ಕಾಂಗ್ರೆಸ್ ಸರಕಾರ ಚಿಂತನೆ ಮಾಡುವುದನ್ನು ಬಿಟ್ಟು ಕ್ರಮ ಕೈಗೊಳ್ಳಬೇಕು.

47

ನಮಸ್ತೆ ಸ್ನೇಹಿತರೆ, ಗೋಹತ್ಯೆ ನಿಷೇಧ ತಿದ್ದುಪಡಿ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ಮಾಡಿರುವುದು ಹಾಗೂ ಗ್ಯಾರಂಟಿ ಘೋಷಣೆ ಪೂರ್ಣ ಪ್ರಮಾಣದ ಜಾರಿಯಾಗಿಲ್ಲ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ, ಮಂಗಳವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಆಯೋಜನೆ ಮಾಡಲಾಗಿತ್ತು.

ರಾಜ್ಯ ಸರ್ಕಾರ ವಚನ ಭ್ರಷ್ಟ ಹಾಗೂ ಹಿಟ್ಲರ್ ಸರ್ಕಾರ ಆಗಿದೆ ಎಂದು ಬಿಜೆಪಿ ಆರೋಪ ಮಾಡಿದೆ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯನ್ನು ಗೋ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು, ಹೊಸ ಸರ್ಕಾರ, ಬಿಜೆಪಿ ಅವಧಿಯಲ್ಲಿ ಜಾರಿಯಲ್ಲಿದ್ದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಮುಂದುವರಿಸಬೇಕು.

ಎಲ್ಲರಿಗೂ ಉಚಿತವಾಗಿ 200 ಯೂನಿಟ್ ವಿದ್ಯುತ್ ಕೊಡಬೇಕು, ಯಾವುದೇ ಕಾರಣಕ್ಕೂ ವಿದ್ಯುತ್ ದರ ಹೆಚ್ಚಳ ಮಾಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಗ್ಯಾರಂಟಿಗಳ‌ ಯೂಟರ್ನ್ ಹೊಡೆಯುತ್ತಿದೆ ಸರ್ಕಾರ ಎಂದು‌ ಕಿಡಿಕಾರಿದರು, ಸಾವಿರ ಸುಳ್ಳು ಹೇಳಿ ಸರ್ಕಾರ ತಂದಿದ್ದಾರೆ,

ಅಧಿಕಾರಕ್ಕೆ ಬಂದ ಬಳಿಕ ಇದೀಗ ಉತ್ತರ ಕೊಡಬೇಕಾಗಿದೆ, ಇನ್ನು ಮುಂದೆ ಗ್ಯಾರಂಟಿ ಅಂದರೆ ಸುಳ್ಳು ಎಂಬಂತಾಗಿದೆ ಎಂದು ಕಿಡಿಕಾರಿದರು. ಪರಿಷತ್ ಸದಸ್ಯ ಕೇಶವ ಪ್ರಸಾದ್ ಮಾತನಾಡಿ, ‌ಉಚಿತ ಎಂದು ಘೋಷಣೆ ಮಾಡಿದ್ದರು, ವೇದಿಕೆ ಮೇಲೆ ಇದ್ದ ಎಲ್ಲರಿಗೂ ಕರೆಂಟ್ ಉಚಿತ ಎಂದಿದ್ದರು. ಮೊದಲ ಕ್ಯಾಬಿನೆಟ್ ನಲ್ಲಿ ಈಡೇರಿಸುವ ಭರವಸೆ ಕೊಟ್ಟಿದ್ದರು, ಆದರೆ ನೂರೆಂಟು ಷರತ್ತುಗಳನ್ನು ಹಾಕಿದ್ದಾರೆ,

ಇವಾಗ ಗೊಂದಲಮಯ ವಾತಾವರಣ ಸೃಷ್ಟಿ ಮಾಡಿದ್ದಾರೆ. ಮಹಿಳೆಯರಿಗೆ ಎರಡು ಸಾವಿರ ರೂಪಾಯಿ ಕೊಡುವ ಮೂಲಕ ಮನೆಯನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ, ನಿರುದ್ಯೋಗಿಗಳಿಗೆ ಮೂರು ಸಾವಿರ ಕೊಡುತ್ತೇವೆ ಎಂದವರು ಇವಾಗ 2022-23 ಅವಧಿಗೆ ಎಂದು ಷರತ್ತು ಹಾಕಿದ್ದಾರೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಅಶ್ವತ್ಥ ನಾರಾಯಣ, ವಿಧಾನಪರಿಷತ್ ಸದಸ್ಯರಾದ ಛಲವಾದಿ ನಾರಾಯಣ ಸ್ವಾಮಿ, ಎನ್ ರವಿಕುಮಾರ್, ಕೇಶವ ಪ್ರಸಾದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ‌

ನಿಮಗೆ ಬಂದಿರುವ ಎಲ್ಲಾ ಕಷ್ಟಗಳು ತುಂಬಾ ಬೇಗನೇ ಪಾರಿಹಾರ ಆಗ್ಬೇಕು ಅಂದ್ರೆ ಈ ತಕ್ಷಣ ಕರೆ ಮಾಡಿರಿ 9620569954 ಧರ್ಮಸ್ಥಳದಲಿ ಇರುವ ಮಾರುತಿ ಗುರುಜೀ ರವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದು ಖ್ಯಾತಿ ಹೊಂದಿದ್ದಾರೆ, ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನ್ ನಲ್ಲೆ ಪರಿಹಾರ ಕೊಡುತ್ತಾರೆ, ಒಮ್ಮೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ರವರು.

LEAVE A REPLY

Please enter your comment!
Please enter your name here