ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹ ಪಡೆಯಲು ಈ ವಿಶೇಷ ಪೂಜೆ ಮಾಡಿ
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸೇವೆಯ ಮೊದಲು ಮಾಡಬೇಕಾದ ಕಾರ್ಯಗಳು ಶುದ್ಧ ಮನಸ್ಸಿನಿಂದ ಪರಿಪೂರ್ಣವಾಗಿ ರಾಯರನ್ನು ನಂಬಬೇಕು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸೇವೆಯನ್ನು ಮಾಡುವುದರಿಂದ ನಿಮಗೆ ಎಲ್ಲಾ ರೀತಿಯಲ್ಲೂ ಒಳ್ಳೆಯದಾಗುತ್ತದೆ. ನಿಮ್ಮ ಅಪೇಕ್ಷೆಗಳು ಪರಿಪೂರ್ಣವಾಗಿ ಈಡೇರುತ್ತವೆ ಅದಕ್ಕಾಗಿಯೇ ಭಕ್ತಿಯಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸೇವೆಯನ್ನು ಮಾಡಬೇಕು ರಾಯರ ಸೇವೆಯನ್ನು ಮಾಡಬೇಕಾದರೆ ಪಾಲಿಸಬೇಕಾದ ನಿಯಮಗಳು ಹೀಗಿವೆ:-
ನಿಮ್ಮ ಏನೇ ಪ್ರಶ್ನೆ ಇದ್ದರೂ ಫೋನ್ ಮಾಡಿ ಕೇಳಬಹುದು 9620569954
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸೇವೆಯನ್ನು ಮಾಡುವಾಗ ನಮ್ಮ ಹಿಂದೂ ಸನಾತನ ಸಂಸ್ಕೃತಿಗೆ ಅನುಗುಣವಾದ ಬಟ್ಟೆಯನ್ನು ಧರಿಸಿರಬೇಕು. ಸೇವಿಸಬಾರದನ್ನು, ಕುಡಿಯ ಬಾರದನ್ನು ಹಾಗೂ ಕೆಟ್ಟ ಹವ್ಯಾಸಗಳನ್ನು ದೂರ ಮಾಡಿಕೊಳ್ಳಬೇಕು.
ಐದು ದಿವಸ ನೀವು ಶ್ರೀ ರಾಘವೇಂದ್ರ ಸ್ವಾಮಿಗಳ ಸೇವೆಯನ್ನು ಮಾಡುವುದಾಗಿದ್ದಲ್ಲಿ, ಐದು ದಿವಸ ಮಧ್ಯಾಹ್ನ ಮಾತ್ರ ಊಟವನ್ನು ಮಾಡಿರಿ ರಾತ್ರಿ ಊಟವನ್ನು ಮಾಡದೆ ಉಪಹಾರವನ್ನು ಸೇವಿಸಿರಿ. ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸೇವೆಯನ್ನು ಮಾಡುವಷ್ಟು ದಿವಸ ಬೇರೆ ಬೇರೆ ಊರುಗಳಿಗೆ ಪ್ರಯಾಣವನ್ನು ಬೆಳೆಸದಿರಿ ಹಾಗೆ ಒಂದು ದಿವಸವು ಸಹ ನೀವು ಮಾಡುವ ಸೇವೆಯನ್ನು ಮಧ್ಯದಲ್ಲಿಯೇ ಬಿಡಬಾರದು.
ಹಾಗೆಯೇ ಸೂರ್ಯೋದಯಕ್ಕಿಂತ ಒಂದು ಗಂಟೆಯ ಮೊದಲೇ ನೀವು ಎದ್ದೇಳಲೇ ಬೇಕು. ಒಂದು ಬಾರಿ ಎದ್ದ ಮೇಲೆ ರಾತ್ರಿ ಎಂಟರ ತನಕ ಮಲಗಬಾರದು. ಸೂರ್ಯೋದಯಕ್ಕಿಂತ 20 ನಿಮಿಷ ಮೊದಲು ನೀವು ಸ್ನಾನ ಮಾಡಿರಬೇಕು. ಸಾಧ್ಯವಾದರೆ ರಾಯರು ಧರಿಸಿದ ನಾಮವನ್ನು ಧರಿಸುವುದು ಬಹಳ ಉತ್ತಮ.
ನಿಮ್ಮ ಏನೇ ಪ್ರಶ್ನೆ ಇದ್ದರೂ ಫೋನ್ ಮಾಡಿ ಕೇಳಬಹುದು 9620569954
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸೇವೆಯನ್ನು ಮಾಡಲು ಮನಸ್ಸನ್ನು ಶುದ್ಧ ಮಾಡಿಕೊಂಡು ಸಿದ್ಧವಾಗಿರಬೇಕು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಸೇವೆಯನ್ನು ಮಾಡುವಷ್ಟು ದಿವಸ ನಿಮ್ಮ ಕೈಲಾದಷ್ಟು ಸೇವೆಯನ್ನು ಬೇರೆಯವರಿಗೆ ಅಂದರೆ ಬಡವರಿಗೆ, ಕೈಲಾಗದ ವರಿಗೆ ಮಾಡಬೇಕು.
ದಾನ ಯಾವುದಾದರೂ ರೂಪದಲ್ಲಿ ಆಗಿರಬಹುದು ಹಣದ ರೂಪದಲ್ಲಿ, ಆಹಾರದ ರೂಪದಲ್ಲಿ, ಬಟ್ಟೆಯ ರೂಪದಲ್ಲಿ ಹೀಗೆ ನಿಮ್ಮ ಇಚ್ಛೆಗನುಸಾರವಾಗಿ ಹಾಗೂ ನಿಮ್ಮ ಕೈಲಾಗುವಂತಹ ರೀತಿಯಲ್ಲಿ ದಾನ ಧರ್ಮವನ್ನು ಮಾಡುವುದು ಒಳ್ಳೆಯದು. ದಾನ ಧರ್ಮವನ್ನು ಮಾಡುವಾಗ ಸಾಲವನ್ನು ಮಾಡಬಾರದು ಹಾಗೆಯೆ ನಿಮ್ಮ ಮನಸ್ಸಿಗೆ ಯಾವುದೇ ರೀತಿಯ ಭಾರ ಮಾಡಿಕೊಳ್ಳಬಾರದು.
ದಾನವನ್ನು ಮಾಡಿ ಆದ ನಂತರ ಏಕೆ ದಾನ ಮಾಡಿದೆ ಎಂದು ಕೊರಗಬಾರದು. ಸೇವೆ ಮಾಡುವಷ್ಟು ದಿವಸ ನಿತ್ಯವೂ ಇನ್ನೊಬ್ಬರ ಮನೆಗೆ ಊಟಕ್ಕೆ ಹೋಗಬಾರದು. ಇನ್ನೊಬ್ಬರ ಎಂಜಿಲನ್ನು ಸಹ ಸೇವಿಸಬಾರದು. ಮತ್ತೊಬ್ಬರಿಗೆ ಬಯ್ಯೋದು, ಕೆಟ್ಟ ಪದಗಳು ಬಳಕೆ ಮಾಡುವುದು, ಇನ್ನೊಬ್ಬರಿಗೆ ಹಿಂಸಿಸುವುದನ್ನು ಸರ್ವತ ಮಾಡಲೇಬಾರದು.
ಈ ಎಲ್ಲಾ ನಿಯಮಗಳನ್ನು ಪಾಲನೆ ಮಾಡಿದಾಗ ಮಾತ್ರ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸೇವೆಯನ್ನು ಮಾಡಿದರೆ ನಿಮ್ಮ ಉದ್ದೇಶವು ಸಿದ್ಧಿಯಾಗುತ್ತದೆ. ರಾಯರನ್ನು ಭಕ್ತಿಯಿಂದ ಪೂಜಿಸುವ ಎಲ್ಲಾ ಭಕ್ತರ ಚಿಂತನೆಗಳನ್ನು, ನೋವುಗಳನ್ನು, ದುಃಖಗಳನ್ನು, ಕಷ್ಟಗಳನ್ನು ರಾಯರು ಬಲ್ಲವರಾಗಿದ್ದಾರೆ.
ನಿಮ್ಮ ಏನೇ ಪ್ರಶ್ನೆ ಇದ್ದರೂ ಫೋನ್ ಮಾಡಿ ಕೇಳಬಹುದು 9620569954
ನಿಮ್ಮೆಲ್ಲರ ಕಷ್ಟಗಳಿಗೆ, ಚಿಂತನೆಗಳಿಗೆ, ನೋವುಗಳಿಗೆ, ದುಃಖಗಳಿಗೆ ಗುರು ರಾಘವೇಂದ್ರ ಸ್ವಾಮಿಗಳು ಬಹು ಬೇಗನೆ ಸದುತ್ತರವನ್ನು ದಯಪಾಲಿಸುತ್ತಾರೆ. ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಭಕ್ತರಿಗೆ ಎಲ್ಲರಿಗೂ ರಾಯರ ಆಶೀರ್ವಾದ ರಾಯರ ಅನುಗ್ರಹ ದೊರೆಯುತ್ತದೆ.