ಕೆಲವರಿಗೆ ಅಕ್ಕಿಯ ಹಣ ಯಾಕೆ ಬಂದಿಲ್ಲ ಈ ಡಾಕ್ಯುಮೆಂಟ್ ಕೊಡಬೇಕು ತಪ್ಪದೇ ಈ ಕೆಲಸ ಮಾಡಿ

70

ನಮಸ್ಕಾರ ಪ್ರಿಯ ಸ್ನೇಹಿತರೇ, ರೇಷನ್ ಕಾರ್ಡ್ ಇದ್ದವರಿಗೆ ಒಂದು ಹೊಸದಾದ ನಿಯಮ ಬಂದಿದೆ, ಆ ನಿಯಮ ಯಾವುದು ಎಂಬುದನ್ನ ತಿಳಿಯೋಣ. ಅನ್ನಭಾಗ್ಯ ಯೋಜನೆಯ ಅಕ್ಕಿಯ ಹಣ ನಿಮಗೆ ಬಂದಿಲ್ಲ ಎಂದರೆ ಈ ಮಾಹಿತಿಯನ್ನು ತಿಳಿದುಕೊಳ್ಳಿ. ಆಹಾರ ಮತ್ತು ನಾಗರಿಕರ ಇಲಾಖೆ ತಿಳಿಸಿರುವ ಪ್ರಕಾರ ಈ ಮೂರು ದಾಖಲೆಗಳನ್ನು ನೀಡಿದ್ದೆ ಆದರೆ ನೀವು ಅಕ್ಕಿಯ ಹಣ ಪಡೆದುಕೊಳ್ಳಬಹುದು.

ಯಾವುದೇ ತಿಂಗಳ ಅಕ್ಕಿಯ ಹಣ ಬಂದಿಲ್ಲ ಎಂದರೆ ಈ ಮಾಹಿತಿಯನ್ನು ನೀವು ತಿಳಿಯಲೇಬೇಕು. ಕೆಲವೊಂದಿಷ್ಟು ಡಾಕ್ಯುಮೆಂಟ್ ಗಳನ್ನ ನೀಡಲೇಬೇಕು ಎಂದು ತಿಳಿಸಿದ್ದಾರೆ. ಒಬ್ಬರಿಗೆ ಆಗಸ್ಟ್ ತಿಂಗಳಿನ ಹಣ ಬಂದಿಲ್ಲ ಇನ್ನೂ ಕೆಲವೊಬ್ಬರಿಗೆ ಜುಲೈ ತಿಂಗಳ ಹಣ ಬಂದಿಲ್ಲ ಹಾಗೆ ಸೆಪ್ಟೆಂಬರ್ ತಿಂಗಳ ಹಣ ಬಂದಿಲ್ಲ. ಕೆಲವೊಂದಿಷ್ಟು ಜನರಿಗೆ ಅಕ್ಕಿಯ ಹಣ ಬಂದಿಲ್ಲ,

ಅಕ್ಕಿ ಹಣ ಬಂದಿಲ್ಲ ಎಂದವರಿಗೆ ಕೆಲವಂದಿಷ್ಟು ಜನರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವುದು, ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಗಳಲ್ಲಿ ನಿಮ್ಮ ಹೆಸರು ಒಂದೇ ರೀತಿಯಲ್ಲಿ ಇರಬೇಕು. ಒಂದು ವೇಳೆ ಬದಲಾವಣೆ ಇದ್ದರೆ ಅಲ್ಲೂ ಕೂಡ ನೀವು ಹಣವನ್ನು ಪಡೆಯಲು ಸಾಧ್ಯವಿಲ್ಲ. ಎಷ್ಟು ಜನರು ಅಕ್ಕಿಯನ್ನು ಪಡೆಯುವ ಸಂದರ್ಭ ದಲ್ಲಿ ರೇಷನ್ ಕಾರ್ಡ್ ಗಳ ತಿದ್ದುಪಡಿ ಮಾಡಿದ್ದಾರೆ

ಇದರಿಂದಾಗಿ ಅವರಿಗೆ ಅಕ್ಕಿಯ ಹಣ ಎಂಬುದು ಜಮಾ ಆಗುತ್ತಿಲ್ಲ. ಪ್ರಮುಖ ಕಾರಣಗಳಿಂದ ನಿಮಗೆ ಅಕ್ಕಿಯ ಹಣ ಎಂಬುದು ಜಮಾ ಆಗೋದಕ್ಕೆ ಕೆಲವೊಂದಿಷ್ಟು ತೊಂದರೆಗಳು ಉಂಟಾಗುತ್ತಾ ಇರಬಹುದು. ಯಾರಿಗೆ ಇನ್ನು ಅಕ್ಕಿ ಹಣ ಜಮಾ ಆಗಿಲ್ಲ ಅಂತವರು ಈ ಪ್ರಮುಖ ದಾಖಲೆಗಳನ್ನು ನೀಡುವ ಮೂಲಕ ನೀವು ಅಕ್ಕಿಯ ಹಣವನ್ನು ಪಡೆದುಕೊಳ್ಳಲು ಸಾಧ್ಯ.

ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಈ ದಾಖಲೆಗಳನ್ನು ನೀವು ಹತ್ತಿರದಲ್ಲಿರುವ ರೇಷನ್ ಅಂಗಡಿಗಳಿಗೆ ನೀಡುವುದರಿಂದ ಅಲ್ಲಿ ನೀವು ಯಾಕೆ ಹಣ ಬರುತ್ತಿಲ್ಲ ಎಂಬುವ ಸ್ಪಷ್ಟವಾದ ಮಾಹಿತಿಯನ್ನ ತಿಳಿಸಿ ಸರಿಪಡಿಸಿರುತ್ತಾರೆ ನಂತರದಲ್ಲಿ ನಿಮಗೆ ಮುಂದಿನ ದಿನಗಳಿಂದ ಅಕ್ಕಿಯ ಹಣ ಎಂಬುದು ಜಮಾ ಆಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here