ಟಿವಿ ವ್ಯವಸ್ಥೆಯು ಇಲ್ಲ ಸಾಮಾನ್ಯ ಕೈದಿಯಂತೆ ಜೈಲು ಉಟವನ್ನ ಮಾಡಿದರು.
ನಮಸ್ಕಾರ ಪ್ರಿಯ ಸ್ನೇಹಿತರೇ, ಚಿತ್ರದುರ್ಗದ ರೇಣುಕಾ ಸ್ವಾಮಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ದರ್ಶನ್ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನು ಸೇರಿಕೊಂಡಿದ್ದಾರೆ.
ಸಾಮಾನ್ಯ ವಿಚಾರಣಾ ಕೈದಿಯಂತೆ ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ ಕೊಲೆ ಪ್ರಕರಣ ಸಂಬಂಧಪಟ್ಟ ದರ್ಶನ್ ಗ್ಯಾಂಗ್ ಅನ್ನ ನ್ಯಾಯಾಂಗ ಬಂಧನಕ್ಕೆಪ್ಪಿಸಿದೆ ನ್ಯಾಯಾಲಯವು ಕೂಡ ಅವರನ್ನ ಬಂಧನದಲ್ಲಿ ಇರಿಸಬೇಕೆಂದು ಆದೇಶವನ್ನು ಕೂಡ ಹೊರಡಿಸಲಾಗಿದೆ.
ನ್ಯಾಯಾಲಯದಲ್ಲಿ ಜಾಮೀನು ಪಡೆಯುವವರೆಗೂ ಕೂಡ ದರ್ಶನ್ ಗ್ಯಾಂಗ್ ಸೆರೆಮನೆಯ ವಾಸ ಮುಂದುವರೆಯುತ್ತದೆ ಜೈಲಿನಲ್ಲಿ ಯಾವುದೇ ರೀತಿಯ ವಿಶೇಷವಾದ ಸೌಲಭ್ಯವನ್ನು ಪಡೆಯಲು ನಟ ದರ್ಶನ್ ಅವರಿಗೆ ನ್ಯಾಯಾಲಯವು ಅನುಮತಿಯನ್ನು ನೀಡಿಲ್ಲ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ವಿಶೇಷ ಭದ್ರತಾ ವಿಭಾಗದಲ್ಲಿ ದರ್ಶನ್ ಅವರು ಇದ್ದು ಮಹಿಳಾ ವಿಭಾಗದಲ್ಲಿ ಅವರ ಪ್ರಿಯತಮೆ ಆಗಿರುವಂತ ಪವಿತ್ರ ಗೌಡ ಅವರು ಇದ್ದಾರೆ ಇನ್ನುಳಿದ ಸಹಚರ ವಿತರಣಾಧೀನ ಕೈದಿಗಳ ವಿಭಾಗದಲ್ಲಿ ಪ್ರತ್ಯೇಕವಾಗಿ ಬಂಧನವಾಗಿದ್ದಾರೆ.
ದರ್ಶನ್ ಅವರು ಸಹಚರರ ಜೊತೆ ಮಾತನಾಡುತ್ತಾ ಕಾಲ ಕಳೆದಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಜೈಲಿನಲ್ಲಿ ಕೈದಿಗಳಿಗೆ ಹೇಗೆ ಊಟವನ್ನು ನೀಡಲಾಗುತ್ತದೆ ಅದರಲ್ಲೂ ಚಪಾತಿ, ಅನ್ನ, ಸಾಂಬಾರ್, ಮಜ್ಜಿಗೆಯನ್ನು ದರ್ಶನ್ ಕೂಡ ಸೇವಿಸಿದ್ದಾರೆ.
ಜೈಲಿನಲ್ಲಿ ಭಾನುವಾರ ಸೇರಿದಂತೆ ಸರ್ಕಾರಿ ರಜೆ ದಿನಗಳಲ್ಲಿ ಸಂದರ್ಶಕರ ಭೇಟಿಗೆ ಅವಕಾಶ ಇರುವುದಿಲ್ಲ ಅದು ದರ್ಶನ್ ಅವರ ನಿಯಮಗಳಿಗೂ ಕೂಡ ಅನ್ವಯವಾಗುತ್ತದೆ ದರ್ಶನ್ ಅವರ ಸಹಚರರ ಬೇಟಿಗೆ ಭಾನುವಾರ ಅವಕಾಶವನ್ನು ನೀಡಲಾಗಿಲ್ಲ ಎಂಬುದು ತಿಳಿಸಲಾಗಿದೆ.
ದರ್ಶನ್ ಅವರಿಗಿಂತ ಮುಂಚಿತವಾಗಿ ಜೈಲು ಸೇರಿದ ಪವಿತ್ರ ಗೌಡ ಅವರನ್ನು ಭೇಟಿಯಾಗಿ ಅವರ ಕುಟುಂಬದವರು ಬಟ್ಟೆ ನೀಡಿ ಹೋಗಿದ್ದಾರೆ.
ಶನಿವಾರದ ದಿನದಂದು ದರ್ಶನವರ ಕುಟುಂಬ ಸಂಜೆ ಸಮಯದಲ್ಲಿ ಬಂದಿತು ಆದರೆ ಅವರಿಗೆ ಭೇಟಿ ಮಾಡಲು ಅವಕಾಶ ಇರಲಿಲ್ಲ ನಂತರದಲ್ಲಿ ಸೋಮುವಾರದ ದಿನ ದರ್ಶನ್ ಅವರ ಕುಟುಂಬದ ಸದಸ್ಯರು ಹಾಗೂ ವಕೀಲರನ್ನ ನಿಯಮಾನಸಾರವಾಗಿ ಅವಕಾಶವನ್ನ ಕಲ್ಪಿಸಲಾಗಿದೆ.
ಇದನ್ನು ಸಹ ಓದಿ:
ಡಿ ಬಾಸ್ ಭೇಟಿ ಮಾಡಿ ನಂತರ ಕಣ್ಣೀರು ಹಾಕಿದ ಟೈಗರ್
ಖ್ಯಾತ ಯೌಟ್ಯೂಬರ್ ಹಿಂದಿದೆ ಒಂದು ದೊಡ್ಡ ಮಾಫಿಯಾ
ಸಿಎಂ ಸ್ಥಾನದಿಂದ ಕೆಳಗೆ ಇಳಿಯುವ ಸುದ್ದಿ ಕೊಟ್ಟಿದ್ದಾರಾ
ದರ್ಶನ್ ಅವರು ಬೇರೆ ಕೈದಿಗಳು ಹೇಗೆ ಇದ್ದಾರೋ ಅದೇ ರೀತಿಯಲ್ಲಿ ದರ್ಶನ್ ಅವರು ಕೂಡ ಯಾವುದೇ ವಿಶೇಷ ಸೌಲಭ್ಯವನ್ನ ಪಡೆಯದೆ ಟಿವಿಯ ವ್ಯವಸ್ಥೆ ಕೂಡ ಇಲ್ಲದೆ ಇದ್ದರೆ.
ಮುಂದಿನ ದಿನಗಳಲ್ಲಿ ಜಾಮೀನು ಅರ್ಜಿಯನ್ನು ಸಲ್ಲಿಸಿ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರು ಆರೋಪಿಗಳಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಸೋಮವಾರದ ಬಳಿಕ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ ಎಂಬುದಾಗಿ ಸೂಚಿಸಿದ್ದಾರೆ, ದರ್ಶನ್ ಅವರು ಎಲ್ಲಾ ಕೈದಿಗಳಂತೆ ಇವರು ಕೂಡ ಇದ್ದಾರೆ ಯಾವುದೇ ರೀತಿಯ ವಿಶೇಷ ಸೌಲಭ್ಯವನ್ನು ಕೂಡ ನೀಡಿಲ್ಲ.