ಮಿಲಿಟರಿ ಇಂಜಿನಿಯರಿಂಗ್ ಸೇವೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ.
ನಮಸ್ಕಾರ ಪ್ರಿಯ ಸ್ನೇಹಿತರೇ, ಮಿಲಿಟರಿ ಇಂಜಿನಿಯರಿಂಗ್ ಸೇವೆ ಎಂಇಎಸ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ನೇಮಕಾತಿ ಹೊರಡಿಸಲಾಗಿದ್ದು ಈ ಹುದ್ದೆಗಳಿಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
6,000ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ, ಗ್ರೂಪ್ ಸಿ ಹುದ್ದೆಗಳಲ್ಲಿ ನೇಮಕಾತಿಯನ್ನು ಹೊರಡಿಸಲಾಗುತ್ತದೆ. ಈ ಹುದ್ದೆಗಳನ್ನು ನೀವು ಅರ್ಜಿ ಸಲ್ಲಿಕೆ ಆಯ್ಕೆಯಾದರೆ 56 ಸಾವಿರದಿಂದ ಒಂದು ಲಕ್ಷದ ವರೆಗೂ ಕೂಡ ವೇತನವನ್ನು ನೀಡಲಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ನೀವು ಕಾರ್ಯನಿರ್ವಹಿಸಬೇಕಾದರೆ ಭಾರತದ ಪ್ರತಿಯೊಂದು ಕಡೆಯಲ್ಲೂ ಕೂಡ ಈ ಹುದ್ದೆಗಳು ಖಾಲಿ ಇವೆ. ಆದ್ದರಿಂದ ಭಾರತದ ಕೆಲವೊಂದಿಷ್ಟು ಕಡೆ ನೀವು ಕರ್ತವ್ಯವನ್ನು ನಿರ್ವಹಿಸಬಹುದು, ಈ ಹುದ್ದೆಗಳಿಗೆ ಆನ್ಲೈನ್ ಗಳ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು.
ಮಿಲಿಟರಿ ಇಂಜಿನಿಯರಿಂಗ್ ಸೇವೆಯಲ್ಲಿ ಕಾರ್ಯ ನಿರ್ವಹಿಸಬೇಕು ಅಂದುಕೊಂಡಿರುವ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಅನೇಕ ರೀತಿಯ ಹುದ್ದೆಗಳು ಖಾಲಿ ಇದೆ ಆಯಾ ಹುದ್ದೆಗಳಿಗೆ ಅನುಗುಣವಾಗಿ ನೀವು ಅರ್ಜಿಯನ್ನು ಸಲ್ಲಿಸಬಹುದು
18 ವರ್ಷದಿಂದ 28 ವರ್ಷವಾಗಿರುವಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು, ವಯಸ್ಸಿನ ಸಡಿಲಿಕೆ ಕೂಡ ನೀಡಲಾಗುತ್ತದೆ. ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಐದು ವರ್ಷ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ನಿಗದಿಪಡಿಸಲಾಗಿದೆ.
ಈ ಹುದ್ದೆಗಳಿಗೆ ಅಗತ್ಯ ದಾಖಲೆಗಳ ಮೂಲಕ ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಶೈಕ್ಷಣಿಕ ಪ್ರಮಾಣಪತ್ರ, ಫೋಟೋ, ಆಧಾರ್ ಕಾರ್ಡ್ ಮತ್ತು ಕೆಲವೊಂದಿಷ್ಟು ದಾಖಲೆಗಳ ಆಧಾರದ ಮೇಲೆ ಈ ಹುದ್ದೆಗಳಿಗೆ ಆನ್ಲೈನ್ ಗಳ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬೇಕು.
ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ ನೂರು ರೂಪಾಯಿ ಅರ್ಜಿ ಶುಲ್ಕ ಎಸ್ಸಿ ಎಸ್ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ ನೀವು ಈ ಹುದ್ದೆಗಳಿಗೆ ಆನ್ಲೈನ್ ಗಳ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು.
ಇದನ್ನು ಸಹ ಓದಿ:
ವಿಜಯಲಕ್ಷ್ಮಿ ದರ್ಶನ್ ಮನ ಕುಲುಕುವ ಕಣ್ಣೀರು ಕಥೆ
ಬಿಪಿಎಲ್ ಕಾರ್ಡ್ ಗಳು ರದ್ದತಿ ಆಗುವ ಸಾಧ್ಯತೆ ಇದೆ?
ವಾಹನ ಸವಾರರಿಗೆ ಎರಡು ಹೊಸ ನಿಯಮ ಜಾರಿ
11ನೇ ಕಂತಿನ ಹಣ ಪಡೆಯಬೇಕು ಅಂದರೆ ಈ ಕೆಲಸ ಕಡ್ಡಾಯ
ದರ್ಶನ್ ಗೆ ಬೇಲ್ ಸಿಗುವುದು ಕಷ್ಟ ಯಾಕೆ?
ಈ ಹುದ್ದೆಗಳಿಗೆ ನೀವೇನಾದರೂ ಅರ್ಜಿ ಸಲ್ಲಿಸಿ ಆಯ್ಕೆಯಾದರೆ ಬೆಂಗಳೂರು ಸೇರಿದಂತೆ ಭಾರತದ ಪ್ರತಿಯೊಂದು ಕಡೆಯಲ್ಲೂ ಕೂಡ ತಮ್ಮ ಕರ್ತವ್ಯವನ್ನು ನಿರ್ವಹಿಸಬಹುದು.
ಸಂದರ್ಶನ ಮೂಲಕ ಹಾಗೂ ದೈಹಿಕ ಪರೀಕ್ಷೆಯ ಆಧಾರದ ಮೇಲೆ ಈ ಹುದ್ದೆಗಳಿಗೆ ನಿಮ್ಮನ್ನ ಆಯ್ಕೆ ಮಾಡಲಾಗುತ್ತದೆ. ಯಾರೆಲ್ಲಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಅಂದುಕೊಂಡಿದ್ದೀರಾ ಅರ್ಜಿ ಶುಲ್ಕವನ್ನ ಪಾವತಿಸಬೇಕು
ಹಾಗೆಯೇ ಲಿಖಿತ ಪರೀಕ್ಷೆ ಇರುವುದಿಲ್ಲ, ದೈಹಿಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಈ ಹುದ್ದೆಗಳಿಗೆ ನಿಮ್ಮನ್ನ ನೇಮಕ ಮಾಡಲಾಗುತ್ತದೆ, ಆದ್ದರಿಂದ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.