ಒಂದೇ ಒಂದು ಲಿಂಕ್ ಕ್ಲಿಕ್ ಮಾಡಿದ್ದಕ್ಕೆ 7 ಲಕ್ಷ ಖಾಲಿ
ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿಗೆ ಆನ್ಲೈನ್ ನಲ್ಲಿ ಮೋಸ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ ಹೀಗಾಗಿ ಯಾರಾದರೂ ಲಿಂಕ್ ಅಥವಾ ವೆಬ್ ಓಪನ್ ಮಾಡಬೇಕು ಎನ್ನುವವರು ತುಂಬಾ ಎಚ್ಚರದಿಂದ ಇರಿ, ಇಲ್ಲೊಬ್ಬ ವ್ಯಕ್ತಿ ಬರೀ ಲಿಂಕ್ ಕ್ಲಿಕ್ ಮಾಡಿದ್ದಕ್ಕೆ 7 ಲಕ್ಷ ಹಣ ಕಳೆದುಕೊಂಡಿದ್ದಾರೆ.
ಯಾರೇ ಆದರೂ ಕೂಡ ಓಟಿಪಿ ಬರುತ್ತದೆ ಅಥವಾ ಲಿಂಕ್ ಗಳು ಬರುತ್ತದೆ ಎಂದರೆ ಅಥವಾ ಆಪ್ ಬಗ್ಗೆ ಮಾಹಿತಿ ಬರುತ್ತದೆ ಎಂದರೆ ಯಾವುದೇ ಕಾರಣಕ್ಕೂ ಕೂಡ ಅದನ್ನ ಕ್ಲಿಕ್ ಮಾಡಲು ಹೋಗಬೇಡಿ. ಒಂದು ವೇಳೆ ಹೋಗಿದ್ದೆ ಆದರೆ ನಿಮ್ಮ ಹಣ ಖಾಲಿಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ನಡೆದಂತಹ ಘಟನೆ ಇದಾಗಿದೆ ಒಂದು ಲಿಂಕ್ ಮೊಬೈಲಿಗೆ ಬರುತ್ತದೆ ಅದನ್ನು ಕ್ಲಿಕ್ ಮಾಡಿದ್ದಕ್ಕೆ ಏಳು ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.
ಮೆಸೇಜ್ ಹೇಗೆ ಬಂದಿದೆ ಎಂದರೆ ನಿಮ್ಮ ಸಿಮ್ ಕಾರ್ಡ್ ಕೆಲವೇ ಗಂಟೆಗಳಲ್ಲಿ ನಿಷ್ಕ್ರಿಯ ವಾಗುತ್ತದೆ ಮತ್ತೆ ನವೀಕರಣಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ ಇಲ್ಲವಾದರೆ ಕೆಲವೇ ಗಂಟೆಗಳಲ್ಲಿ ಸಿಮ್ ನಿಷ್ಕ್ರಿಯ ವಾಗುತ್ತದೆ ಮತ್ತೆ ಈ ನಂಬರ್ ನಿಮಗೆ ಸಿಗುವುದಿಲ್ಲ ಎಂದು ಒಂದು ಲಿಂಕ್ ಅನ್ನ ನೀಡಿರುತ್ತಾರೆ.
ಅವರು ಕ್ಲಿಕ್ ಮಾಡಿದ ನಂತರ ಮೊಬೈಲ್ ಗೆ ಒಂದು ಒಟಿಪಿ ಬರುತ್ತದೆ ಅದನ್ನು ಯಾರೂ ಕೂಡ ಕೇಳುವುದಿಲ್ಲ ಆದರೆ ಅವರ ನೆಟ್ವರ್ಕ್ಗಳು ಸಂಪೂರ್ಣವಾಗಿ ಸ್ಥಗಿತವಾಗಿ ಬಿಡುತ್ತದೆ.
ಇದನ್ನು ಸಹ ಓದಿ:
ಸ್ವಂತ ಆಸ್ತಿಯನ್ನು ಹೊಂದಿರುವವರಿಗೆ ಹೊಸ ನಿಯಮ ಜಾರಿ
5 ಎಕರೆ ಜಮೀನನ್ನು ರೈತರು ಹೊಂದಿದ್ದರೆ ಅಂತವರಿಗೆ ಭರ್ಜರಿ ಗುಡ್ ನ್ಯೂಸ್
ಉಚಿತ ಆಧಾರ್ ಕಾರ್ಡ್ ಗಳನ್ನು ನವೀಕರಣ ಮಾಡಿಕೊಳ್ಳಲು ದಿನಾಂಕ ಗಡವು
ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಕೂಡ ಗುಡ್ ನ್ಯೂಸ್
ನಂತರ ಅವರು ಹತ್ತಿರದಲ್ಲಿರುವ ಮೊಬೈಲ್ ಶಾಪ್ ಗೆ ತೆಗೆದುಕೊಂಡು ಹೋಗಿ ಮೊಬೈಲ್ ನೆಟ್ವರ್ಕ್ ಏನಾಗಿದೆ ಎಂದು ಕೇಳುವ ತಕ್ಷಣದಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಬೇರೆಯವರ ಖಾತೆಗೆ ವರ್ಗಾವಣೆ ಆಗಿದೆ ಎಂಬುವ ಮಾಹಿತಿ ಹೊರ ಬರುತ್ತದೆ.
ಆ ವ್ಯಕ್ತಿಯು ಬ್ಯಾಂಕಿಗೆ ಹೋಗಿ ಮಾಹಿತಿಯನ್ನು ಪಡೆಯಲು ಮುಂದಾಗುತ್ತಾರೆ. ಬ್ಯಾಂಕಿಗೆ ಹೋಗಿ ಕೇಳಿದಾಗ ಆ ವ್ಯಕ್ತಿಗೆ ಬ್ಯಾಂಕಿನವರು ಹೇಳುತ್ತಾರೆ. ನಿಮ್ಮ ಹಣವನ್ನು ಬೇರೆಯವರ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತದೆ.
ಇತ್ತೀಚೀನ ದಿನಗಳಲ್ಲಿ ನೆಟ್ವರ್ಕ್ ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಹಣವನ್ನು ಸಂಪಾದನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತ ಇದೆ. ಅವರದೇ ಒಂದು ಗ್ಯಾಂಗ್ ಕೂಡ ಇದೆ.
ಕೆಲವೊಂದು ಇಷ್ಟು ಕಡೆ ಸಿಮ್ ಗಳನ್ನ ಕದ್ದು ಈ ರೀತಿಯಾಗು ಕೂಡ ಮಾಡುತ್ತಾರೆ. ನೆಟ್ವರ್ಕ್ ಗಳನ್ನ ಬಂದ್ ಮಾಡಿಯೂ ಕೂಡ ಈ ರೀತಿಯ ಸ್ಕ್ಯಾಮ್ ಗಳು ಮಾಡುತ್ತಾರೆ.
ಬೇರೆ ಬೇರೆ ರೀತಿಯ ಸ್ಕ್ಯಾಮ್ ಗಳು ಕೂಡ ನಡೆಯುತ್ತಾ ಇರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಹಣವನ್ನ ಹೊಂದಿರುವವರು ಎಚ್ಚರದಿಂದ ಇರಲೇಬೇಕು. ಒಂದು ವೇಳೆ ನೀವು ಸಣ್ಣ ತಪ್ಪುಗಳನ್ನ ಮಾಡಿದರೆ ಅದುವೇ ದೊಡ್ಡ ಸಮಸ್ಯೆಗಳಾಗಬಹುದು, ಪ್ರತಿಯೊಬ್ಬರೂ ಕೂಡ ಎಚ್ಚರದಿಂದ ಇರಿ.
ಮಾಹಿತಿ ಆಧಾರ: