ಹುಲಿ ಚರ್ಮದ ಮೇಲೆ ಎಲ್ಲಾ ಸ್ವಾಮೀಜಿಗಳು ಕುರೋದ್ಯಾಕೆ ಇದರ ಅಸಲಿ ಸತ್ಯ

63

ನಮಸ್ಕಾರ ಪ್ರಿಯ ಸ್ನೇಹಿತರೇ, ಹುಲಿ ಉಗುರಿನ ಬಗ್ಗೆ ಸಾಕಷ್ಟು ರೀತಿಯ ಚರ್ಚೆಗಳು ಉಂಟಾಗುತ್ತದೆ ಅಕ್ರಮವಾಗಿ ಉಗುರು ಗಳನ್ನು ಧರಿಸುವುದು ಕೂಡ ಅಪರಾಧ ಎಂದು ಕೆಲವಂದಿಷ್ಟು ಜನರಿಗೆ ತಿಳಿದಿರಲಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕೂಡ ತಿಳುವಳಿಕೆಯಾಗುತ್ತಾ ಇದೆ.

ರಾಜಕೀಯದವರು ಸ್ವಾಮೀಜಿಗಳು ಚಿತ್ರರಂಗದವರು ಬೇರೆ ಬೇರೆ ಸೆಲೆಬ್ರಿಟಿಗಳು ಕೂಡ ಇದನ್ನ ಧರಿಸುತ್ತಿದ್ದಾರೆ. ಹುಲಿ ಉಗುರಿಗೆ ಸಂಬಂಧಿಸಿದಂತೆ ವರ್ತೂರು ಸಂತೋಷ ಅವರು ಬಂಧನವಾಗುತ್ತಿದ್ದಂತೆಯೇ ಹುಲಿ ಉಗುರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ರೀತಿಯ ಚರ್ಚೆಗಳು ನಡೆಯುತ್ತಲೇ ಇದ್ದವು.

ಸ್ವಾಮೀಜಿ ಸೆಲೆಬ್ರಿಟಿ ಹಾಗೂ ರಾಜಕಾರಣಿಗಳು ಧರಿಸಿರುವುದು ಒಂದೊಂದೇ ವಿಷಯಗಳು ಹೊರಗೆ ಬರುತ್ತವೆ. ಹುಲಿ ಉಗುರುಗಳಿಗೆ ಸಂಬಂಧಿಸಿದಂತೆ ಸಾಕಷ್ಟು ರೀತಿಯ ಆಸಕ್ತಿಯನ್ನು ಜನರು ಹೊಂದಿದ್ದಾರೆ. ಅವಶೇಷಗಳ ಬಗ್ಗೆ ಹಿಂದಿನ ಕಾಲದಿಂದಲೂ ಕೂಡ ಸಾಕಷ್ಟು ಆಸಕ್ತಿಯನ್ನು ಜನ ಹೊಂದಿದ್ದಾರೆ.

ವನ್ಯಜೀವಿಗಳ ರಕ್ಷಣೆಗೆ ಸಂಬಂಧಿಸಿದಂತೆ ಕಾನೂನಿನಲ್ಲಿ ಸಾಕಷ್ಟು ರೀತಿಯ ನಿಯಮಗಳಿವೆ. ಕಾನೂನು ನಿಯಮಗಳನ್ನು ಜನರು ಮೀರಿ ಕಾಡು ಪ್ರಾಣಿಗಳನ್ನು ಬೇಟೆಯಾಗುತ್ತಿದ್ದಾರೆ, ಪ್ರಾಣಿಗಳನ್ನು ಕೊಂದ ಮಾಂಸ ಮೂಳೆ ಉಗುರು ಚರ್ಮ ಇತ್ಯಾದಿಗಳನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದಾರೆ.

ಪ್ರಾಣಿಗಳ ಅವಶೇಷಗಳಿಗೆ ಸಾವಿರಾರು ರೂಪಾಯಿ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಪುರಾತನ ಕಾಲದಿಂದಲೂ ಕೂಡ ಪ್ರಾಣಿಗಳ ಅವಶೇಷಗಳ ಬಗ್ಗೆ

ಇಷ್ಟೊಂದು ಆಸಕ್ತಿ ಇದೆ ಎಂಬುದನ್ನು ತಿಳಿಯೋಣ. ಹುಲಿ ಉಗುರನ್ನ ಧರಿಸಲು ಸೆಲೆಬ್ರಿಟಿ ರಾಜಕಾರಣಿಗಳು ಬೇರೆ ಬೇರೆ ವ್ಯಕ್ತಿಯು ಯಾಕೆ ಅಷ್ಟು ಆಸಕ್ತಿ ಹೊಂದಿರುತ್ತಾರೆ.

ಪುರಾಣಗಳಲ್ಲಿ ಹುಲಿಗೆ ಸಂಬಂಧಿಸಿದ ವಸ್ತುಗಳನ್ನು ಬಳಸುತ್ತಿದ್ದರು ಎಂಬುದನ್ನು ನಾವು ತಿಳಿದುಕೊಂಡಿದ್ದೆವು. ಚಿತ್ರಗಳು ಕಥೆಗಳನ್ನ ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ.

ಸ್ವಾಮೀಜಿಗಳು ಹಿಂದಿನ ದಿನಗಳಲ್ಲಿ ಹುಲಿಯ ಚರ್ಮವನ್ನು ಬಳಸುತ್ತಾರೆ. ಹುಲಿಯ ಚರ್ಮ ಬೆಚ್ಚಗಿನ ಅನುಭವವನ್ನು ನೀಡುತ್ತದೆ ಎನ್ನುವ ಉದ್ದೇಶದಿಂದ ಅದನ್ನ ಹಾಸಿಗೆಯನ್ನಾಗಿ ಮಾಡಿಕೊಳ್ಳುತ್ತಿದ್ದರು ಸ್ವಾಮೀಜಿಗಳು.

ಧ್ಯಾನವನ್ನು ಮಾಡುವಾಗ ಹುಲಿಯ ಚರ್ಮದ ಮೇಲೆ ಧ್ಯಾನ ಮಾಡುತ್ತಿದ್ದರು. ಋಷಿಮುನಿಗಳು ಹಿಂದಿನ ಕಾಲದಲ್ಲಿ ದಟ್ಟ ಅರಣ್ಯಗಳಲ್ಲಿ ಧ್ಯಾನವನ್ನು ಮಾಡುತ್ತಿದ್ದರು.

ಹುಲಿ ಚರ್ಮವನ್ನು ಶಿವನೂ ಕೂಡ ಧರಿಸಿದ್ದನು. ಈ ಹುಲಿಯ ಉಗುರುಗಳನ್ನು ಮನಸ್ಸಿಗೆ ಅಥವಾ ಹೃದಯಕ್ಕೆ ಹತ್ತಿರವಾಗುವಂತಹ ಜಾಗದಲ್ಲಿ ಅದನ್ನ ಬಳಸುತ್ತಾರೆ.

ಅದೃಷ್ಟ ಮತ್ತು ರಕ್ಷಣೆಯನ್ನು ತರುತ್ತದೆ ಎನ್ನುವ ಭಾವನೆಯಿಂದ ಧರಿಸುತ್ತಾ ಇದ್ದರು. ಹಿಂದಿನ ಕಾಲದಿಂದಲೂ ಕೂಡ ಇದನ್ನ ಅನುಸರಿಸಿಕೊಂಡು ಬಂದಿದ್ದಾರೆ.

ಈ ಪ್ರಾಣಿಗಳ ವಸ್ತುಗಳನ್ನ ಧರಿಸುವುದರಿಂದ ನಕಾರಾತ್ಮಕವಾಗಿ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎನ್ನುವ ಮನೋಭಾವ ಹೊಂದಿದ್ದಾರೆ.

ಮಾನಸಿಕವಾಗಿ ಸದೃಢವಾಗಿ ಇಡಲು ಕೂಡ ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಲಾಕೆಟ್ ಗಳನ್ನು ಟ್ರೆಂಡ್ ಆಗಿ ಬಳಸಲಾಗುತ್ತದೆ. ಸ್ವಾಮೀಜಿಗಳು ಹುಲಿಯ ಚರ್ಮದ ಮೇಲೆ ಕೂರಲು ಕಾರಣವೇನೆಂದರೆ ಧ್ಯಾನ ಮಾಡಲು ತುಂಬಾ ಯೋಗ್ಯವಾಗಿರುತ್ತದೆ ಮತ್ತು ರಕ್ಷಣೆಯನ್ನು ನೀಡುತ್ತದೆ ಎನ್ನುವ ಉದ್ದೇಶದಿಂದಾಗಿ ಇದನ್ನ ಬಳಸುತ್ತಾ ಇದ್ದರು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here