12 ವರ್ಷದ ಬಾಲೆಯನ್ನ ಬಳಸಿ ರಸ್ತೆಗೆ ಎಸೆದ ದುರಾಳರು ಕಣ್ಣೀರುಡುತ್ತಾ ಎಂಟು ಕಿಲೋಮೀಟರ್ ನಡೆದು ಸಹಾಯಕ್ಕೆ ಬರಲಿಲ್ಲ ಜನ.

76

ನಮಸ್ಕಾರ ಪ್ರಿಯ ಸ್ನೇಹಿತರೇ, ಮಧ್ಯ ಪ್ರದೇಶದಲ್ಲಿ 12 ವರ್ಷದ ಬಾಲೆಯನ್ನ ನರ ರಾಕ್ಷಸರು ಬಳಸಿ ರಸ್ತೆಗೆ ಬಿಸಾಡಿದ್ದಾರೆ. ಆಕೆ ಅದೇ ಸ್ಥಿತಿಯಲ್ಲಿ ಬರೋ ಬರೀ 8km ನಡೆದಿದ್ದಾಳೆ ಆದರೆ ರಸ್ತೆ ಉದ್ದಕ್ಕೂ ಯಾರೂ ಕೂಡ ಆಕೆಯ ಸಹಾಯಕ್ಕೆ ಬರಲಿಲ್ಲ ಸದ್ಯ ಇಡೀ ದೇಶದಾದ್ಯಂತ ಈ ಘಟನೆಗೆ ಸಂಬಂಧಪಟ್ಟ ಹಾಗೆ ಚರ್ಚೆಗಳು ನಡೆಯುತ್ತವೆ.

ಅತ್ಯಂತ ಸೂಕ್ಷ್ಮವಾದ ಪ್ರಕರಣವಾಗಿದೆ. ಆದರೆ ಇಂಥ ಘಟನೆಗಳಿಗೆ ಯಾರೂ ಕೂಡ ಮುಕ್ತಾಯ ಎಂಬುದನ್ನ ಮಾಡುತ್ತಲೇ ಇಲ್ಲ. ನ್ಯಾಷನಲ್ ನ್ಯೂಸ್ ಚಾನೆಲ್ ಗಳು ಸಣ್ಣ ಸಣ್ಣ ವಿಷಯವನ್ನ ದೊಡ್ಡದಾಗಿ ಮಾಡುತ್ತಾ ಇರುತ್ತಾರೆ.

ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಚರ್ಚೆಗಳು ಕೂಡ ನಡೆಯುತ್ತಿಲ್ಲ. 12 ವರ್ಷದ ಬಾಲಕಿ ಅವಳನ್ನ ಯಾವುದೋ ಒಂದು ಗ್ಯಾಂಗ್ ಎತ್ತಿಕೊಂಡು ಹೋಗಿದೆ. ಅವಳನ್ನ ಮನಸ್ಸಿಗೆ ಬಂದಂತೆ ಬಳಸಿಕೊಂಡಿದ್ದಾರೆ.

ಆಶ್ರಮದ ಬಳಿ ಅವಳನ್ನ ಎಸೆದು ಹೋಗಿದ್ದಾರೆ ಆ ಬಳಿಕ ರಸ್ತೆ ರಸ್ತೆ ಅಳೆಯುತ್ತಾ ಇದ್ದಳು, ಎಂಟು ಕಿಲೋಮೀಟರ್ ನಡೆದುಕೊಂಡು ಹೋದರು ಕೂಡ ಆಕೆಯ ಸಹಾಯಕ್ಕೆ ಯಾರು ಕೂಡ ಬರಲಿಲ್ಲ. ಒಬ್ಬ ಅರ್ಚಕರು ಆಕೆಯನ್ನ ರಕ್ಷಣೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಒಂದು ಕಡೆ ಆಕೆಯನ್ನು ಬಳಸಿಕೊಂಡು ವಿಕೃತವಾದ ಮನಸ್ಥಿತಿ, ಅವಳು ಸಹಾಯವನ್ನು ಕೇಳಿ ಅಂಗಲಾಚಿದರೂ ಕೂಡ ಯಾರೂ ಕೂಡ ಅವಳ ಸಹಾಯಕ್ಕೆ ಬರದೇ ಇರುವ ಪರಿಸ್ಥಿತಿ. ಮಧ್ಯಪ್ರದೇಶದ ಉಜ್ಜಯಿನಿ ಭಾಗದಲ್ಲಿ ಈ ಘಟನೆ ನಡೆದಿದೆ.

ಆಕೆಯು ಯಾಕೆ ಅಲ್ಲಿ ಬಂದಿದ್ದಳು ಎಂಬುವ ವಿಷಯ ಯಾರಿಗೂ ತಿಳಿದಿಲ್ಲ ಆದರೆ ಅವಳನ್ನ ವಿಚಾರಿಸಬೇಕು ಅಂದುಕೊಂಡಿದ್ದರು ಕೂಡ ಅವಳು ತುಂಬಾ ಸುಸ್ತಾಗಿ ಹೋಗಿದ್ದಾಳೆ. ಆರೋಗ್ಯದ ಪರಿಸ್ಥಿತಿ ಹದಗೆಟ್ಟಿದೆ. ಆಕೆಯು ಉತ್ತರಪ್ರದೇಶದವಳು ಎಂದು ಹೇಳಲಾಗಿದೆ. ಆಕೆಯ ಹಿನ್ನೆಲೆ ಏನು ಎಂಬುದು ಯಾರಿಗೂ ಕೂಡ ತಿಳಿದಿಲ್ಲ.

ಆ ಗ್ಯಾಂಗ್ ಅವಳನ್ನ ಬಳಸಿಕೊಂಡು, ಒಂದು ದಂಡಿ ಆಶ್ರಮ ಎಂದು ಇದೆ ಆ ಆಶ್ರಮದ ಬಳಿ ಎಸೆದು ಹೋಗಿದ್ದಾರೆ. ನಂತರ ಅವಳು ಎಚ್ಚರ ಆಗಿದ್ದಾಳೆ ಎಚ್ಚರಾದ ನಂತರ ಅವಳಿಗೆ ವಿಪರೀತವಾಗಿ ರಕ್ತಸ್ರಾವ ಉಂಟಾಗಿದೆ. ಅವಳ ಬಟ್ಟೆ ಎಲ್ಲವೂ ಚೆಲ್ಲಾಪಿಲ್ಲಯಾಗಿದೆ.

ಅಲ್ಲಿ ದಾರಿಯಲ್ಲಿ ಸಿಗುವಂತ ಮನೆಯ ಬಾಗಿಲನ್ನು ತಟ್ಟುತ್ತಾ ಬರುತ್ತಾಳೆ. ಆದರೆ ಯಾರೂ ಕೂಡ ಅವಳಿಗೆ ಸಹಾಯವನ್ನು ಮಾಡಲಿಲ್ಲ. ಆಕೆಯ ಏನಾಗಿದೆ ಏನೋ ಕೇಳಲು ಕೂಡ ಜನರು ಮುಂದಾಗಲಿಲ್ಲ. ಒಬ್ಬ ದೊಡ್ಡ ಮನುಷ್ಯನ ಹತ್ತಿರ ಹೋದಾಗ ಆಕೆಯನ್ನ ಓಡಿಸುತ್ತಾನೆ.

ಆಕೆಯ ಪರಿಸ್ಥಿತಿಯನ್ನು ನಾವು ಊಹೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಈ ರೀತಿಯ ಘಟನೆ ನಡೆದಿದೆ ಆದರೆ ಅಲ್ಲೊಬ್ಬ ಅರ್ಚಕ ಅವಳಿಗೆ ಸಹಾಯ ಮಾಡಿದ್ದಾನೆ ಮುಂದಿನ ದಿನಗಳಲ್ಲಿ ಅವಳನ್ನ ವಿಚಾರಿಸಿ ಅವಳ ಹಿನ್ನೆಲೆ ಏನು ಎಂಬುದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿದೆ ಆದ್ದರಿಂದ ಜನರು ಇದರ ಕಡೆ ಹೆಚ್ಚು ಗಮನವನ್ನು ಹರಿಸಬೇಕು

ಜೀವನದಲ್ಲಿ ನೆಮ್ಮದಿ ಇಲ್ಲವೇ? ಅಥ್ವಾ ತುಂಬಾ ಸಮಸ್ಯೆ ನಲ್ಲಿ ಇದ್ದೀರಾ ಅಥ್ವಾ ಪ್ರೀತಿ ಪ್ರೇಮದಲ್ಲಿ ತುಂಬಾ ಸಮಸ್ಯೆಗಳು ಇದಲ್ಲಿ ಈ ತಕ್ಷಣ ನಮಗೆ ಕರೆ ಮಾಡಿ 9620799909

ಮಾಹಿತಿ ಆಧಾರ

LEAVE A REPLY

Please enter your comment!
Please enter your name here