Wednesday, February 5, 2025
Homeದೇವರುಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಹೆಣ್ಣು ಮಗಳ ಬಾಳನ್ನು ಹಸನಾಗಿಸಿದ ಶ್ರೀ ಗುರುರಾಯರು

ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಹೆಣ್ಣು ಮಗಳ ಬಾಳನ್ನು ಹಸನಾಗಿಸಿದ ಶ್ರೀ ಗುರುರಾಯರು

ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಹೆಣ್ಣು ಮಗಳ ಬಾಳನ್ನು ಹಸನಾಗಿಸಿದ ಶ್ರೀ ಗುರುರಾಯರು

ತಂದೆ – ತಾಯಿ ದಿಕ್ಕು- ದಿಸೆಯಿಲ್ಲದ ಒಂದು ಕುಟುಂಬ. ಒಬ್ಬ ಹೆಣ್ಣುಮಗಳು ಹಾಗೂ ಆಕೆಗೆ ಇಬ್ಬರು ಅಣ್ಣ-ತಮ್ಮಂದಿರ ಜೊತೆಗೆ ಜೀವನ ಮಾಡುತ್ತಿರುತ್ತಾಳೆ. ಅವರ ಹಣೆಬರಹಕ್ಕೆ ಅವರು ಜಾಸ್ತಿ ವಿದ್ಯಾಭ್ಯಾಸವು ಸಹ ಮಾಡಿರುವುದಿಲ್ಲ. ಅವರ ವಿದ್ಯಾರ್ಹತೆಗಳ ಅನುಗುಣವಾಗಿ ಆಕೆ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿ ಆ ಹೆಣ್ಣುಮಗಳೆ ನೋಡಿಕೊಳ್ಳಬೇಕಾಗಿರುತ್ತದೆ. ಅಂತಹ ಒಂದು ಕೆಟ್ಟ ಬಡತನ ಅವರಿಗೆ ಕಾಡುತ್ತಾ ಇರುತ್ತದೆ. ಆಕೆಗೆ ಕೇವಲ ಆರು ಸಾವಿರ ರೂಪಾಯಿ ಸಂಬಳವಿರುತ್ತದೆ. ಬೆಂಗಳೂರಿನಂತಹ ಒಂದು ದೊಡ್ಡ ನಗರದಲ್ಲಿ ವಾಸಿಸುವ ಜನರಿಗೆ ಆರು ಸಾವಿರ ಹಣ ಬಹಳ ಕಡಿಮೆ.

 

ಅಲ್ಲಿ ವಾಸಿಸುವವರಿಗೆ ಸಂಬಳಕ್ಕಿಂತ ಖರ್ಚುಗಳೇ ಹೆಚ್ಚಾಗಿರುತ್ತದೆ 6,000 ಕೇವಲ ಒಂದು ವಾರದಲ್ಲಿ ಖರ್ಚಾಗುತ್ತದೆ. ಹಳ್ಳಿಯ ಕಡೆ ಹೇಗಾದರೂ ಜೀವನ ನಡೆಯುತ್ತದೆ ಆದರೆ ಸಿಟಿಗಳಲ್ಲಿ ಆರು ಸಾವಿರ ರೂಗಳಲ್ಲಿ ಜೀವನ ಮಾಡೋದು ಕಷ್ಟ ಹಾಗಾಗಿ ಆ ಹೆಣ್ಣು ಮಗಳು ರೋಸಿ ಹೋಗಿರುತ್ತಾಳೆ. ತಾನ್ನೊಬ್ಬಳೇ ದುಡಿದು ಅಣ್ಣ-ತಮ್ಮಂದಿರನ್ನು ಸಾಕಿ ಮನೆಯ ಖರ್ಚು ಎಲ್ಲವನ್ನು ನಿಭಾಯಿಸುವಂತಹ ಜವಾಬ್ದಾರಿ ಅವಳಿಗೆ ದೊಡ್ಡ ಹೊರೆಯಾಗಿರುತ್ತದೆ.

ಇಂತಹ ಕಡು ಬಡತನದಲ್ಲಿ ಬೇಯುತ್ತಿದ್ದ ಕುಟುಂಬಕ್ಕೆ ಮೂರು ಹೊತ್ತು ಊಟ ಮಾಡುವುದು ದೊಡ್ಡ ಒಂದು ಹಬ್ಬದ ರೀತಿ ಏಕೆಂದರೆ ಎಷ್ಟು ನಿಸ್ಸಹಯಕರಾಗಿರುತ್ತಾರೆ. ಅವಳ ತಮ್ಮಂದಿರು ಕೂಡ ಸಹ ಯಾವ ಕೆಲಸಕ್ಕೂ ಹೋಗುವುದಿಲ್ಲ ಅಂತಹ ಸಂದರ್ಭದಲ್ಲಿ ಆಕೆಗೆ ರಾಯರ ಮೇಲೆ ಭಕ್ತಿ ಶುರುವಾಗುತ್ತದೆ.

ಅವರ ಮನೆಯ ಪಕ್ಕದಲ್ಲಿಯೇ ರಾಯರ ಮಠವಿರುತ್ತದೆ ಆದರೆ ಎಂದು ಹೋಗಿ ಪೂಜೆ ಮಾಡುವುದಾಗಲಿ ಕೈಮುಗಿವುದಾಗಲಿ ಮಾಡಿರುವುದಿಲ್ಲ. ಆದರೆ ಒಂದು ಬಾರಿ ಆಕೆಗೆ ರಾಯರ ದರ್ಶನ ಮಾಡಬೇಕು ಎಂದು ಎನಿಸುತ್ತದೆ. ಅಲ್ಲಿ ರಾಯರ ದರ್ಶನ ಮಾಡಿ ಕೈಮುಗಿದು ಬಂದಾಗ ಅಲ್ಲಿ ಕೆಲವರು ರಾಯರ ಮಹಿಮೆಗಳನ್ನು ಹೇಳುತ್ತಿರುವುದನ್ನು ಕಂಡು ಆಕೆಗೆ ರಾಯರ ಮೇಲೆ ನಂಬಿಕೆ ಹೆಚ್ಚಾಗಿ ಒಂದು ಅಂಗೈ ಅಗಲದ ಒಂದು ರಾಯರ ಪುಟ್ಟ ಫೋಟೋವನ್ನು ತೆಗೆದುಕೊಂಡು ರಾಯರ ಫೋಟೋವನ್ನು ಮನೆಯಲ್ಲಿ ಇತ್ತು ಪೂಜೆ ಶುರು ಮಾಡುತ್ತಾಳೆ.

ರಾಯರ ಪವಾಡ ನೋಡಿ 

 

ಅವಳು ರಾಯರ ಮುಂದೆ ಬೇಡಿಕೊಳ್ಳುವುದೊಂದೇ ನಮ್ಮ ಈ ಕಡುಬಡತನವನ್ನು ನೀವು ದೂರ ಮಾಡಬೇಕು ನಾವು ಮೂರು ಹೊತ್ತು ಊಟವನ್ನು ಮಾಡುವಂತೆ ಈ ಬಡತನದಿಂದ ಸ್ವಲ್ಪೇ ಸ್ವಲ್ಪ ನಮಗೆ ನೆಮ್ಮದಿ ಕೊಡಿ ರಾಯರೇ ನಾವು ಹುಟ್ಟಿದಾಗಿನಿಂದ ಇವತ್ತಿನವರೆಗೂ ಬರಿ ಕಷ್ಟದಲ್ಲಿ ಬೆಳೆದಿದ್ದೇವೆ ನಮಗೆ ಸಂತೋಷ, ನೆಮ್ಮದಿ ಎನ್ನುವುದು ಏನೆಂದು ಸಹ ಗೊತ್ತಿಲ್ಲ. ಆದರೆ ನಾನು ನಿಮ್ಮ ಪೂಜೆಯನ್ನು ಮಾಡುತ್ತಿದ್ದೇನೆ ಹಾಗೂ ಮಾಡುತ್ತಲೇ ಇರುತ್ತೇನೆ ನನ್ನ ಕೊನೆಯ ದಿನಗಳವರೆಗೂ ಎಂದು ಬೇಡಿಕೊಂಡು ಅಳುತ್ತಾಳೆ. ಹಾಗೆ ಆಕೆ ಕೇವಲ ಮೂರೇ ಮೂರು ತಿಂಗಳು ಪೂಜೆ ಮಾಡುತ್ತಾಳೆ.

ಒಂದು ದಿನ ಅವಳಿಗೆ ಅವರ ಅಜ್ಜಿಯ ಮನೆಯ ಕಡೆಯಿಂದ ಕರೆ ಬರುತ್ತದೆ ಏಕೆಂದರೆ ತಂದೆ ತಾಯಿ ಇಲ್ಲದ ಮಕ್ಕಳು ಅವರ ತಾಯಿ ಇಲ್ಲದಿದ್ದರೂ ತಾಯಿಯ ಮನೆಯ ಕಡೆಯಲ್ಲಿ ಸ್ವಲ್ಪ ಆಸ್ತಿಗಳು ಇರುತ್ತದೆ. ಆ ಆಸ್ತಿಗಳ ಬಗ್ಗೆ ಇವರಿಗೂ ಸಹ ಅಷ್ಟೊಂದು ಆಸಕ್ತಿ ಇರುವುದಿಲ್ಲ ಹಾಗೂ ಅವರು ಸಹ ಆಸ್ತಿ ಕೊಡುವುದರ ಬಗ್ಗೆ ಏನು ಮಾತನಾಡುವುದಿಲ್ಲ ಆದರೆ ಒಂದು ಬಾರಿ ಕರೆ ಮಾಡಿ ಆಸ್ತಿಯನ್ನು ಪಾಲುವನ್ನು ಮಾಡುತ್ತಿದ್ದೇವೆ ನೀವು ಬಂದು ಒಂದು ಸಹಿಯನ್ನು ಮಾಡಿದರೆ ನಿಮ್ಮ ಪಾಲಿನ ಆಸ್ತಿ ನಿಮಗೆ ನೀಡುತ್ತೇವೆ ಎಂದು ಹೇಳುತ್ತಾರೆ.

ಆ ವಿಷಯನ ಕೇಳಿದ ತಕ್ಷಣ ಆಕೆ ಕಣ್ಣಲ್ಲಿ ನೀರು ಸುರಿಯಲಾರಂಭಿಸುತ್ತದೆ. ಸಂತೋಷಕ್ಕೆ ಏನು ಹೇಳಬೇಕು ಎಂದು ತಿಳಿಯುವುದಿಲ್ಲ ಅದಾದ ಬಳಿಕ ಆಸ್ತಿ ಪಾಲಾಗಿ ಬಹಳಷ್ಟು ಹಣ ಅವರಿಗೆ ಬರುತ್ತದೆ ಆದರೆ ಜೀವನ ಮಾಡಲು ಒಂದು ಹೊತ್ತು ಊಟ ಮಾಡಲು ಕಷ್ಟ ಪಡುತ್ತಿದ್ದ ಹೆಣ್ಣು ಮಗಳು ಹಾಗೂ ಅವರ ಅಣ್ಣ ತಮ್ಮಂದಿರು ತಾವು ಬೆಂಗಳೂರಿನಂತಹ ಒಂದು ಊರಲ್ಲಿ ತಮ್ಮದೇ ಆದ ಒಂದು ಮನೆಯನ್ನು ತೆಗೆದುಕೊಂಡು ಜೀವನವನ್ನು ಸಾಗಿಸುತ್ತಾರೆ.

ಇಂತಹ ಅದ್ಭುತ ಪವಾಡ ಕೇವಲ ಶ್ರೀರಾಯರಿಂದ ಮಾತ್ರ ಸಾಧ್ಯ. ಏಕೆಂದರೆ ಎಷ್ಟು ಕಷ್ಟದಲ್ಲಿ ಬೆಳೆಯುತ್ತಿದ್ದ ಹೆಣ್ಣುಮಗಳು ಅವಳ ಒಂದೆ ಒಂದು ಪ್ರಾರ್ಥನೆಗೆ ರಾಯರು ಒಲಿದು ಅವರ ಒಂದು ಆರ್ಥಿಕ ಪರಿಸ್ಥಿತಿಯನ್ನು ನಿವಾರಿಸುವಂತಹ ಶಕ್ತಿ ಹಾಗೂ ಎಂದೂ ಇರದಂತ ಆಸೆ ಅವರಿಗೆ ಒಂದು ವರವಾಗಿ ಬರುತ್ತದೆ ಎಂದರೆ ನಿಜಕ್ಕೂ ರಾಯರ ಪವಾಡ.

ಸಮಸ್ಯೆ ಏನೇ ಇರಲಿ ನಮ್ಮಲ್ಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ, ನಿಮ್ಮ ಜೀವನದ ಬಹು ದೊಡ್ಡ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಕೊಡುತ್ತೇವೆ, ಪ್ರೀತಿ ಪ್ರೇಮ ವಿಚಾರ, ದಾಂಪತ್ಯ ಸಮಸ್ಯೆ, ಹಣಕಾಸಿನ ಬಾಧೆ, ಇನ್ನೂ ಹತ್ತಾರು ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿ 9880444450 ಪಂಡಿತ ಗಣೇಶ ಕುಮಾರ್ ಗುರುಜೀ ರವರು ಈಗಾಗಲೇ ಸಾವಿರಾರು ಜನರಿಗೆ ಶಾಶ್ವತ ಪರಿಹಾರ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments