22ನೇ ವಯಸ್ಸಿಗೆ ಎಮ್ಮೆ ಕದ್ದಿದ್ದಕ್ಕೆ 80ನೇ ವಯಸ್ಸಿಗೆ ಆ ವ್ಯಕ್ತಿ ಬಂಧನ ಪೊಲೀಸರಿಗೆ ಬಹುಮಾನ.

41

ನಮಸ್ಕಾರ ಪ್ರಿಯ ಸ್ನೇಹಿತರೇ, ಒಬ್ಬ ವ್ಯಕ್ತಿ 22 ವಯಸ್ಸಿನಲ್ಲಿದ್ದಾಗ ಎಮ್ಮೆಯನ್ನು ಕಳುವು ಮಾಡಿದ್ದರು. ಎಮ್ಮೆಯನ್ನು ಕದ್ದಿರುವುದು ಸರಿ ಆದರೆ ಅವರನ್ನ ಪೋಲೀಸರು 80ನೇ ವಯಸ್ಸಿನಲ್ಲಿ ಬಂಧಿಸಲಾಯಿತು. 2023ರಲ್ಲಿ ಅವರನ್ನು ಬಂಧಿಸಲಾಯಿತು.

ಎಮ್ಮೆಯನ್ನ ಕಳ್ಳತನ ಮಾಡಿ 58 ವರ್ಷಗಳಾದ ನಂತರ ಅವರನ್ನ ಬಂಧಿಸಿದ್ದಾರೆ ಪೊಲೀಸರು ಈ ಕೆಲಸವನ್ನು ಹುಡುಕಾಡಿದ್ದಾರೆ ಎಂದು ಅವರಿಗೆ ಪ್ರಶಸ್ತಿ ಬಹುಮಾನವನ್ನ ಕೂಡ ನೀಡಲಾಗಿದೆ. ಈ ವಿಷಯ ಸಾಕಷ್ಟು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.

ನಮ್ಮ ನಡುವೆಯೇ ಕೋಟಿ ಕೋಟಿ ಲೂಟಿಯನ್ನು ಮಾಡುವ ಜನರಿದ್ದಾರೆ, ಅವರ ಬಗ್ಗೆ ಹೆಚ್ಚು ಪೊಲೀಸರಾಗಿರಬಹುದು ಬೇರೆ ಯಾವುದೇ ವ್ಯಕ್ತಿಗಳು ತಲೆ ಕೆಡಿಸಿಕೊಳ್ಳುವುದಿಲ್ಲ. ಎಮ್ಮೆ ಕದ್ದಿದ್ದಕ್ಕೆ 58 ವರ್ಷಗಳಾದ ನಂತರ ಬಂಧನ ಮಾಡಿ, ನ್ಯಾಯಾಂಗಕ್ಕೆ ಒಳಪಡಿಸಿದ್ದೀರಲ್ಲ ಇದು ಯಾವ ರೀತಿಯಲ್ಲಿ ಒಳಿತು ಎಂಬುವ ಪ್ರಶ್ನೆಗಳು ಕೂಡ ಉಂಟಾಗುತ್ತಿವೆ.

ಮುರಳಿಧರ್ ಕುಲಕರಣಿ ಎನ್ನುವವರು ಎರಡು ಎಮ್ಮೆ ಮತ್ತು ಒಂದು ಎಮ್ಮೆ ಕರುವನ್ನ, 1965-1966 ಈ ಇಸುವಿಯಲ್ಲಿ ಕಳ್ಳತನವನ್ನ ಮಾಡಿರುತ್ತಾರೆ. ಗಣಪತಿ ವಿಠಲ ಮತ್ತು ಕಿಶನ್ ಚಂದ್ರ ಎನ್ನುವ ವ್ಯಕ್ತಿಯು ಅವರು ಮಹಾರಾಷ್ಟ್ರದವರು, ಅವರು ಎಮ್ಮೆಯನ್ನು ಕಳ್ಳತನ ಮಾಡಿರುವಾಗ ಅವರಿಗೆ 22 ವರ್ಷ ಇರಬಹುದು.

ಬೀದರ್ ನಲ್ಲಿ ಕುಲಕರಣಿಯವರು ದೂರನ್ನು ನೀಡಿದ್ದರು. ಇವರಿಬ್ಬರನ್ನ ಬಂದಿಸುತ್ತಾರೆ ಅವರಿಬ್ಬರಿಗೆ ಮತ್ತೆ ಜಾಮೀನು ಸಿಗುತ್ತದೆ. ಕೋರ್ಟಿಂದ ಮತ್ತು ಕೆಲವೊಂದಿಷ್ಟು ನೋಟಿಸ್, ಹೇಳಿಕೆಗಳನ್ನ ಪದೇ ಪದೇ ಅವರಿಗೆ ನೀಡುತ್ತಿದ್ದರು ಅವರಿಂದ ಯಾವುದೇ ರೀತಿ ಪ್ರತಿಕ್ರಿಯೆ ಎಂಬುದು ಬರುತ್ತಿರಲಿಲ್ಲ.

2006 ಕಿಶನ್ ಚಂದ್ರ ಎನ್ನುವರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಗಣಪತಿ ವಿಠಲ ಎನ್ನುವರು ಇರುತ್ತಾರೆ 58 ವರ್ಷಗಳಾದ ನಂತರ ಪೊಲೀಸರು 80 ವರ್ಷದ ಗಣಪತಿ ವಿಠಲ ಎನ್ನುವವರನ್ನ ಬಂಧಿಸಲು ಪ್ರಯತ್ನವನ್ನ ನಡೆಸುತ್ತಾರೆ.

ಗಣಪತಿ ವಿಠಲ ಎನ್ನುವವರನ್ನು ಬಂಧಿಸಿರುವುದರಿಂದಾಗಿ ಪೋಲಿಸರಿಗೆ ಪ್ರಶಂಸೆಗಳು ವ್ಯಕ್ತವಾಗುತ್ತದೆ. 22 ವಯಸ್ಸಿನಲ್ಲಿ ಎಮ್ಮೆ ಕದ್ದಿದ್ದಕ್ಕೆ 80ನೇ ವಯಸ್ಸಿನಲ್ಲಿ ಅವರನ್ನ ಬಂಧನ ಮಾಡಲಾಯಿತು ಇದು ಒಂದು ರೀತಿಯಲ್ಲಿ ಹೇಳಿದರೆ ಆಗಲೇ ನ್ಯಾಯ ಅವರಿಗೆ ಶಿಕ್ಷೆ ಕೊಡಿಸಬೇಕಾಗಿತ್ತು. ಆದರೆ ಇಷ್ಟು ವರ್ಷಗಳು 58 ವರ್ಷಗಳಾದ ನಂತರ ಈ ಪ್ರಯತ್ನವನ್ನ ಪೊಲೀಸರು ಮಾಡಿದ್ದಾರೆ ಎಂದು ಹೇಳಲಾಗಿದೆ.

ಕೊಲ್ಲೂರು ಶ್ರೀ ಮೂಕಂಬಿಕಾ ದೇವಿ ಆರಧಾನೆ ಮಾಡುವ ಗುರುಗಳು ಮತ್ತು ಪ್ರಖ್ಯಾತ ಜ್ಯೋತಿಶ್ಯ ವಿದ್ವಾನ್ ಶ್ರೀ ಶ್ರೀ ಸುರ್ಯ ಪ್ರಕಾಶ್ ಕುಡ್ಲ ರವರಿಂದ ನಿಮ್ಮ ಜೀವನದ ಎಲ್ಲಾ ಸಮಸ್ಯೆಗೆ FREE ಸಲಹೆ ಪಡೆಯೋಕೆ ಕರೆ ಮಾಡಿ 9620799909

ವೀಡಿಯೊ

LEAVE A REPLY

Please enter your comment!
Please enter your name here