನ್ನ ಶಿಫಾರಸು ಮಾಡಿ ಅಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಮನೆ ಮನೆಗಳಿಗೆ ಔಷಧಿಯನ್ನು ಪೂರೈಕೆ ಮಾಡಲಾಗುತ್ತದೆ. ಆಶಾ ಕಾರ್ಯಕರ್ತೆಗಳ ಮೂಲಕ ಪ್ರತಿ ತಿಂಗಳು ರವಾನೆ ಮಾಡುವ ಉದ್ದೇಶ ಈ ಯೋಜನೆ ಅಡಿಯಲ್ಲಿ ಬರುತ್ತದೆ. ಡಯಾಬಿಟಿಸ್ ಅನ್ನು ಸಾಕಷ್ಟು ಜನರು ನಿರ್ಲಕ್ಷ ಮಾಡುತ್ತಾರೆ,

ಆದ್ದರಿಂದ ಅದು ಬೇರೆ ಕಾಯಿಲೆಗಳು ಉದ್ಭವವಾಗುವ ಸಾಧ್ಯತೆ ಇದೆ. ಈ ರೀತಿಯ ಯೋಜನೆಯ ಕಾಂಗ್ರೆಸ್ ಜಾರಿಗೆ ತರಲಾಗುತ್ತದೆ ಮತ್ತು ಹಾಸ್ಪಿಟಲ್ ನ ಬಿಲ್ ಕೂಡ ಉಚಿತವಾಗಿರುತ್ತದೆ ಇದರಿಂದ ಎಲ್ಲರೂ ಕೂಡ ಸದುಪಯೋಗ ಮಾಡಿಕೊಳ್ಳಬೇಕು ಎಂಬುವ ಉದ್ದೇಶವನ್ನು ಹೊಂದಿದೆ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here