ಗೃಹಲಕ್ಷ್ಮಿ ಯೋಜನೆಯ ಎರಡು ಮತ್ತು ಮೂರನೇ ಕಂತಿನ ಹಣ ನಿಮ್ಮ ಅಕೌಂಟಿಗೆ ಜಮಾ ಆಯ್ತಾ

39

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹ ಲಕ್ಷ್ಮಿ ಯೋಜನೆಯ ಎರಡು ಮತ್ತು ಮೂರನೇ ಕಂತಿನ ಹಣವನ್ನ ಬಿಡುಗಡೆ ಮಾಡಲಾಗಿದೆ ಆದ್ದರಿಂದ ಬಾಕಿ ಉಳಿದಿರುವಂತಹ ಮಹಿಳೆಯರ ಖಾತೆಗೆ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು ನೀವು ನಿಮ್ಮ ಬ್ಯಾಂಕ್ ಖಾತೆಗಳಿಗೆ ಹೋಗಿ ತಿಳಿದುಕೊಳ್ಳಬೇಕಾಗಿದೆ. ಅನೇಕ ಜನರಿಗೆ ಗೃಹಲಕ್ಷ್ಮಿ ಯೋಜನೆಯ ಎರಡು ಮತ್ತು ಮೂರನೇ ಕಂತಿನ ಹಣ ಜಮಾ ಆಗಿಲ್ಲ

ಅಂತವರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗುಡ್ ನ್ಯೂಸ್ ಅನ್ನ ನೀಡಿದ್ದಾರೆ. ತಾಂತ್ರಿಕ ಸಮಸ್ಯೆಗಳು ಇರುವಂತಹ ಮಹಿಳೆಯರ ಖಾತೆಗಳನ್ನು ಲಿಸ್ಟ್ ಮಾಡಿಕೊಂಡು ಅಂತವರ ಖಾತೆಗೆ ಹಣವನ್ನು ಜಮಾ ಮಾಡಲು ನಿರ್ಧರಿಸಿದ್ದಾರೆ. ಎರಡು ಮತ್ತು ಮೂರನೇ ಕಂತಿನ ಬಾಕಿ ಇರುವಂತಹ ಮಹಿಳೆಯರ ಖಾತೆಗೆ ಜಮಾವನ್ನ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಚಿವೆ ಆಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿರುವ ಮಾಹಿತಿ ಇದಾಗಿದೆ.

ಒಂದಿಷ್ಟು ಜಿಲ್ಲೆಯ ಅವರಿಗೆ ಎರಡು ಮತ್ತು ಮೂರನೇ ಕಂತಿನ ಹಣ ಬಾಕಿ ಉಳಿದಿದೆ ಅಂತ ಅವರ ಖಾತೆಗೆ ಹಣವನ್ನ ಜಮಾ ಮಾಡಲು ನಿರ್ಧರಿಸಿದ್ದಾರೆ. ಎರಡು ಮತ್ತು ಮೂರನೇ ಕಂತಿನ ಹಣ ಒಟ್ಟಿಗೆ ಜಮಾ ಮಾಡಿದ್ದಾರೆ. ಒಟ್ಟಿಗೆ ನಾಲ್ಕು ಸಾವಿರ ಹಣ ನಿಮ್ಮ ಖಾತೆಗೆ ಜಮಾ ಆಗಿದೆ. ಒಂದು ವೇಳೆ ಎರಡನೇ ಕಂತಿನ ಹಣ ಬಂದು ಮೂರನೇ ಕಂತಿನ ಹಣ ಬಂದಿಲ್ಲ ಎಂದು ಅವರಿಗೆ 2000 ಮಾತ್ರ ಜಮಾ ಆಗಿದೆ.

ಎರಡು ಮತ್ತು ಮೂರನೇ ಕಂತಿನ ಹಣ ಜಮಾ ಆಗಿರುವುದನ್ನು ಗಮನಿಸಬಹುದಾಗಿದೆ. ಯಾವ್ಯಾವ ಜಿಲ್ಲೆಯವರಿಗೆ ಹಣ ಬಿಡುಗಡೆಯಾಗಿದೆ ಎಂದರೆ ಬೀದರ್, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ರಾಯಚೂರು, ಚಿಕ್ಕಬಳ್ಳಾಪುರ, ಚಿಕ್ಕಮಂಗಳೂರು, ಶಿವಮೊಗ್ಗ, ತುಮಕೂರು, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಧಾರವಾಡ, ಉತ್ತರ ಕನ್ನಡ,

ಯಾದಗಿರಿ, ಗದಗ, ಬಳ್ಳಾರಿ, ಕಲಬುರ್ಗಿ, ಹಾಸನ, ವಿಜಯಪುರ ಹೀಗೆ ಅನೇಕ ಜಿಲ್ಲೆಯವರಿಗೆ ಬಾಕಿ ಉಳಿದಿರುವಂತಹ ಹಣವನ್ನ ಬಿಡುಗಡೆ ಮಾಡಲಾಗಿದೆ ಆದ್ದರಿಂದ ನೀವು ನಿಮ್ಮ ಬ್ಯಾಂಕ್ ಖಾತೆಗಳನ್ನು ಹೋಗಿ ಪರಿಶೀಲನೆ ಮಾಡುವುದು ಉತ್ತಮ ಎಲ್ಲರ ಖಾತೆಗೂ ಕೂಡ ಎರಡು ಮತ್ತು ಮೂರನೇ ಕಂತಿನ ಬಾಕಿ ಉಳಿದಿರುವಂತಹ ಹಣವನ್ನು ಜಮಾ ಮಾಡಲಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here