ಕರ್ನಾಟಕ ತೋಟಗಾರಿಕೆ ಇಲಾಖೆ ನಲ್ಲಿ ಉದ್ಯೋಗ ಖಾಲಿ ಇದೆ

127

ನಮಸ್ಕಾರ ಪ್ರಿಯ ಸ್ನೇಹಿತರೇ, ಕೆ ಎಲ್ ಇ ಕೃಷಿ ವಿಜ್ಞಾನ ಕೇಂದ್ರ ಬೆಳಗಾವಿಯಲ್ಲಿ ಖಾಲಿ ಇರುವಂತಹ ವಿವಿಧ ಹುದ್ದೆಗಳ ನೇಮಕಾತಿಯನ್ನು ಹೊರಡಿಸಲಾಗಿದೆ ನೀವು ಆಫ್ಲೈನ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಯಾವ ಯಾವ ಹುದ್ದೆಗಳು ಖಾಲಿ ಇವೆ ಎಂದರೆ ಹಿರಿಯ ಮುಖ್ಯಸ್ಥ ಮತ್ತು ವಿಜ್ಞಾನಿ ಒಂದು ಹುದ್ದೆ, ವಿಷಯ ತಜ್ಞರು ಒಂದು ಹುದ್ದೆ, ಚಾಲಕ ಟಿಐ ಒಂದು ಹುದ್ದೆ, ನುರಿತ ಬೆಂಬಲ ಸಿಬ್ಬಂದಿ ಒಂದು ಹುದ್ದೆ

ಈ ಒಂದು ಹುದ್ದೆಯಲ್ಲಿ ಯಾವುದಾದರೂ ಒಂದು ಹುದ್ದೆಗೆ ಮಾತ್ರ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕೆಂದರೆ ಯಾವೆಲ್ಲ ಶೈಕ್ಷಣಿಕ ಅರ್ಹತೆ ಹೊಂದಿರಬೇಕು ಎಂದರೆ ಐಟಿಐ ಮತ್ತು ಹತ್ತನೇ ತರಗತಿ ಹಾಗೂ ಸ್ನಾತಕೋತರ ಪದವಿಯನ್ನು ಪೂರ್ಣಗೊಳಿಸಿರುವಂತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ವಯೋಮಿತಿ 18 ವರ್ಷದಿಂದ 47 ವರ್ಷ ವಯಸ್ಸು ಮೀರಿರಬಾರದು ಹಾಗೂ ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗುತ್ತದೆ. ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅರ್ಜಿ ಶುಲ್ಕ ಇರುತ್ತದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಯಾವುದೇ ರೀತಿ ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ ಹಾಗೆ ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಸಾವಿರ ರೂಪಾಯಿ ಅರ್ಜಿ ಶುಲ್ಕವನ್ನು ವಿಧಿಸಲಾಗುತ್ತದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸಿದವರು ಆಯ್ಕೆ ಮಾಡಿ ಕೊಳ್ಳುವ ವಿಧಾನ ಅಭ್ಯರ್ಥಿಗಳಿಗೆ ಡ್ರೈವಿಂಗ್ ಟೆಸ್ಟ್ ಲಿಖಿತ ಪರೀಕ್ಷೆ ಹಾಗೂ ಸಂದರ್ಶನವನ್ನು ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗೆ ಆಯ್ಕೆ ಮಾಡಿಕೊಂಡ ನಂತರ ಸಂಬಳ ರೂ.30,000 ದಿಂದ 60 ಸಾವಿರದವರೆಗೆ ವೇತನವನ್ನು ನಿಗದಿಪಡಿಸಲಾಗಿದೆ.

ಇದು ಖಾಯಂ ಆದ ಉದ್ಯೋಗಗಳು, ಸರ್ಕಾರಿ ಉದ್ಯೋಗಗಳಾಗಿವೆ. ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ 25 ಅಕ್ಟೋಬರ್ 2023 ಆಗಿದೆ ಕೊನೆಯ ದಿನಾಂಕ 24 ನವೆಂಬರ್ 2023 ಈ ದಿನಾಂಕದೊಳಗೆ ಪ್ರತಿಯೊಬ್ಬರೂ ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದು. ನವೆಂಬರ್ 24ನೇ ತಾರೀಕು ಕೊನೆಯ ದಿನಾಂಕ ಈ ದಿನಾಂಕದ ಒಳಗೆ ಪ್ರತಿಯೊಬ್ಬರೂ ಕೂಡ ಅಗತ್ಯ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸಿ.

ಪ್ರಖ್ಯಾತ ಗುರುಗಳಿಂದ FREE KUBHER YANTRA ಪಡೆಯೋಕೆ ಕರೆ ಮಾಡಿ 9538446677

ಮಾಹಿತಿ ಆಧಾರ

LEAVE A REPLY

Please enter your comment!
Please enter your name here