ಪ್ರಪಂಚದಲ್ಲಿರುವ ಏಕೈಕ ಗರುಡ ದೇವಸ್ಥಾನ ಇದು ತುಂಬಾ ತುಂಬಾ ಶಕ್ತಿಶಾಲಿ ಸ್ಥಳ

131

ನಮಸ್ತೆ ಸ್ನೇಹಿತರೆ ಚಿನ್ನದ ನಾಡು ಏಷ್ಯಾ ಎರಡನೇಯ ಅತೀ ದೊಡ್ಡ ಟೊಮೆಟೊ ಮಾರುಕಟ್ಟೆ ಹೊಂದಿರುವ ಏಕೈಕ ಜಿಲ್ಲೆ ಕೋಲಾರ ಕುವಲಾಲಪುರ ಅಂತಾ ಕರೆಸಿಕೊಳ್ಳುತ್ತಿದ್ದ ಈ ಪ್ರದೇಶ ತದ ನಂತರ ಕೋಲಾರವಾಗಿದೆ

ಇದಷ್ಟೇ ಅಲ್ಲ ಅನೇಕ ಐತಿಹಾಸಿಕ ಹಿನ್ನೆಲೆಯುಳ್ಳ ಸ್ಥಳಗಳನ್ನ ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ ಈ ಜಿಲ್ಲೆಅದರಲ್ಲೊಂದು ಐತಿಹಾಸಿಕ ಸ್ಥಳ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೊಲದೇವಿ ಗ್ರಾಮದಲ್ಲಿರೋ ಗರುಡ ದೇವಸ್ಥಾನ.

ರಾಮಾಯಣ ಮತ್ತು ಮಹಾಭಾರತದ ಹಿನ್ನೆಲೆ ಹೊಂದಿರುವ ಸ್ಥಳ ಇದಾಗಿದ್ದು, ದ್ರಾವಿಡ ಶೈಲಿಯಲ್ಲಿ ದೇವಾಲಯ ನಿರ್ಮಾಣವಾಗಿದೆ ಭಾರತ ದೇಶದ ಪ್ರತಿ ಗ್ರಾಮದಲ್ಲಿಯು ವಿಷ್ಣುವಿನ ದೇವಾಲಯ ಇರುವುದು ಸರ್ವೆ ಸಾಮಾನ್ಯ

ಅದೇ ವಿಷ್ಣುವಿನ ವಾಹನವಾದ ಗರುಡನಿಗೆ ಇರುವ ದೇವಾಲಯಗಳು ಕೆಲವು ಮಾತ್ರ ಎಂದೇ ಹೇಳಬಹುದು ಅಂತಹ ದೇವಾಲಯಗಳಲ್ಲಿ ಕರ್ನಾಟಕದಲ್ಲಿನ ದೇವಾಲಯವು ಒಂದು.

ಈ ದೇವಾಲಯದ ಬಗ್ಗೆ ಅಷ್ಟುಪ್ರಚಾರ ಇಲ್ಲದೆ ಇರುವ ಕಾರಣದಿಂದ ಅಷ್ಟು ಪ್ರಾಮುಖ್ಯತೆಯನ್ನು ಪಡೆದಿರಲಿಲ್ಲ, ಆದರೆ ಪ್ರಸ್ತುತ ಉತ್ತಮವಾದ ಸಾರಿಗೆ ಸಂಪರ್ಕ ಹೊಂದುತ್ತಿರುವುದರಿಂದ ಇತ್ತೀಚೆಗೆ ಭಕ್ತರ ಸಂಖ್ಯೆ ಕೂಡ ಹೆಚ್ಚಾಗುತ್ತಾ ಇದೆ,

ಈ ದೇವಾಲಯದಲ್ಲಿ ಪ್ರಧಾನವಾಗಿ ಪೂಜೆಗಳನ್ನು ಮಾಡಿಸಿಕೊಳ್ಳುತ್ತಿರುವುದು ವಿಷ್ಣುವಿನವಾಹನವಾದ ಗರುಡ ಇಲ್ಲಿರುವ ಹಾಗೆ ಗರುಡ ಮೂರ್ತಿಯು ಪ್ರಪಂಚದಲ್ಲಿ ಬೇರೆ ಎಲ್ಲೂ ಇಲ್ಲ ಎಂದು ಸ್ಥಳೀಯರು ಹೇಳುತ್ತಾರೆ,

ಇಲ್ಲಿ ಗರುಡನು ಒಂದು ಕಾಲನ್ನು ಕೆಳಗೆ ಮಡಚಿ, ಮತ್ತೊಂದುಕಾಲಿನ ಮೇಲೆ ನಿಂತು, ಎಡ ಭುಜದ ಮೇಲೆ ಲಕ್ಷ್ಮೀ ದೇವಿಯನ್ನು ಹೊಂದಿದ್ದಾನೆ.

ಅಷ್ಟೇ ಅಲ್ಲ ಇಲ್ಲಿನ ವಿಗ್ರಹಕ್ಕೆ ಹಾವುಗಳು ಆಭರಣಗಳಾಗಿವೆ ಈ ಗರುಡ ದೇವರನ್ನು ದರ್ಶನ ಮಾಡಿದ್ರೆ 8 ರೀತಿಯ ಸರ್ಪ ದೋಷಗಳು ನಿವಾರಣೆಯಾಗುತ್ತವೆ

ಕಲ್ಯಾಣ ಭಾಗ್ಯ, ಸಂತಾನ ಭಾಗ್ಯ ಸೇರಿದಂತೆ ವೈದ್ಯಲೋಕಕ್ಕೆ ಸವಾಲಾದ ಹಲವು ಕಾಯಿಲೆಗಳು ಇಲ್ಲಿ ವಾಸಿಯಾಗಿವೆ, ವಾಮಾಚಾರ, ಮಾಟಮಂತ್ರಗಳ ನಿವಾರಣೆಗೆ ಬಂದ ಭಕ್ತ ಕೋಟಿಯನ್ನು ಗರುಡ ದೇವರು ರಕ್ಷಿಸಿದ್ದಾನೆ ಪ್ರತಿ ಶನಿವಾರ, ಭಾನುವಾರ ಇಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ,

ಗರುಡ ದೇವರ ದರ್ಶನ ಪಡೆದರೆ ಬೇಡಿದ್ದನ್ನು ನೀಡುತ್ತಾನೆ ಎಂಬ ಪ್ರತೀತಿ ಇಲ್ಲಿದೆ, ಇಲ್ಲಿಗೆ ಬಂದ ಸಾಕಷ್ಟು ಜನರು ಒಳಿತನ್ನು ಕಂಡಿದ್ದಾರೆ, ಹಾಗಾಗಿ ಇಲ್ಲಿಗೆ ನೆರೆಯ ಆಂಧ್ರ ಹಾಗೂ ತಮಿಳುನಾಡಿನ ಸಾವಿರಾರು ಭಕ್ತರು ಬಂದು ದರ್ಶನ ಪಡೆಯುತ್ತಾರೆ.

ನಿರುದ್ಯೋಗ, ಆರ್ಥಿಕ ಸಮಸ್ಯೆ, ಪ್ರೀತಿಯಲ್ಲಿ ಮೋಸ ಇನ್ನೂ ನಿಮ್ಮ ಹತ್ತಾರು ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ತಕ್ಷಣ ಕರೆ ಮಾಡಿರಿ 9620799909

LEAVE A REPLY

Please enter your comment!
Please enter your name here