ಬಸವ ವಸತಿ ಯೋಜನೆಯಡಿಯಲ್ಲಿ ಸ್ವಂತ ಮನೆ ಮತ್ತು ಜಾಗ ಇಲ್ಲದವರು ಅರ್ಜಿ ಸಲ್ಲಿಸಿ

36

ನಮಸ್ಕಾರ ಪ್ರಿಯ ಸ್ನೇಹಿತರೇ, ಬಸವ ವಸತಿ ಯೋಜನೆಯಲ್ಲಿ ಸ್ವಂತ ಮನೆ ಮತ್ತು ಜಾಗ ಇಲ್ಲದವರು ಅರ್ಜಿಯನ್ನ ಸಲ್ಲಿಸಬಹುದು ಇದು ರಾಜ್ಯ ಸರ್ಕಾರ ತಂದಂತಹ ನಿಯಮವಾಗಿದೆ ಆದ್ದರಿಂದ ಸ್ವಂತ ಮನೆ ಅಥವಾ ಜಾಗ ಇಲ್ಲದೆ ಇರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರಮುಖ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸುವುದರಿಂದ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು. ಅನೇಕ ಜನರಿಗೆ ಯೋಜನೆಯಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು.

ರಾಜ್ಯದಲ್ಲಿ ವಾಸಿಸುವ ಜನರಿಗೆ ಇದರಿಂದ ಸದುಪಯೋಗ ಆಗುತ್ತದೆ. ಸ್ವಂತ ಮನೆಯನ್ನ ಕಟ್ಟಿಕೊಳ್ಳುವುದಕ್ಕೆ ಅನೇಕ ಜನರು ಗೃಹ ಸಾಲವನ್ನ ಮಾಡುತ್ತಾರೆ. ಜೀವನ ಪರ್ಯಂತ ಉಳಿತಾಯ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿಗಳು ಬಂದಿರುತ್ತವೆ. ಅಂತಹ ಪರಿಸ್ಥಿತಿಗಳನ್ನು ಸುಧಾರಿಸುವುದಕ್ಕೆ ಇದು ತುಂಬಾ ಪ್ರಮುಖವಾದದ್ದು ಎಂದು ಹೇಳಲು ಸಾಧ್ಯ. ಬಸವ ವಸತಿ ಯೋಜನೆ ಅಡಿಯಲ್ಲಿ ಯಾವೆಲ್ಲ ಸೌಲಭ್ಯಗಳಿವೆ ಎಂಬುದನ್ನು ತಿಳಿಯೋಣ.

ರಾಜ್ಯದಲ್ಲಿ ವಾಸಿಸುವ ದುರ್ಬಲ ವರ್ಗದವರು, ಬಡ ಕುಟುಂಬದವರು ತಮ್ಮದೇ ಆದ ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಳ್ಳುವುದಕ್ಕೆ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ಬಸವ ವಸತಿ ಯೋಜನೆಯ 2022 ರಲ್ಲಿ ಆರಂಭ ಮಾಡಲಾಗಿದೆ. 2500 ಕೋಟಿಗಿಂತ ಹೆಚ್ಚು ಹಣವನ್ನ ರಾಜ್ಯ ಸರ್ಕಾರದವರು ಈ ಯೋಜನೆಗಾಗಿ ಮೀಸಲಿಟ್ಟಿದೆ. ಎರಡು ಲಕ್ಷಕ್ಕಿಂತ ಹೆಚ್ಚು ಬಡ ಕುಟುಂಬಗಳು ರಾಜ್ಯದಲ್ಲಿ ನೆಲೆಸಿವೆ.

ಸ್ವಂತ ಮನೆಯನ್ನ ಕಟ್ಟಬೇಕು ಎನ್ನುವ ಆಸೆ ಆಕಾಂಕ್ಷೆಗಳನ್ನು ಹೊಂದಿರುತ್ತಾರೆ. ಆದರೆ ಕೆಲವೊಂದಿಷ್ಟು ಸಮಸ್ಯೆಗಳಿರುವುದರಿಂದ ಅವರು ಮನೆಯನ್ನ ಕಟ್ಟಲು ಸಾಧ್ಯವಾಗುವುದಿಲ್ಲ ರಾಜ್ಯ ಸರ್ಕಾರದವರು ಈ ಯೋಜನೆಯ ಸೌಲಭ್ಯವನ್ನು ಪ್ರತಿಯೊಬ್ಬರೂ ಕೂಡ ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದಾಗಿ ಈ ನಿಯಮವನ್ನು ಜಾರಿಗೆ ತಂದಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಕರ್ನಾಟಕದ ಮೂಲ ನಿವಾಸಿ ಆಗಿರಬೇಕು.

ವಾರ್ಷಿಕ ಆದಾಯ 32 ಸಾವಿರಕ್ಕಿಂತ ಒಳಗೆ ಇರುವವರು ಈ ಯೋಜನೆಯ ಸೌಲಭ್ಯವನ್ನ ಪಡೆದುಕೊಳ್ಳಬಹುದು ಬಸವ ವಸತಿ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬರಿಗೂ ಕೂಡ ಮನೆ ಅಥವಾ ಜಾಗ ಸಿಗಬೇಕು ಎಂಬುದು ರಾಜ್ಯ ಸರ್ಕಾರದ ತೀರ್ಮಾನವಾಗಿದೆ ಅದಕ್ಕಾಗಿಯೇ ಹಣವನ್ನು ಮೀಸಲಿಟ್ಟಿದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಯೋಜನೆಗಳ ಸೌಲಭ್ಯವನ್ನು ಪಡೆದುಕೊಳ್ಳುವುದು ಉತ್ತಮ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here